Bollywood Actress Maldives Trip : ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದ ಬಾಲಿವುಡ್ ತಾರೆಯರು

ಬಾಲಿವುಡ್ ನಟಿಯರು ಸೇರಿದಂತೆ ಅದೆಷ್ಟೊ ತಾರೆಯರು, ಸೆಲೆಬ್ರೆಟಿಗಳು, ಮಕ್ಕಳು ಶೂಟಿಂಗ್‌ನಿಂದ ಬಿಡುವು ಪಡೆದು ವಿದೇಶಕ್ಕೆ ಹಾರುತ್ತಾರೆ. ಇದು ಸಾಮಾನ್ಯ ಕೂಡ ಹೌದು.

ಬಾಲಿವುಡ್ ತಾರೆಯರು ಮಾಲ್ಡೀವ್ಸ್ ಪ್ರವಾಸವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅಂತೆಯೇ ವರ್ಷಕ್ಕೆ ಒಂದೆರೆಡು ಬಾರಿಯಾದರೂ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ರಜೆಯನ್ನು ಕಳೆದು ಖುಷಿ ಪಡುತ್ತಾರೆ.

ಅಂತೆಯೇ ಇದೀಗ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಮಾಲ್ಡೀವ್ಸ್ ಪ್ರವಾಸ ಕೈಗೊಂಡು ಇದೀಗ ವಾಪಾಸ್ ಆಗಿದ್ದಾರೆ. ಅವರು ಯಾರು? ಅವರ ಮಾಲ್ಡೀವ್ಸ್ ಪ್ರವಾಸ ಹೇಗಿತ್ತು? ಅನ್ನೋ ಅಪ್‌ಡೇಟ್ ಮುಂದೆ ಇದೆ.

ಕ್ಯಾಮರಾಗೆ ತಮನ್ನಾ ಭಾಟಿಯಾ ಪೋಸ್

ಕ್ಯಾಮರಾಗೆ ತಮನ್ನಾ ಭಾಟಿಯಾ ಪೋಸ್

ನಟಿ ತಮನ್ನಾ ಭಾಟಿಯಾ ಕಳೆದ ವಾರಷ್ಟೆ ಮಾಲ್ಡೀವ್ಸ್‌ಗೆ ಹಾರಿದ್ರು. ತನ್ನ ಸ್ನೇಹಿತೆ ಜೊತೆ ಮಾಲ್ಡೀವ್ಸ್ ಪ್ರವಾಸ ಹಮ್ಮಿಕೊಂಡಿದ್ದ ತಮನ್ನಾ ಸಖತ್ ಎಂಜಾಯ್ ಮಾಡಿದ್ದಾರೆ. ಐದು ದಿನಗಳ ಮಾಲ್ಡೀವ್ಸ್ ಪ್ರವಾಸದಲ್ಲಿದ್ದ ತಮನ್ನಾ ಭಾಟಿಯಾ ಇಂದು ಮುಂಬೈಗೆ ಬಂದು ಇಳಿದಿದ್ದಾರೆ. ಅಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿರುವ ತಮನ್ನಾ ಭಾಟಿಯಾ ಪೋಸ್ ಕೂಡ ನೀಡಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ನಂತರ ತಮನ್ನಾ ಭಾಟಿಯಾ ಸಖತ್ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದರು.

ಆಲಿಯಾ ಬಿಕಿನಿ ಫೋಟೊಗಳು ಸಖತ್ ವೈರಲ್

ಆಲಿಯಾ ಬಿಕಿನಿ ಫೋಟೊಗಳು ಸಖತ್ ವೈರಲ್

ಇನ್ನು ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ತನ್ನ ಬರ್ತ್‌ಡೇಯನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಮಾರ್ಚ್ 15ರಂದು ಆಲಿಯಾ ಭಟ್ ಹುಟ್ಟಿದ ದಿನವಾಗಿದ್ದು ಅದನ್ನು ಆಚರಿಸಲು ಕುಟುಂಬ ಸಮೇತರಾಗಿ ಆಲಿಯಾ ಮಾಲ್ಡೀವ್ಸ್‌ಗೆ ಹಾರಿದ್ದರು. ಮಾಲ್ಡೀವ್ಸ್‌ನಲ್ಲಿ ತೆಗೆದ ಹಲವು ಕಲರ್‌ಫುಲ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಆಲಿಯಾ ಬಿಕಿನಿ ಫೋಟೊಗಳು ಸಖತ್ ವೈರಲ್ ಆಗಿದ್ದವು. ದುಬಾರಿ ಬಿಕಿನಿಯಲ್ಲಿ ಆಲಿಯಾ ಮಾಲ್ಡೀವ್ಸ್‌ನಲ್ಲಿ ಮಿಂಚಿದ್ದರು. ಆಲಿಯಾ ಕೂಡ ಮಾಲ್ಟೀವ್ಸ್ ಪ್ರವಾಸ ಹೋಗಿ ಎರಡು ದಿನದ ಹಿಂದಷ್ಟೆ ಮುಂಬೈಗೆ ಮರಳಿದ್ದಾರೆ.

ಬಿಕಿನಿ ತೊಟ್ಟು ಪೋಸ್ ಕೊಟ್ಟ ಕರೀನಾ

ಬಿಕಿನಿ ತೊಟ್ಟು ಪೋಸ್ ಕೊಟ್ಟ ಕರೀನಾ

ಬಾಲಿವುಡ್ ಬೇಬೊ ಕರೀನಾ ಕಪೂರ್ ಕೂಡ ಕಳೆದ ವಾರ ತಮ್ಮ ಪ್ರೈವೆಟ್ ಜೆಟ್‌ನಲ್ಲಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದರು. ತನ್ನ ಸಹೋದರಿ ಕರಿಶ್ಮಾ ಕಪೂರ್ ಮತ್ತು ತನ್ನಿಬ್ಬರು ಮಕ್ಕಳೊಂದಿಗೆ ಮಾಲ್ಡೀವ್ಸ್ ಹಾರಿದ್ದ ಕರೀನಾ ಅಲ್ಲಿನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತಾಯಿ ಮತ್ತು ಮಕ್ಕಳ ಮಾಲ್ಡೀವ್ಸ್ ಡೈರಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಮಾಲ್ಡೀವ್ಸ್‌ಗೆ ಹೋದಾಗಲೆಲ್ಲಾ ಬಿಕಿನಿ ತೊಟ್ಟು ಪೋಸ್ ಕೊಡುವ ಕರೀನಾ ಈ ಬಾರಿಯೂ ಅದನ್ನೂ ಮಿಸ್ ಮಾಡಿಲ್ಲ.

ಮಾಲ್ಡೀವ್ಸ್ ಪ್ರವಾಸ ಮಾಡ್ತಾರೆ ಬಾಲಿವುಡ್ ನಟಿಯರು

ಮಾಲ್ಡೀವ್ಸ್ ಪ್ರವಾಸ ಮಾಡ್ತಾರೆ ಬಾಲಿವುಡ್ ನಟಿಯರು

ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಾಲ್ಡೀವ್ಸ್ ಬಾಲಿವುಡ್ ತಾರೆಯರಿಗೆ ತುಂಬ ನೆಚ್ಚಿನ ತಾಣವಾಗಿದೆ. ಪದೇ ಪದೇ, ನಟ-ನಟಿಯರು ಹೆಚ್ಚಾಗಿ ಈ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುತ್ತಾರೆ. ಹಾಗೇ ತಮ್ಮ ರಜಾ ದಿವನ್ನು ಸಖತ್ ಎಂಜಾಯ್ ಮಾಡುತ್ತಾರೆ. ಇತ್ತೀಚೆಗೆ ಬಾಲಿವುಡ್‌ನ ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಜಾನ್ಹವಿ ಕಪೂರ್‌ನಿಂದ ಹಿಡಿದು ಅನನ್ಯ ಪಾಂಡೆ, ಕಿಯಾರಾ ಅಡ್ವಾಣಿ, ಸಾರಾ ಅಲಿ ಖಾನ್‌ವರೆಗೆ ಬಹುತೇಕ ಬಾಲಿವುಡ್ ತಾರೆಯರು ಮಾಲ್ಡೀವ್ಸ್ ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ.

More from Filmibeat

English summary
Here is Bollywood actress Kareena Kapoor, Alia Bhatt Tamannah Bhatia Maldives trip details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X