»   » 12ನೇ ವರ್ಷದಲ್ಲಿ ಕತ್ರಿನಾ ಹೇಗಿದ್ರು ನೋಡಿ.. ಆಶ್ಚರ್ಯ ಆಗೋದು ಗ್ಯಾರಂಟಿ!

12ನೇ ವರ್ಷದಲ್ಲಿ ಕತ್ರಿನಾ ಹೇಗಿದ್ರು ನೋಡಿ.. ಆಶ್ಚರ್ಯ ಆಗೋದು ಗ್ಯಾರಂಟಿ!

Posted By:
Subscribe to Filmibeat Kannada

ಬಾಲಿವುಡ್ ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಸದಾ ತಮ್ಮ ಹಾಟ್ ಲುಕ್ ಫೋಟೋ ಶೂಟ್ ಗಳಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಆದ್ರೆ ಇತ್ತೀಚೆಗೆ ನಟಿ ಸಾಮಾಜಿಕ ಜಾಲತಾಣ ಇನ್ ಸ್ಟಗ್ರಾಂ ನಲ್ಲಿ ಕೆಲವು ಇಮೇಜ್ ಗಳನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಕತ್ರಿನಾ 12 ನೇ ವಯಸ್ಸಿನಲ್ಲಿ ಹೀಗಿದ್ರಾ ಎಂದು ಬಾಯಿ ಮೇಲೆ ಬೆರಳಿಟ್ಟು ಆಶ್ಚರ್ಯ ಪಡುವಂತೆ ಮಾಡಿದ್ದಾರೆ.[ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು]

'ನಾನು 12 ನೇ ವರ್ಷದವಳಾಗಿದ್ದಾಗ ಕ್ಯಾಮೆರಾಗೆ ಕೊಟ್ಟ ಪೋಸ್... ಇತ್ತೀಚೆಗಷ್ಟೆ ಸಿಕ್ಕಿದ್ದು' ಎಂದು ಕ್ಯಾಪ್ಶನ್ ನೀಡಿ ಪೋಸ್ಟ್ ಮಾಡಿರುವ ಪೋಟೋದಲ್ಲಿ ಕತ್ರಿನಾ ಮುಗ್ಧವಾಗಿ ಕಾಣುತ್ತಿದ್ದು, ತಮ್ಮ ನಗುವಿನಿಂದ ಹೆಚ್ಚು ಆಕರ್ಷಿತವಾಗಿ ಕಾಣುತ್ತಿದ್ದಾರೆ. ಅವರು 12 ನೇ ವರ್ಷದಲ್ಲಿದ್ದಾಗ ಹೇಗಿದ್ರು ಮತ್ತು ನೀವು ನೋಡಿರದ ಅವರ ರೇರ್ ಫೋಟೋಗಳು ಇಲ್ಲಿವೆ. ಮುಂದೆ ಓದಿರಿ...

ಕತ್ರಿನಾ ಕೈಫ್

ಇದೇ.. ನೋಡಿ. ಕತ್ರಿನಾ ಕೈಫ್ 12 ವರ್ಷದವರಾಗಿದ್ದ ಮುದ್ದು ಮುದ್ದಾಗಿ ಕಾಣಿಸುತ್ತಿರುವ ಫೋಟೋ.

ಬಾರ್ಬಿ ಡಾಲ್

ಬಿ ಟೌನ್ ಹಾಟ್ ಗರ್ಲ್ ಕತ್ರಿನಾ ತಾವು ಈ ಹಿಂದೆ ಕೊಟ್ಟ ಪೋಸ್ ಗಳ ಫೋಟೋಗಳನ್ನು ಕಲೆಕ್ಟ್ ಮಾಡಿದ್ದು ಸಾಮಾಜಿಕ ಜಾಲತಾಣ ಇನ್ ಸ್ಟಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಫೋಸ್ ಕೊಡಲು ಈಗಲೂ ರೆಡಿ.

ಕತ್ರಿನಾ ರೇರ್ ಪಿಕ್

ಕತ್ರಿನಾ ಕೈಫ್ ಹೆಚ್ಚು ಡಿಫರೆಂಟ್ ಆಗಿ ಕಾಣಿಸಿಕೊಂಡ ಫೋಟೋ ಇದು. ಆದರೆ ಈಗ ಪಡ್ಡೆ ಹುಡುಗರ ಹೃದಯದ ದೇವತೆಯಾಗಿದ್ದಾರೆ.

ಈ ಇಮೇಜ್ ನೋಡಿರಲ್ಲ

ಬ್ಲಾಕ್ ಡ್ರೆಸ್ ಧರಿಸಿ ತಲೆಗೆ ಕಪ್ಪು ಬಟ್ಟೆ ಕಟ್ಟಿರುವ ಕತ್ರಿನಾ ಕೈಫ್ ರವರ ಈ ಲುಕ್ ತುಂಬಾ ರೇರ್.

ಸದಾ ಬ್ಯೂಟಿಫುಲ್

ಕತ್ರಿನಾ ಸದಾ ಸೌಂದರ್ಯವತಿಯಾಗಿ ಮತ್ತು ಅತ್ಯದ್ಭುತ ನೋಟದಿಂದ ನೋಡುಗರ ಕಣ್ಸೆಳೆಯುತ್ತಾರೆ. ಅವರ ಅತಿ ವಿರಳ ಫೋಟೋದಲ್ಲಿ ಇದು ಒಂದು.

ಕಣ್ಣುಕೋರೈಸುವ ನೋಟದಲ್ಲಿ ಕತ್ರಿನಾ

ಕತ್ರಿನಾ ಸಖತ್ ಹಾಟ್ ಮತ್ತು ಸೆಕ್ಸಿ ಗರ್ಲ್ ಮಾತ್ರವಲ್ಲದೇ ಕ್ಯೂಟ್ ಬ್ಯೂಟಿಯೂ ಸಹ. ಅದಕ್ಕೆ ಅವರ ಈ ಪಿಕ್ ಸಾಕ್ಷಿ.

ಕತ್ರಿನಾ ಮುಗುಳು ನಗೆ

ಮುಗಳು ನಗೆಯಲ್ಲಿ ಮಂದಹಾಸ ಬೀರುತ್ತಿರುವ ಕತ್ರಿನಾ ಕೈಫ್ ರವರ ಈ ಫೋಟೋ, ಬಾಲಿವುಡ್ ಸಿನಿ ಅಂಗಳಕ್ಕೆ ಅವರು ಕಾಲಿಟ್ಟ 10 ವರ್ಷಗಳ ಹಿಂದಿನದ್ದು.

ಸೋಲು-ಗೆಲುವಿನ ಹಾದಿಯಲ್ಲಿ ಕ್ಯಾಟ್

35 ವರ್ಷದ ಕತ್ರಿನಾ ಕೈಫ್ ತಮ್ಮ ಸಿನಿ ಪಯಣದಲ್ಲಿ ಹಲವು ಏಳು-ಬೀಳು ಗಳನ್ನು ಅನುಭವಿಸಿದ್ದಾರೆ. ಕತ್ರಿನಾ ಈಗಲೂ ಬಾಲಿವುಡ್ ನ ರಾಕ್ ನಟಿಯಾಗಿಯೇ ಮಿಂಚುತ್ತಿದ್ದಾರೆ.

English summary
The gorgeous Katrina Kaif posted a new image on her Instagram handle and everyone was taken aback as she shared a throwback picture when she was just a 12 year old girl.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada