ಹಿಮಾಚಲ ಪ್ರದೇಶ ಸರ್ಕಾರದಿಂದ ನಟಿ ಕಂಗನಾಗೆ ಭದ್ರತೆ: ಸಿಎಂ ಜೈರಾಮ್ ಠಾಕೂರ್
ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಭೇಟಿಗೆ ರಾಜ್ಯ ಸರ್ಕಾರ ಭದ್ರತೆ ನೀಡಲಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.
"ಕಂಗನಾ ಹಿಮಾಚಲ ಪ್ರದೇಶದ ಮಗಳು ಮತ್ತು ಸೆಲೆಬ್ರಿಟಿ ಕೂಡ ಹೌದು. ಅವರಿಗೆ ಭದ್ರತೆ ನೀಡುವುದು ನಮ್ಮ ಕರ್ತವ್ಯ. ಆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿದ್ದೇನೆ" ಎಂದು ಹೇಳಿದ್ದಾರೆ.
ಸೆಪ್ಟಂಬರ್ 9ರಂದು ಕಂಗನಾ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಅಗತ್ಯವಿದ್ದಲ್ಲಿ ಭದ್ರತೆಯನ್ನು ಮುಂಬೈವರೆಗೂ ವಿಸ್ತರಿಸುವುದಾಗಿ ಸಿಎಂ ತಿಳಿದ್ದಾರೆ.

ಕಂಗನಾ ಸಹೋದರಿ ರಂಗೋಲಿ, ಶನಿವಾರ ಕರೆ ಮಾಡಿ ಭದ್ರತೆ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಜೊತೆ ಅವರ ತಂದೆ ಕೂಡ ಮಗಳಿಗೆ ಭದ್ರತೆ ನೀಡಬೇಕೆಂದು ಕೇಳಿ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಕಂಗನಾ ಹೇಳಿಕೆಗಳ ಬಗ್ಗೆ ಮತ್ತು ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಕಂಗನಾ ನಡೆಯ ಬಗ್ಗೆ ಮಾತನಾಡಲು ಸಿಎಂ ಜೈರಾಮ್ ಠಾಕೂರ್ ಮಾತನಾಡಲು ನಿರಾಕಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.
ನಟಿ ಕಂಗನಾ ರಣಾವತ್ ಮುಂಬೈ ಪೊಲೀಸರ ಭದ್ರತೆ ನಿರಾಕರಿಸಿ, 'ಮುಂಬೈ ಪೊಲೀಸರು, ಮಾಫಿಯಾ ಗೂಂಡಾಗಳಿಗಿಂತಲೂ ಭಯ ಹುಟ್ಟಿಸುತ್ತಾರೆ' ಎಂದು ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ 'ಮುಂಬೈ ಬರಬೇಡಿ' ಎಂದು ಪ್ರತಿಕ್ರಿಯೆ ನೀಡಿದ್ದರು.
ಸಂಜಯ್ ರಾವತ್ ಗೆ ತಿರುಗೇಟು ನೀಡಿದ್ದ ಕಂಗನಾ 'ಮುಂಬೈ ಪಾಕ್ ಆಕ್ರಮಿತ ಪಾಕಿಸ್ತಾನದಂತೆ ಕಾಣುತ್ತಿದೆ' ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದರು. ಕಂಗನಾ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಕಂಗನಾ 'ಮುಂಬೈಗೆ ಬಂದೆ ಬರ್ತೀನಿ, ಧೈರ್ಯ ಇದ್ದರೆ ತಡೀರಿ' ಎಂದು ಸವಾಲ್ ಹಾಕಿದ್ದಾರೆ. ಸೆಪ್ಟಂಬರ್ 9ರಂದು ಕಂಗನಾ ಮುಂಬೈಗೆ ಆಗಮಿಸುತ್ತಿದ್ದಾರೆ.


Click it and Unblock the Notifications











