ನೀನೊಬ್ಬಳೇ ಪರಮ ಸುಂದರಿನಾ ? ಅಭಿಷೇಕ್ ಬಚ್ಚನ್ ಎದುರೇ ಐಶ್ವರ್ಯ ರೈಗೆ ಅವಮಾನ ಮಾಡಿದ್ದ ಸಲ್ಮಾನ್ ಖಾನ್

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಚಿಕ್ಕ -ಚಿಕ್ಕ ವಿಚಾರಗಳಿಂದ ಪ್ರೇಮಕಥೆಗಳು ಅಪೂರ್ಣಗೊಳ್ಳುತ್ತವೆ. ಆ ಪೈಕಿ ಅಸೂಯೆ ಮತ್ತು ಅತಿಯಾದ ಕಾಳಜಿ ಕೂಡ ಒಂದು.

ಅದರಲ್ಲಿಯೂ ಹುಡುಗಿಯರಿಗಿಂತ ಅತಿಯಾಗಿ ಆಳವಾದ ಪ್ರೀತಿಯಲ್ಲಿ ಬಿದ್ದ ಹುಡುಗರಿಗಂತೂ ತನ್ನ ಪ್ರಿಯತಮೆಯನ್ನು ಹೊರತು ಪಡಿಸಿ ಕೂಡ ಬೇರೆ ಜಗತ್ತು ಇದೆ ಎನ್ನುವ ಪರಿವೆಯೇ ಇರುವುದಿಲ್ಲ. ಕುಂತರೂ.. ನಿಂತರೂ.. ತಾವು ಪ್ರೀತಿಸಿದ ಹುಡುಗಿಯ ಧ್ಯಾನವನ್ನೇ ಹಲವರು ಮಾಡುವುದರಿಂದ ಕಿರಿಕಿರಿಯಾಗಿ ಹಲವು ಸಂಬಂಧಗಳು ಹಳಸಿ ಹೋಗುತ್ತವೆ. ಬಣ್ಣದ ಲೋಕ ಕೂಡ ಇದರಿಂದ ಹೊರತಾಗಿಲ್ಲ. ಉದಾಹರಣೆಗೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಲವ್ ಸ್ಟೋರಿಯನ್ನೇ ತೆಗೆದುಕೊಳ್ಳಿ.

himani-shivpuri-on-salman-aishwarya-abhishek-he-would-scold-aishwarya-in-front-of-abhishek-bachchan

ಹೌದು, ಬಾಲಿವುಡ್‌ನಲ್ಲಿ ಹಲವಾರು ಲವ್ ಸ್ಟೋರಿಗಳಿವೆ. ಆ ಲವ್ ಸ್ಟೋರಿಗಳಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರ ಪ್ರೇಮ ಪ್ರಕರಣ ಕೂಡ ಒಂದು. ಇಬ್ಬರ ಸಂಬಂಧ ಮುರಿದು ಬಿದ್ದು ಎರಡೂವರೆ ದಶಕಗಳಾಗುತ್ತಾ ಬಂದರು ಕೂಡ ಇವರಿಬ್ಬರ ಲವ್ ಮತ್ತು ಬ್ರೇಕಪ್ ಕುರಿತು ಕೂಡ ಹಲವರಲ್ಲಿ ಕುತೂಹಲ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಆಗಾಗ ಇವರ ಪುರಾತನ ಕಾಲದ ಸಂಬಂಧ ಮುನ್ನೆಲೆಗೆ ಬರುತ್ತೆ. ಚರ್ಚೆಗೆ ನಾಂದಿಯನ್ನು ಹಾಡುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಸದ್ಯ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ದೂರವಾಗಲು ಕಾರಣವಾಗಿರಬಹುದಾದ ಹಲವು ಕಾರಣಗಳಲ್ಲಿ ಒಂದು ಕಾರಣವವನ್ನು ಹಿರಿಯ ನಟಿ ಹಿಮಾನಿ ಶಿವಪುರಿ ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಸಮ್ಮುಖದಲ್ಲಿಯೇ ಸೆಟ್‌ಗೆ ನುಗ್ಗಿದ್ದ ಸಲ್ಮಾನ್ ಖಾನ್ ಮನಬಂದಂತೆ ಐಶ್ವರ್ಯ ರೈ ಅವರನ್ನು ನಿಂದಿಸಿದ್ದರು ಎಂದು ಹೇಳಿದ್ದಾರೆ.

ಈ ಕುರಿತು ''ರೆಡ್ ಎಫ್‌ ಎಂ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹಿಮಾನಿ ಶಿವಪುರಿ ''ಹಮಾರಾ ದಿಲ್ ಆಪ್ಕೇ ಪಾಸ್ ಹೈ'' ಚಿತ್ರದ ಸಮಯದಲ್ಲಿ ಐಶ್ವರ್ಯ ರೈ ನನಗೆ ಪರಿಚಯವಾದರು. ಆ ಸಮಯದಲ್ಲಿ ಅವರನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು, ನಮ್ಮ ನಡುವೆ ಸ್ನೇಹ ಕೂಡ ಬಲವಾಗಿ ಬೇರೂರಿತ್ತು ಎಂದು ಹೇಳಿದ್ಧಾರೆ.

ಐಶ್ವರ್ಯ ತುಂಬಾ ಒಳ್ಳೆಯವಳು ಆಕೆಗೆ ಅಪಾರವಾದ ಜ್ಞಾನ ಇದೆ. ಬಹಳಷ್ಟು ವಿಚಾರಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವು ಎಂದು ಹೇಳಿರುವ ಹಿಮಾನಿ ಶಿವಪುರಿ ಅದೊಂದು ದಿನ ಫಿಲ್ಮ್ ಸಿಟಿಯಲ್ಲಿ ನಾವು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆವು. ರೋಹನ್ ಸಿಪ್ಪಿ ನಿರ್ದೇಶನದ ''ಕುಚ್ ನಾ ಕಹೋ'' ಚಿತ್ರದ ಚಿತ್ರೀಕರಣ ಅದು. ಅಭಿಷೇಕ್ ಬಚ್ಚನ್ ಕೂಡ ಇದ್ದರು. ಈ ಸಮಯದಲ್ಲಿ ತುಂಬಾನೇ ಕೋಪದಲ್ಲಿ ಸಲ್ಮಾನ್ ಖಾನ್ ಅಲ್ಲಿಗೆ ಬಂದಿದ್ದರು ಎಂದು ನೆನಪು ಮಾಡಿಕೊಂಡಿದ್ಧಾರೆ.

himani-shivpuri-on-salman-aishwarya-abhishek-he-would-scold-aishwarya-in-front-of-abhishek-bachchan

ಚಿತ್ರೀಕರಣದ ಸ್ಥಳಕ್ಕೆ ಒಮ್ಮೆಲೆ ಸಲ್ಮಾನ್ ಖಾನ್ ಕೋಪದಲ್ಲಿ ಬಂದಿದ್ದನ್ನು ಕಂಡು ಐಶ್ವರ್ಯ ಹೆದರಿದ್ದರು ಎಂದು ಹೇಳಿರುವ ಹಿಮಾನಿ ಏನಿದೆಲ್ಲಾ..? ಇವಳಿಗೆ ಸರಿಯಾಗಿ ತಿಳಿಸಿ ಹೇಳಿ, ವಹೀದಾ ರೆಹಮಾನ್ ಅವರನ್ನು ನೋಡಲು ಹೇಳಿ.. ತನ್ನನ್ನೂ ತಾನು ದೊಡ್ಡ ಸುಂದರಿ ಎಂದು ಅಂದುಕೊಂಡಿದ್ದಾಳೆ ಎಂದು ನನ್ನ ಬಳಿ ಏರು ಧ್ವನಿಯಲ್ಲಿ ಸಲ್ಮಾನ್ ಖಾನ್ ಮಾತನಾಡಿದರು. ಆಗ ನಾನು ಸಲ್ಮಾನ್ ಖಾನ್ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದೇ, ಅಭಿಷೇಕ್ ಕೂಡ ಅಲ್ಲಿಯೇ ಇದ್ದರು ಎಂದು ಹೇಳಿದ್ದಾರೆ.

ಮುಂದುವರೆದು ಇದಕ್ಕೂ ಮುನ್ನ ನಾವು ''ಹಮಾರಾ ದಿಲ್ ಆಪ್ಕೇ ಪಾಸ್ ಹೈ'' ಚಿತ್ರದ ಚಿತ್ರೀಕರಣ ಮಾಡುವ ಸಮಯದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ತುಂಬಾನೇ ಆಳವಾಗಿತ್ತು. ಇಬ್ಬರು ತುಂಬಾ ಆಪ್ತರಾಗಿದ್ದರು ಎಂದು ಹೇಳಿರುವ ಹಿಮಾನಿ ದಿನ ರಾತ್ರಿ ಸಲ್ಮಾನ್ ಖಾನ್ ತಪ್ಪದೇ ಐಶ್ವರ್ಯ ರೈ ಅವರ ಮನೆಗೆ ಬರುತ್ತಿದ್ದರು. ಬೆಳಗ್ಗೆ ಹೊರಡುತ್ತಿದ್ದರು. ಅಷ್ಟರ ಮಟ್ಟಿಗೆ ಅವರ ಸಂಬಂಧ ಗಟ್ಟಿಯಾಗಿತ್ತು ಎಂದು ಹೇಳಿದ್ದಾರೆ.

ಇನ್ನುಳಿದಂತೆ ಸಲ್ಮಾನ್ ಖಾನ್ ಅವರಿಂದ ದೂರವಾದ ನಂತರ ಐಶ್ವರ್ಯ ಹೆಸರು ವಿವೇಕ್ ಓಬೆರಾಯ್ ಜೊತೆ ತಳುಕು ಹಾಕಿಕೊಂಡಿತ್ತು. ಆ ನಂತರ ಆ ಸಂಬಂಧ ಕೂಡ ಮುರಿದು ಬಿತ್ತು. ಕೊನೆಯದಾಗಿ 2007ರಲ್ಲಿ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯ ರೈ ಸಪ್ತಪದಿ ತುಳಿದರು.

More from Filmibeat

English summary
Aishwarya Rai's co-star Himani Shivpuri reveals the intense drama on set with Salman Khan. Discover how Salman's frequent visits and possessiveness led to a public confrontation while Aishwarya was shooting with Abhishek Bachchan.
Read more about: salman khan aishwarya rai love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X