For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದಲ್ಲಿರುವ ದಿಲೀಪ್ ಕುಮಾರ್ ಪೂರ್ವಜರ ಮನೆ ಈಗ ಏನಾಗಿದೆ?

  |

  ಭಾರತೀಯ ಸಿನಿಮಾರಂಗದ ದಂತಕಥೆ ದಿಲೀಪ್ ಕುಮಾರ್ ಇನ್ನು ನೆನೆಪು ಮಾತ್ರ. 98 ವರ್ಷದ ದಿಲೀಪ್ ಕುಮಾರ್ ಜುಲೈ 7ರಂದು ಇಹಲೋಕ ತ್ಯಜಿಸಿದರು. ಲೆಜೆಂಡರಿ ನಟ ಜನಿಸಿದ್ದು ಪಾಕಿಸ್ತಾನದ ಪೇಶಾವರದಲ್ಲಿ. ಭಾರತ-ಪಾಕ್ ವಿಭಜನೆಗೂ ಮೊದಲು ಪೇಶಾವರದಲ್ಲಿ ಜನಿಸಿದ್ದ ದಿಲೀಪ್ ಕುಮಾರ್ ಮನೆ ಇಂದಿಗೂ ಇದೆ.

  ಮಹಮ್ಮದ್ ಯೂಸುಫ್ ಖಾನ್ ಆಗಿ ಜನಿಸಿದ ದಿಲೀಪ್ ಕುಮಾರ್ ಪೇಶಾವರದ ಹೃದಯಭಾಗ ಹವೇಲಿಯಲ್ಲಿ ಬಾಲ್ಯ ಕಳೆದರು. ವಿಶೇಷ ಎಂದರೆ ಬಾರತೀಯ ಸಿನಿಮಾರಂಗದ ಮತ್ತೋರ್ವ ದಂತಕಥೆ ರಾಜ್ ಕಪೂರ್ ಮನೆ ಕೂಡ ಅಲ್ಲೆ ಪಕ್ಕದಲ್ಲೇ ಇದೆ. ಇಬ್ಬರೂ ಒಟ್ಟಿಗೆ ಆಡಿ ಬೆಳೆದವರು. ಇಬ್ಬರೂ ದಿಗ್ಗಜರ ಪೂರ್ವಜರ ಬಂಗಲೆಯನ್ನು ಖೈಬರ್ ಫಕ್ತುಂಖ್ವಾ ಪ್ರಾಂತ್ಯದ ಸರ್ಕಾರ ವಸ್ತುಸಂಗ್ರಾಲಯವನ್ನಾಗಿ ಮಾಡಲು ಮುಂದಾಗಿದೆ.

  2014ರಲ್ಲಿ ಅಂದಿನ ನವಾಜ್ ಷರೀಫ್ ಸರ್ಕಾರ ಇಬ್ಬರೂ ಲೆಜೆಂಡರಿ ನಟರ ಪೂರ್ವಜರ ಮನೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿತ್ತು. ಕಳೆದ ವರ್ಷ ಪ್ರಾಂತೀಯ ಸರ್ಕಾರ ಇಬ್ಬರು ನಟರ ಪೂರ್ವಜರ ಮನೆಯನ್ನು ವಸ್ತುಸಂಗ್ರಹಾಲಯಗಳಾಗಿ ಪರಿವರ್ತನೆ ಮಾಡಲು ನಿಶ್ಚಯಿಸಿತ್ತು.

  ಇದೀಗ ಎರಡು ಬಂಗಲೆ ಪುರತತ್ವ ನಿರ್ದೇಶನಾಲಯದ ಸ್ವಾದೀನದಲ್ಲಿದೆ. ನಿರ್ದೇಶನಾಲಯ ಎರಡು ಬಂಗಲೆಗಳನ್ನು ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸುವ ಮೊದಲು ಅವುಗಳನ್ನು ಪುನಃಸ್ಥಾಪಿಸುವ ಕೆಲಸದಲ್ಲಿ ತೊಗಿಸಿಕೊಂಡಿದೆ.

  ಚಪ್ಪಲಿಯಲ್ಲಿ ಹೊಡೆದೆ ಅಂತ ಜಗ್ಗೇಶ್ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಿದ್ರು!! | Filmibeat Kannada

  ಸುಮಾರು 100 ವರ್ಷಗಳ ಇತಿಹಾಸವಿರುವ ಇಬ್ಬರು ದಿಗ್ಗಜರ ನಿವಾಸಗಳನ್ನು ಕೆಡವಲು ಅದರ ಮಾಲೀಕರು ಹಲವು ಯತ್ನಗಳನ್ನು ಮಾಡಿದರು, ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಇಬ್ಬರ ದಿಗ್ಗಜರ ಮನೆ ಪಾಕ್ ನಲ್ಲಿ ವಸ್ತುಸಂಗ್ರಹಾಲಯ ವಾಗುತ್ತಿದೆ. ಆದರೆ ಇದನ್ನು ನೋಡುವ ಮೊದಲೇ ದಿಲೀಪ್ ಕುಮಾರ್ ಜಗತ್ತಿಗೆ ವಿದಾಯ ಹೇಳಿದ್ದಾರೆ.

  English summary
  Here’s what happened to Dilip Kumar’s ancestral Home in Peshawar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X