Don't Miss!
- News
Assembly Elections: ರಾಜಸ್ಥಾನದ ಪವಿತ್ರ ಅಜ್ಮೀರ್ ಷರೀಫ್ ದರ್ಗಾಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ
- Automobiles
ಭಾರತದಲ್ಲಿ ಎಲ್ಲರೂ ಕಾಯುತ್ತಿದ್ದ ಹ್ಯುಂಡೈ ಔರಾ ಫೇಸ್ಲಿಫ್ಟ್ ಬಿಡುಗಡೆ: ಎಂತಹ ವೈಶಿಷ್ಟ್ಯಗಳಿವೆ..
- Sports
IND vs NZ T20 Series: ಟಿ20 ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ ರಾಂಚಿಗೆ ಬರುವಂತೆ ಬಿಸಿಸಿಐ ಸೂಚನೆ
- Technology
ಸಾವಿರಾರು ಕೋಟಿ ಮೌಲ್ಯದ ಐಫೋನ್ ರಫ್ತು ಮಾಡಿದ ಭಾರತ; ಸ್ಯಾಮ್ಸಂಗ್ಗೆ ಹಿನ್ನಡೆ!
- Finance
ತೆರಿಗೆ ಉಳಿಸುವ ಎಫ್ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಕ್ಷಯ್ ಕುಮಾರ್ ಹಿಂದೆ ಸರಿದ 'ಹೇರಾ ಫೇರಿ 3' ಕಥೆ ಏನಾಯ್ತು?
ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಹೇರಾ ಫೇರಿ 3'. ಕಾಮಿಡಿ ಸಿನಿಮಾದ ಮೂರನೇ ಭಾಗ ಇನ್ನೇನು ಶುರುವಾಗುತ್ತೆ ಅನ್ನೋ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿಯೇ ಹರಿದಾಡಿತ್ತು. ಆದರೆ, ಇದೀಗ ಇನ್ನೂ ಕೆಲವು ತಿಂಗಳು ತಡವಾಗುತ್ತೆ ಎಂದು ಹೇಳಲಾಗುತ್ತಿದೆ.
'ಹೇರಾ ಫೇರಿ 3' ಸಿನಿಮಾದ ಶೂಟಿಂಗ್ ತಡವಾಗುತ್ತಿದೆ. ಸದ್ಯಕ್ಕೆ ಆರಂಭ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಸಿನಿಮಾದ ಆರಂಭದಲ್ಲಿಯೇ ಅಕ್ಷಯ್ ಕುಮಾರ್ 'ಹೇರಾ ಫೇರಿ 3' ಸಿನಿಮಾದಲ್ಲಿ ನಟಿಸುತ್ತಿಲ್ಲ ಅಂತ ಹೇಳಿಕೆ ನೀಡಿದ್ದರು. ಸಿನಿಮಾದ ಸ್ಕ್ರೀಪ್ಟ್ ತಮಗೆ ಇಷ್ಟ ಆಗಿಲ್ಲ. ಈ ಕಾರಣಕ್ಕೆ 'ಹೇರಾ ಫೇರಿ 3' ಸಿನಿಮಾ ನಟಿಸುವುದಿಲ್ಲ ಎಂದು ಹೇಳಿದ್ದರು. ಇಲ್ಲಿಂದ ಸಿನಿಮಾ ಸೆಟ್ಟೇರುವುದು ಕೊಂಚ ತಡವಾಗುತ್ತಿದೆ.
ಸದ್ಯ ಬಾಲಿವುಡ್‌ನಲ್ಲಿ ಓಡಾಡುತ್ತಿರುವ ಮಾಹಿತಿ ಪ್ರಕಾರ, 'ಹೇರಾ ಫೇರಿ 3' ಸಿನಿಮಾ 2023 ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರಲಿದೆ. 'ಭೂಲ್ ಭುಲಯ್ಯ 2' ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ಅನೀಜ್ ಬಾಜ್ಮಿ 'ಹೇರಾ ಫೇರಿ 3'ಗೆ ಆಕ್ಷನ್ ಕಟ್ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಸಿನಿಮಾದಿಂದ ಹಿಂದೆ ಸರಿದ ಬಳಿಕ ಸುನೀಲ್ ಶೆಟ್ಟಿ, ಪರೇಶ್ ರಾವಲ್ ಹಾಗೂ ಕಾರ್ತಿಕ್ ಆರ್ಯನ್ ಆಯ್ಕೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ಇನ್ನೊಂದು ಕಡೆ ಉಳಿದ ಪಾತ್ರಗಳನ್ನು ತಡವಾಗಿ ಆಯ್ಕೆ ಮಾಡಲಾಗುತ್ತೆ ಎನ್ನಲಾಗಿದೆ.

ಇನ್ನೊಂದು ಕಡೆ ನಿರ್ದೇಶಕ ಅನೀಜ್ ಬಾಜ್ಮಿ " ನಾನು ಇನ್ನೂ ಸಿನಿಮಾಗೆ ಸಹಿ ಹಾಕಿಲ್ಲ. ಇನ್ನೂ ಸಿನಿಮಾ ಒಪ್ಪಿಕೊಳ್ಳಬೇಕಾ ಅನ್ನುವುದರ ಬಗ್ಗೆನೇ ಚರ್ಚೆ ನಡೆಯುತ್ತಿದೆ. ನಾನು ಎಸ್ ಎಂದು ಹೇಳುವವರೆಗೂ ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ಎನ್ನುವ ಸುದ್ದಿ ಓಡಾಡುತ್ತಲೇ ಇರುತ್ತೆ ಎಂದಿದ್ದಾರೆ. ಮೂಲಗಳ ಪ್ರಕಾರ 2023 ಅಕ್ಟೋಬರ್‌ನಲ್ಲಿ 'ಹೇರಾ ಫೇರಿ 3' ಶೂಟಿಂಗ್ ಮುಂಬೈನಲ್ಲಿ ಆರಂಭ ಆಗಲಿದೆ.