ದೀಪಿಕಾಗೆ ಹುಟ್ಟುಹಬ್ಬದ ಸಂಭ್ರಮ: ಅತೀ ಹೆಚ್ಚು ಕಲೆಕ್ಷನ್ ಮಾಡಿದ ದೀಪಿಕಾ ನಟನೆಯ ಸಿನಿಮಾಗಳಿವು

ಬಾಲಿವುಡ್ ನ ಬ್ಯೂಟಿಫುಲ್ ಅಂಡ್ ಟ್ಯಾಲೆಂಟೆಡ್ ನಟಿ ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35 ವಸಂತಕ್ಕೆ ಕಾಲಿಟ್ಟ ನಟಿ ದೀಪಿಕಾ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ದೀಪಿಕಾ ಮತ್ತು ರಣ್ವೀರ್ ದಂಪತಿ ಹೊಸ ವರ್ಷವನ್ನು ಜೈಪುರದಲ್ಲಿ ಆಚರಣೆ ಮಾಡಿದ್ದರು. ಇದೀಗ ಜನ್ಮದಿನಾಚರಣೆಯನ್ನು ಅಲ್ಲೇ ಸಂಭ್ರಮಿಸಿದ್ದಾರೆ.

ಕನ್ನಡ ಸಿನಿಮಾದಿಂದ ಪ್ರಾರಂಭವಾದ ದೀಪಿಕಾ ಸಿನಿ ಪಯಣ ಹಾಲಿವುಡ್ ಸಿನಿ ಜತ್ತಿನವರೆಗೂ ಸಾಗಿದೆ. ಇಂದು ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತ, ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ನಂತರ ಏಕಾಏಕಿ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡ ದೀಪಿಕಾ ನಂತರ ಮುಟ್ಟಿದ್ದೆಲ್ಲ ಚಿನ್ನ.

ನಿರ್ಮಾಪಕರ ಪಾಲಿನ ಅದೃಷ್ಟ ದೇವತೆ ಆಗಿರುವ ದೀಪಿಕಾ ಅಭಿನಯದ ಬಹುತೇಕ ಚಿತ್ರಗಳು ಸೂಪರ್ ಹಿಟ್. ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದೀಪಿಕಾ ನಟನೆಯ ಸಿನಿಮಾಗಳ ಲಿಸ್ಟ್ ಹೀಗಿದೆ.

ಯೇ ಜವಾನಿ ಹೈ ದಿವಾನಿ

ಯೇ ಜವಾನಿ ಹೈ ದಿವಾನಿ

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅಭಿನಯದ ಯೇ ಜವಾನಿ ಹೈ ದಿವಾನಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ಮಾಜಿ ಪ್ರೇಮಿಗಳು ದೀಪಿಕಾ ಮತ್ತು ರಣಬೀರ್ ಇಬ್ಬರ ಯೇ ಜವಾನಿ ಹೈ ದಿವಾನಿ ಸಿನಿಮಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಈ ರೋಮ್ಯಾಂಟಿಕ್ ಸಿನಿಮಾ ಬರೋಬ್ಬರಿ 177.99 ಕೋಟಿ ಕಲೆಕ್ಷನ್ ಮಾಡಿತ್ತು. ಜೊತೆಗೆ 59ನೇ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಅತೀ ಹೆಚ್ಚು ವಿಭಾಗದಲ್ಲಿ ನಾಮ ನಿರ್ದೇಶನ ಗೊಂಡಿತ್ತು.

ಚೆನ್ನೈ ಎಕ್ಸ್ ಪ್ರೆಸ್

ಚೆನ್ನೈ ಎಕ್ಸ್ ಪ್ರೆಸ್

ದೀಪಿಕಾ ಸಿನಿ ಬದುಕಿಗೆ ತಿರುವು ನೀಡಿದ ಸಿನಿಮಾ ಚೆನ್ನೈ ಎಕ್ಸ್ ಪ್ರೆಸ್. ಈ ಸಿನಿಮಾ ಮೂಲಕ ದೀಪಿಕಾ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಜೊತೆ ಮತ್ತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಚೆನ್ನೈ ಎಕ್ಸ್ ಪ್ರೆಸ್ ಸೂಪರ್ ಹಿಟ್ ಆಗುತ್ತೆ. ಬಾಕ್ಸ್ ಆಫೀಸ್ ನಲ್ಲಿಯೂ ಧೂಳ್ ಎಬ್ಬಿಸಿದೆ. ಆಕ್ಷನ್, ಕಾಮಿಡಿ ಕಥಾಹಂದರದ ಚೆನ್ನೈ ಎಕ್ಸ್ ಪ್ರೆಸ್ ಬರೋಬ್ಬರಿ 207.69 ಕೋಟಿ ಕಲೆಕ್ಷನ್ ಮಾಡಿದೆ.

ಹ್ಯಾಪಿ ನ್ಯೂ ಇಯರ್

ಹ್ಯಾಪಿ ನ್ಯೂ ಇಯರ್

ದೀಪಿಕಾ ಸಿನಿ ಬದುಕಿನ ಮತ್ತೊಂದು ದೊಡ್ಡ ಮತ್ತು ಖ್ಯಾತಿ ತಂದುಕೊಟ್ಟ ಸಿನಿಮಾ ಹ್ಯಾಪಿ ನ್ಯೂ ಇಯರ್. ಬಾಲಿವುಡ್ ನ ಸ್ಟಾರ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಮೂರನೆ ಬಾರಿ ತೆರೆಹಂಚಿಕೊಂಡ ಸಿನಿಮಾವಿದು. ಶಾರುಖ್ ಮತ್ತು ದೀಪಿಕಾ ಜೋಡಿಗೆ ಅಭಿಮಾನಿಗಳು ಮತ್ತೊಮ್ಮೆ ಮನಸೋತಿದ್ದರು. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸಕ್ಸಸ್ ಕಂಡ ಹ್ಯಾಪಿ ನ್ಯೂ ಇಯರ್ 178.41 ಕೋಟಿ ಬಾಚಿಕೊಂಡಿತ್ತು.

ಬಾಜಿರಾವ್ ಮಸ್ತಾನಿ

ಬಾಜಿರಾವ್ ಮಸ್ತಾನಿ

ದೀಪಿಕಾ ಸಿನಿಮಾ ಬದುಕನ್ನು ಮತ್ತೊಂದು ಲೆವೆಲ್ ಗೆ ಕರೆದೊಯ್ದ ಸಿನಿಮಾ ಬಾಜಿರಾವ್ ಮಸ್ತಾನಿ. ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷನಲ್ಲಿ ಮೂಡಿಬಂದ ಈ ಐತಿಹಾಸಿಕ ಸಿನಿಮಾಗೆ ಭಾರತೀಯ ಚಿತ್ರರಂಗವೇ ಬೆರಗಾಗಿತ್ತು. ಈ ಸಿನಿಮಾದಲ್ಲಿ ದೀಪಿಕಾ ಅಭಿನಯಕ್ಕೆ ಮನಸೋಲದವರೇ ಇಲ್ಲ. ಭಾರತೀಯ ಚಿತ್ರಪ್ರಿಯರ ಮನಗೆದ್ದ ಬಾಜಿರಾವ್ ಮಸ್ತಾನಿ 183.75 ಕೋಟಿ ಮಾಡಿದೆ.

ಪದ್ಮಾಪತ್ ಸಿನಿಮಾ

ಪದ್ಮಾಪತ್ ಸಿನಿಮಾ

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ, ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಕಾಂಬಿನೇಷನ್ ನಲ್ಲಿ ಬಂದ ಪದ್ಮಾಪತ್ ಸಿನಿಮಾ ದೀಪಿಕಾ ಯಶಸ್ಸಿಗೆ ಮತ್ತೊಂದು ಗರಿ. ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದ ಪದ್ಮಾಪತ್ ರಿಲೀಸ್ ಆದಮೇಲೆ ಚಿತ್ರಭಿಮಾನಿಗಳ ಹೃದಯಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾ ಬರೋಬ್ಬರಿ 282.28 ಕೋಟಿ ಬಾಚಿಕೊಂಡಿದೆ. ದೀಪಿಕಾ ಸಿನಿ ಬದುಕಿನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು.

ದೀಪಿಕಾ ಬಳಿ ಇರುವ ಸಿನಿಮಾಗಳು

ದೀಪಿಕಾ ಬಳಿ ಇರುವ ಸಿನಿಮಾಗಳು

ದೀಪಿಕಾ ಸದ್ಯ 83 ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ದೀಪಿಕಾ ಚಪಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಂದುಕೊಂಡಂತೆ ಆಗಿದ್ದರೆ 83 ಸಿನಿಮಾ ಕಳೆದ ವರ್ಷವೆ ರಿಲೀಸ್ ಆಗಬೇಕಿತ್ತು. ಆದರೆ ವರ್ಷ ತೆರೆಗೆ ಬರಲು ಸಜ್ಜಾಗಿದೆ. ಇನ್ನು ಶಾರುಖ್ ಖಾನ್ ಜೊತೆ ಮತ್ತೆ ದೀಪಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರಭಾಸ್ ನಟನೆಯ ಇನ್ನು ಹೆಸರಿಡದ ಸಿನಿಮಾದಲ್ಲೂ ದೀಪಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Bollywood actress Deepika Padukone celebrating her 35th birthday. Here is the highest collection movies of deepika padukone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X