ಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ

ಡಾ ರಾಜ್‌ಕುಮಾರ್ ಅವರ ಹೆಸರು ಮುತ್ತುರಾಜ ಎಂದಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗಂತಿ. ವಿಷ್ಣುವರ್ಧನ್ ಹೆಸರು ಸಂಪತ್ ಕುಮಾರ್, ಅಂಬರೀಶ್ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾತ್ ಎಂದಾಗಿತ್ತು.

ಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ

ಸಿನಿಮಾ ತಾರೆಯರಿಗೆ ಹೆಸರು ಬಹಳ ಮುಖ್ಯ. ಕರೆಯಲು ಸುಲಭವಾಗಿದ್ದು, ಜನರಿಗೆ ಹೆಚ್ಚು ಸಮಯ ನೆನಪುಳಿಯುವಂಥಹಾ, ಭಿನ್ನವಾಗಿರುವ ಹೆಸರನ್ನು ಇಟ್ಟುಕೊಂಡಿರುತ್ತಾರೆ.

ಬಹುತೇಕ ನಟ-ನಟಿಯರ ನಿಜವಾದ ಹೆಸರು ಬೇರೆಯದ್ದೇ ಇರುತ್ತದೆ, ಸಿನಿಮಾಕ್ಕಾಗಿ ಬೇರೆ ಹೆಸರು ಇಟ್ಟುಕೊಂಡಿರುತ್ತಾರೆ.

ಡಾ ರಾಜ್‌ಕುಮಾರ್ ಅವರ ಹೆಸರು ಮುತ್ತುರಾಜ ಎಂದಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗಂತಿ. ವಿಷ್ಣುವರ್ಧನ್ ಹೆಸರು ಸಂಪತ್ ಕುಮಾರ್, ಅಂಬರೀಶ್ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾತ್ ಎಂದಾಗಿತ್ತು. ಕನ್ನಡದ ನಟ-ನಟಿಯರಂತೆ ಹಿಂದಿ ನಟ-ನಟಿಯರಿಗೂ ನಿಜ ಹೆಸರು ಬೇರೆಯದ್ದೇ ಇದೆ, ಬಾಲಿವುಡ್‌ನ ಕೆಲವು ಸ್ಟಾರ್ ನಟ-ನಟಿಯರ ನಿಜ ನಾಮಧೇಯ ಏನಾಗಿತ್ತು ಇಲ್ಲಿ ತಿಳಿಯಿರಿ.

ಅಕ್ಷಯ್ ಕುಮಾರ್ ನಿಜ ಹೆಸರೇನು?

ಅಕ್ಷಯ್ ಕುಮಾರ್ ನಿಜ ಹೆಸರೇನು?

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಹೆಸರು ಯಾರಿಗೆ ಗೊತ್ತಿಲ್ಲ ಆದರೆ ಅವರ ನಿಜವಾದ ಹೆಸರು ಬೇರೆಯದ್ದೇ ಇದೆ. ಅಕ್ಷಯ್ ಕುಮಾರ್ ನಿಜವಾದ ಹೆಸರು ರಾಜೀವ್ ಹರಿ ಓಂ ಭಾಟಿಯಾ. ಮಹೇಶ್ ಭಟ್ ನಿರ್ದೇಶನದ 'ಆಜ್' ಹೆಸರಿನ ಸಿನಿಮಾದಲ್ಲಿ ಮಾರ್ಷಲ್ ಆರ್ಟ್ ಕಲಾವಿದನ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು ಅಕ್ಷಯ್. ಅವರು ನಟಿಸಿದ ಪಾತ್ರದ ಹೆಸರು ಅಕ್ಷಯ್ ಎಂದಿತ್ತು. ಹಾಗಾಗಿ ಅದೇ ಹೆಸರನ್ನು ತನ್ನ ಸ್ಕ್ರೀನ್ ನೇಮ್ ಆಗಿ ಇರಿಸಿಕೊಂಡರು.

ನಟಿ ಟಬು ಹೆಸರೇನು?

ನಟಿ ಟಬು ಹೆಸರೇನು?

ನಟಿ ಟಬು ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಬಹಳ ಜನಪ್ರಿಯರು. ಇವರದ್ದು ಬಹಳ ಭಿನ್ನವಾದ ಹೆಸರು. ಆದರೆ ಟಬು ಎನ್ನುವುದು ಅವರ ನಿಜವಾದ ಹೆಸರಲ್ಲ. ಟಬು ನಿಜವಾದ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಅದನ್ನು ಚಿಕ್ಕದಾಗಿಸಿ ತಬು ಎಂದು ಇಟ್ಟುಕೊಂಡರು ಆದರೆ ಹೆಚ್ಚಿನ ಜನ ಅವರನ್ನು ಕರೆಯುವುದು ಟಬು ಎಂದೇ.

ಟೈಗರ್ ಶ್ರಾಫ್ ಎಂಬುದು ಅವರ ನಿಜ ಹೆಸರೇ?

ಟೈಗರ್ ಶ್ರಾಫ್ ಎಂಬುದು ಅವರ ನಿಜ ಹೆಸರೇ?

ಬಾಲಿವುಡ್‌ನ ಭರವಸೆಯ ಮಾಸ್ ಯುವ ನಟ ಟೈಗರ್ ಶ್ರಾಫ್. ಇವರೇನು ಪ್ರಾಣಿಯ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಆಶ್ಚರ್ಯ ಪಡುವವರೇ ಹೆಚ್ಚು. ಆದರೆ ಇದು ಅವರ ನಿಜವಾದ ಹೆಸರಲ್ಲ, ಟೈಗರ್ ಶ್ರಾಫ್ ನಿಜವಾದ ಹೆಸರು ಜೈ ಹೇಮಂತ್ ಶ್ರಾಫ್. ಈ ನಟ ಸಣ್ಣವನಿದ್ದಾಗ ಎಲ್ಲರನ್ನೂ ಕಚ್ಚುತ್ತಿದ್ದರಂತೆ ಹಾಗಾಗಿ ಟೈಗರ್ ಎಂಬ ಅಡ್ಡ ಹೆಸರು ಬಿತ್ತಂತೆ. ಈಗ ಅದೇ ನಿಜವಾದ ಹೆಸರಾಗಿಬಿಟ್ಟಿದೆ.

ಶಿಲ್ಪಾ ಶೆಟ್ಟಿಯ ಹೆಸರೇನು ಗೊತ್ತೆ?

ಶಿಲ್ಪಾ ಶೆಟ್ಟಿಯ ಹೆಸರೇನು ಗೊತ್ತೆ?

ಕರ್ನಾಟಕ ಮೂಲದ ಶಿಲ್ಪಾ ಶೆಟ್ಟಿ ಸಹ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯ ನಿಜವಾದ ಹೆಸರು ಅಶ್ವಿನಿ ಶೆಟ್ಟಿ. ಶಿಲ್ಪಾ ಶೆಟ್ಟಿಯ ತಾಯಿ ಸುನಂಧಾ ಶೆಟ್ಟಿ ಸ್ವತಃ ಜ್ಯೋತಿಷಿ ಆಗಿದ್ದು ಅವರೇ ಅಶ್ವಿನಿ ಶೆಟ್ಟಿ ಎಂದಿದ್ದ ಮಗಳ ಹೆಸರನ್ನು ಶಿಲ್ಪಾ ಶೆಟ್ಟಿ ಎಂದು ಬದಲಾಯಿಸಿದರಂತೆ. ಆಗಿನಿಂದ ಶಿಲ್ಪಾ ಶೆಟ್ಟಿಗೆ ಯಶಸ್ಸೋ-ಯಶಸ್ಸು.

ಕಿಯಾರಾ ಅಡ್ವಾಣಿ ಹೆಸರೇನು?

ಕಿಯಾರಾ ಅಡ್ವಾಣಿ ಹೆಸರೇನು?

ಬಾಲಿವುಡ್‌ನ ಬ್ಯುಸಿ ನಟಿಯರಲ್ಲಿ ಕಿಯಾರಾ ಅಡ್ವಾಣಿ ಸಹ ಒಬ್ಬರು. ಈ ಶ್ವೇತ ಸುಂದರಿಯ ಹೆಸರು ಬಹಳ ಭಿನ್ನವಾಗಿದೆ. ಆದರೆ ಇದು ಅವರ ನಿಜವಾದ ಹೆಸರಲ್ಲ. ಕಿಯಾರಾ ಅಡ್ವಾಣಿಯ ನಿಜ ಹೆಸರು ಆಲಿಯಾ ಅಡ್ವಾಣಿ. ಆದರೆ ಅದಾಗಲೆ ಆಲಿಯಾ ಭಟ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಕಾರಣ ಹೆಸರು ಬದಲಾಯಿಸಿಕೊಳ್ಳಲು ಸ್ವತಃ ಸಲ್ಮಾನ್ ಖಾನ್ ಸಲಹೆ ನೀಡಿದ್ದರಂತೆ. ಅಂತೆಯೇ ಆಲಿಯಾ ಹೆಸರು ಬದಲಾಗಿ ಕಿಯಾರಾ ಆಯ್ತು.

ಅಜಯ್ ದೇವಗನ್ ಹೆಸರೇನು?

ಅಜಯ್ ದೇವಗನ್ ಹೆಸರೇನು?

ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಸುದೀಪ್‌ರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ದಕ್ಷಿಣ ಭಾರತದವರಿಂದ ಟ್ರೋಲ್‌ಗೆ ಒಳಗಾದ ಅಜಯ್ ದೇವಗನ್‌ರ ನಿಜ ಹೆಸರು ವಿಶಾಲ್ ವೀರು ದೇವಗನ್. ಸಿನಿಮಾಕ್ಕೆ ಎಂಟ್ರಿ ಕೊಡಲೆಂದೇ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇನ್ನೂ ಹಲವಾರು ಮಂದಿ ಬಾಲಿವುಡ್ ನಟ-ನಟಿಯರು ತಮ್ಮ ನಿಜ ಹೆಸರುಗಳನ್ನು ಸಿನಿಮಾಕ್ಕಾಗಿ ಬದಲಾಯಿಸಿಕೊಂಡಿದ್ದಾರೆ.

More from Filmibeat

English summary
Here is real names of some Bollywood stars. Akshay Kumar to Kiara Advani. Many stars changed their name for movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X