ದುಬೈನಲ್ಲಿ ಭಿಕ್ಷುಕಿಯಂತೆ ಬದುಕುತ್ತಿರುವ ರಾಖಿ ಸಾವಂತ್...!

ರಾಖಿ ಸಾವಂತ್ ಗೊತ್ತಲ್ವಾ ..? ಒಂದ್ಕಾಲದಲ್ಲಿ ತನ್ನ ಅಂದ ಚೆಂದ ರೂಪದಿಂದ ಎಲ್ಲರನ್ನು ಸೆಳೆದ ಸುಂದರಿ. ಪರದೇಸಿಯಾ ಯೇ ಸಚ್ ಹೈ ಪಿಯಾ ಎಂದು ಕುಣಿದಾಗ ಸುಪ್ತವಾಗಿದ್ದ ಪ್ರಜ್ಞೆಯೊಂದು ಹೆಡೆ ಬಿಚ್ಚಿತ್ತು. ಕಂಪ್ಯೂಟರ್ ಹ್ಯಾಂಗ್ ಆಗಿ ಶಟ್‌ಡೌನ್ ಆಗುವ ಹಂತಕ್ಕೆ ಬರುತ್ತಿತ್ತು.

ಆದರೆ ದುರಾದೃಷ್ಟ ಸಿಕ್ಕ ಈ ಜನಪ್ರಿಯತೆಯಿಂದ ರಾಖಿ ಸಾವಂತ್ ಮೈ ಮರೆತರು. ಬಾಲಿವುಡ್ ಪಾಲಿಗೆ ದಾರಿ ತಪ್ಪಿದ ಮಗಳಾದರು. ಇಲ್ಲಿಂದಾಚೆ ಕೇವಲ ರಂಪ ರಾಮಾಯಣದಿಂದ ಸದ್ದು ಮಾಡುತ್ತಾ ಬಂದ ರಾಖಿ ಸಾವಂತ್, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಲೆಂದೇ ಅಭಿನಯಿಸಲು ಶುರು ಮಾಡಿದರು. ವಿವಾದಗಳ ಹೊರತಾಗಿ ಬದುಕುವ ಹಂಬಲ ಇಲ್ಲದವರು ಎನ್ನುವ ಠೀಕೆಗೆ ಕೂಡ ಗುರಿಯಾದರು. ಆದರೂ ರಾಖಿ ಸಾವಂತ್ ಅವತ್ತು ಬದಲಾಗಲಿಲ್ಲ. ಇವತ್ತು ಕೂಡ ತಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಮನಸ್ಸು ಮಾಡಲಿಲ್ಲ. ಬದಲಿಗೆ ಪ್ರಚಾರದ ಹುಚ್ಚಿಗೆ ಬಿದ್ದು ಒಂದು ಹಂತಕ್ಕೆ ವ್ಯವಸ್ಥಿತವಾಗಿದ್ದ ತಮ್ಮ ಬದುಕನ್ನು ಅವ್ಯವಸ್ಥೆಯ ಗಟಾರಿನಲ್ಲಿ ಪಾರ್ಕಿಂಗ್ ಮಾಡಿದರು.

Here In Dubai I am living Like Beggar Says Rakhi Sawant Amid Fears of Arrest

ಇಂಥಾ ರಾಖಿ ಸಾವಂತ್ ಈಗ ದುಬೈನಲ್ಲಿ ಭಿಕ್ಷುಕಿಯಂತೆ ಬದುಕುತ್ತಿದ್ದಾರೆ. ಖುದ್ದು ಈ ಕಹಿ ಸತ್ಯವನ್ನು ಹೇಳಿ ಕಣ್ಣೀರು ಹಾಕಿದ್ದಾರೆ. ಹೌದು, ಅಸಲಿಗೆ ರಾಖಿ ಸಾವಂತ್ 2022ರಲ್ಲಿ ಆದಿಲ್ ದುರಾನಿ ಜೊತೆ ಮದ್ವೆಯಾಗಿದ್ದರು. ಆದರೆ ಈ ಮದುವೆ ಒಂದು ತಿಂಗಳು ಕೂಡ ಉಳಿಯಲಿಲ್ಲ. ಆದಿಲ್ ಅವರಿಂದ ದೂರವಾದ ನಂತರ ತಿರುಗಿ ಬಿದ್ದ ರಾಖಿ ಹಾದಿ ಬೀದಿಯಲ್ಲಿ ರಂಪ ರಾಮಾಯಣ ಮಾಡಿದರು. ಇದು ಸಾಲದು ಎಂಬಂತೆ ವಾಹಿನಿಯೊಂದರಲ್ಲಿ ಆದಿಲ್ ಅವರ ಅಶ್ಲೀಲ ವಿಡಿಯೋವನ್ನು ಅತ್ಯಂತ ಹೆಮ್ಮೆಯಿಂದ ಹಂಚಿಕೊಂಡಿದ್ದರು. ಈ ಕಾರಣಕ್ಕೆ ಕೆರಳಿ ಕೆಂಡ ವಾಗಿದ್ದ ಆದಿಲ್, ತಮ್ಮ ವಿಡಿಯೋಗಳನ್ನ ರಾಖಿ ಸಾವಂತ್ ಊರ್ ತುಂಬಾ ಹಂಚುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಪ್ರಕರಣವನ್ನೂ ದಾಖಲಿಸಿದ್ದರು.

ಆದಿಲ್ ದೂರಿನ ಮೇರೆಗೆ ರಾಖಿ ವಿರುದ್ಧ ಐಪಿಸಿ ಸೆಕ್ಷನ್ 500, 34 ಮತ್ತು ಸೆಕ್ಷನ್ 67ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಪೊಲೀಸರು. ಆದಿಲ್ ನ ಈ ಅನಿರೀಕ್ಷಿತ ನಡೆಯಿಂದ ಹೈರಾಣಾಗಿದ್ದ ರಾಖಿ ಸಾವಂತ್, ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನ ಸಲ್ಲಿಸಿದ್ದರು. ಆದಿಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಂತೆ ಕೇಳಿದ್ದರು. ಆದರೆ ರಾಖಿ ದುರಾದೃ‍ಷ್ಟ.. ಬಾಂಬೆ ಹೈಕೋರ್ಟ್ ರಾಖಿ ಸಾವಂತ್ ಮನವಿಯನ್ನು ವಜಾಗೊಳಿಸಿತ್ತು.ಆದರೂ ನಂಬಿಕೆಯನ್ನ ಕಳೆದುಕೊಳ್ಳದ ರಾಖಿ ಸಾವಂತ್ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಿದ್ದರು. ಅರ್ಜಿಯಲ್ಲಿ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ರಾಖಿ ಹೇಳಿದ್ದಳು. ಅಷ್ಟೇ ಅಲ್ಲ, ಆದಿಲ್ ತಾನು ಹಂಚಿಕೊಂಡ ವೀಡಿಯೊಗಳನ್ನು ಶೂಟ್ ಮಾಡಿದ್ದಾನೆ. ಆದ್ದರಿಂದ ಅವನು ತನ್ನಂತೆಯೇ ಅಪರಾಧಿ ಎಂದಿದ್ದರು ರಾಖಿ ಸಾವಂತ್. ಇನ್ನೂ ಈ ವೀಡಿಯೋಗಳು ಅಶ್ಲೀಲವಲ್ಲ ಆದರೆ ಆಕ್ಷೇಪಾರ್ಹವಾಗಿವೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದರು.

Here In Dubai I am living Like Beggar Says Rakhi Sawant Amid Fears of Arrest

ಆದರೆ ಆ ನಂತರ ರಾಖಿ ಸಾವಂತ್ ಗೆ ಸುಪ್ರೀಂ ಕೋರ್ಟ್ ನಲ್ಲಿಯೂ ಮುಖಭಂಗವಾಗಿತ್ತು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾದ ಕಾರಣ ಸುಪ್ರೀಂ ಕೋರ್ಟ್ ರಾಖಿ ಸಾವಂತ್ ಗೆ ತಪರಾಕಿಯನ್ನೂ ಹಾಕಿತ್ತು. ಇಷ್ಟೇ ಅಲ್ಲ 4 ವಾರಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಶರಣಾಗುವಂತೆ ರಾಖಿ ಸಾವಂತ್‌ಗೆ ಸುಪ್ರೀಂ ಕೋರ್ಟ್‌ ಸೂಚನೆಯನ್ನೂ ನೀಡಿತ್ತು.

ಹೀಗೆ ಬಂಧನದ ಭೀತಿಯಿಂದ ನರಳಲು ಶುರು ಮಾಡಿದ ರಾಖಿ ಸಾವಂತ್ ಆ ನಂತರ ದುಬೈ ವಿಮಾನವನ್ನೇರಿದರು. ಖಾಕಿ ಪಡೆಯಿಂದ ತಪ್ಪಿಸಿಕೊಂಡು ಓಡಿ ಹೋದರು. ಇಂಥಾ ರಾಖಿ ಸಾವಂತ್ ಈಗ ದುಬೈನಲ್ಲಿ ಕುಂತು ಕಣ್ಣೀರು ಹಾಕಿದ್ದಾರೆ. ನಾನು ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡುವ ಸ್ಥಿತಿ ಉಂಟಾಗಿದೆ ಎಂದಿರವ ರಾಖಿ ಸಾವಂತ್ ಭಾರತದ ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ. ನನಗೆ ಶಿಕ್ಷೆ ಆಗುವುದಿಲ್ಲ ಯಾಕೆಂದರೆ ನಾನ್ಯಾವ ತಪ್ಪನ್ನು ಮಾಡಿಲ್ಲ ಎಂದಿರುವ ರಾಖಿ ಸಾವಂತ್ ಕೋರ್ಟ್ ಆದೇಶದಿಂದ ನಾನು ಅಲೆಯುವಂತಾಗಿದೆ ಎಂದು ಹೇಳಿದ್ದಾರೆ. ನನ್ನ ಪಾಡು ಅಕ್ಷರಶಃ ಭಿಕ್ಷುಕಿಯಂತೆ ಆಗಿದೆ ಎಂದು ಬಿಕ್ಕಿದ್ದಾರೆ.

ಇನ್ನೂ ಇದೇ ಸಂದರ್ಶನದಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಹೆಸರನ್ನು ಪ್ರಸ್ತಾಪ ಮಾಡಿರುವ ರಾಖಿ ಸಾವಂತ್, ಶಾರುಖ್​ ಖಾನ್​, ಸಲ್ಮಾನ್​ ಖಾನ್ ಸೇರಿದಂತೆ ಸ್ಟಾರ್​ ನಟರು ಒಂದು ಕ್ಷಣದಲ್ಲಿ ನನಗೆ ಬೇಲ್​ ಕೊಡಿಸುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ. ಪದೇ ಪದೇ ಅವರ ಬಳಿ ಎಷ್ಟು ಅಂತ ಸಹಾಯ ಕೇಳುವುದು ಹೀಗಾಗಿ ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X