ಸನ್ನಿ ಬಯೋಪಿಕ್ ಆಕೆಯ ಸಹೋದರ ನೋಡಬಾರದಂತೆ: ಯಾಕೆ ಗೊತ್ತಾ.?
Recommended Video

ಮಾದಕ ತಾರೆ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಒಂದು ಸಂಚಲನ. ಓರ್ವ ಪೋರ್ನ್ ಸ್ಟಾರ್ ಆಗಿದ್ದ ನಟಿ ಬಿಟೌನ್ ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡಿದ್ದು ನಿಜಕ್ಕೂ ಅದ್ಭುತ ಮತ್ತು ಅದೊಂದು ರೀತಿ ಸಾಹಸವೇ ಸರಿ.
ಸನ್ನಿ ಲಿಯೋನ್ ಪೋರ್ನ್ ಸ್ಟಾರ್ ಆಗಿದ್ದು ಅನಿರೀಕ್ಷಿತ. ಊಹಿಸಿದ ಪರಿಸ್ಥಿತಿಯಲ್ಲಿ ಸನ್ನಿ ನೀಲಿ ಜಗತ್ತಿಗೆ ಕಾಲಿಡಬೇಕಾಯಿತು ಎಂದು ಸ್ವತಃ ಸನ್ನಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ತನ್ನ ವೈಯಕ್ತಿಕ ಜೀವನದ ಪ್ರತಿಯೊಂದು ಘಟನೆಯನ್ನ ಎಲ್ಲರೂ ತಿಳಿಯಬೇಕು ಎಂದು ವೆಬ್ ಸಿರೀಸ್ ಮೂಲಕ ತನ್ನ ಬಯೋಪಿಕ್ ( Karenjit Kaur: The Untold Story of Sunny Leone) ನಿರ್ಮಾಣ ಮಾಡ್ತಿದ್ದಾರೆ.
ಈಗಾಗಲೇ ವೆಬ್ ಸಿರೀಸ್ ನ ಮೊದಲ ಸಂಚಿಕೆ ಮೂಡಿ ಬಂದಿದೆ. ಈಗ ಎರಡನೇ ಸಂಚಿಕೆ ಟೆಲಿಕಾಸ್ಟ್ ಆಗ್ತಿದೆ. ಈ ಮಧ್ಯೆ ಸನ್ನಿ ಲಿಯೋನ್ ತಮ್ಮ ಸಹೋದರನ ಬಗ್ಗೆ ಮಾತನಾಡಿದ್ದಾರೆ. ನನ್ನ ಬಯೋಪಿಕ್ ಚಿತ್ರವನ್ನ ನನ್ನ ಸಹೋದರ ನೋಡಬಾರದು, ಆತ ಕೂಡ ನೋಡಲು ಇಷ್ಟ ಪಡಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಸನ್ನಿ ಬಯೋಪಿಕ್ ನ್ನ ಸಹೋದರ ಯಾಕೆ ನೋಡಬಾರದು.? ಮುಂದೆ ಓದಿ......

ಸನ್ನಿ ಬಯೋಪಿಕ್ ನಲ್ಲಿ ಏನಿದೆ.?
ಸನ್ನಿ ಲಿಯೋನ್ ನಿರ್ಮಾಣದ ಬಯೋಪಿಕ್ ವೆಬ್ ಸಿರೀಸ್ ಚಿತ್ರದ ಮೊದಲ ಭಾಗದಲ್ಲಿ ಸನ್ನಿಯ ಬಾಲ್ಯದ ವಿಶೇಷಗಳನ್ನ ತೋರಿಸಲಾಗಿತ್ತು. ಸನ್ನಿ ಹುಟ್ಟಿ ಬೆಳೆದ ಕಥೆ, ಆಕೆಯ ಯೌವನದ ದಿನಗಳು, ಹಾಗೂ ಆಕೆ ಹೇಗೆ ಪೋರ್ನ್ ನಟಿಯಾದಳು ಎಂಬುದನ್ನ ಬಹಳ ರೋಚಕವಾಗಿ ಚಿತ್ರೀಸಿದ್ದರು. ಈಗ ಎರಡನೇ ಭಾಗದಲ್ಲಿ ಪತಿ ಜೊತೆಗಿನ ಪ್ರೇಮ ಮತ್ತು ಬಾಲಿವುಡ್ ಗೆ ಹೇಗೆ ಬಂದರು ಎನ್ನುವುದನ್ನ ತೋರಿಸಲಾಗಿದೆ ಎನ್ನಲಾಗಿದೆ.

ಸಹೋದರ ಬಯೋಪಿಕ್ ನೋಡಬಾರದು
''ನನ್ನ ಬಯೋಪಿಕ್ ಚಿತ್ರದಲ್ಲಿ ಕೆಲವು ಅಂಶಗಳನ್ನ ನನ್ನ ಸಹೋದರನಾಗಲಿ, ಅಥವಾ ನನ್ನ ಸ್ನೇಹಿತರಾಗಲಿ ನೋಡುವುದಕ್ಕೆ ಕಷ್ಟವಾಗುತ್ತೆ. ಬಯೋಪಿಕ್ ನಲ್ಲಿ ಯಾವುದೇ ಅಂಶಗಳನ್ನ ಮುಚ್ಚಿಟ್ಟಿಲ್ಲ. ಪೋರ್ನ್ ವಿಷ್ಯಕ್ಕೆ ಸಂಬಂಧಿಸಿದಂತೆ ಕೆಲವು ದೃಶ್ಯಗಳನ್ನ ನನ್ನ ಸಹೋದರ ನೋಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಆತನನ್ನ ಈ ಸಿನಿಮಾ ನೋಡಬೇಡ'' ಎಂದು ಮನವಿ ಮಾಡಿಕೊಂಡಿದ್ದಾರೆ.

ಭವಿಷ್ಯದಲ್ಲೂ ನೋಡಬಾರದು
''ನನ್ನ ಸಹೋದರ ಸಂದೀಪ್ ವೋಹ್ರಾ ಭವಿಷ್ಯದಲ್ಲೂ ನನ್ನ ಬಯೋಪಿಕ್ ನೋಡಬಾರದು ಎಂಬುದು ನನ್ನ ಆಸೆ. ಆತನಿಗೂ ಅದೇ ಇಷ್ಟ. ನನ್ನ ಬಗ್ಗೆ ಕೆಲವು ವಿಷ್ಯಗಳನ್ನ ಸಹೋದರನಾಗಿ ಆತ ತಿಳಿದುಕೊಳ್ಳಬಾರದು'' ಎಂದು ತನ್ನ ಮನಸ್ಸಿನಲ್ಲಿದ್ದ ಭಾವನೆಯನ್ನ ಹೊರಹಾಕಿದ್ದಾರೆ.

ಭಾವುಕಾರದ ನಟಿ ಸನ್ನಿ
ಬಯೋಪಿಕ್ ನಿರ್ಮಾಣದ ವೇಳೆ ಕೆಲವು ದೃಶ್ಯಗಳನ್ನ ಚಿತ್ರೀಕರಿಸುವಾಗ ಸನ್ನಿ ಲಿಯೋನ್ ಬಹಳ ಭಾವುಕಾರಗಿದ್ದರಂತೆ. ಅದರಲ್ಲೂ ಕುಟುಂಬದ ಸನ್ನಿವೇಶಗಳು ಬಂದಾಗ ಪ್ರತಿದಿನವೂ ಕಣ್ಣೀರುಡುತ್ತಾ ಚಿತ್ರೀಕರಿಸಿದ್ದಾರಂತೆ.


Click it and Unblock the Notifications











