ಏರ್ ಇಂಡಿಯಾ ಸೇವೆ ವಿರುದ್ಧ ಕಿಡಿಕಾರಿದ 'ಬಿಗ್ ಬಾಸ್' ಸ್ಪರ್ಧಿ ಹಿಮಾಂಶಿ

By ಫಿಲ್ಮ್ ಡೆಸ್ಕ್

ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ನಟಿ ಹಿಮಾಂಶಿ ಖುರಾನಾ ಏರ್ ಇಂಡಿಯಾ ಸೇವೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಏರ್ ಇಂಡಿಯಾ ಸೇವೆಯ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.

ಏರ್ ಇಂಡಿಯಾ, ಪ್ರಯಾಣಿಕರ ಬಗ್ಗೆ ಕಾಳಜಿ ತೋರುವುದಿಲ್ಲ. ಕೊನೆಯ ಕ್ಷಣದಲ್ಲಿ ಫ್ಲೈಟ್ ರದ್ದು ಮಾಡಿ, ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಕನಿಷ್ಟ ಸೌಲಭ್ಯವನ್ನೂ ಏರ್ ಇಂಡಿಯಾ ಸಂಸ್ಥೆ ಕಲ್ಪಿಸಿಲ್ಲ ಎಂದಿದ್ದಾರೆ.

ಕೊನೆ ಕ್ಷಣದಲ್ಲಿ ವಿಮಾನ ದಿಢೀರ್ ಅಂತ ರದ್ದು ಮಾಡಿರುವುದರಿಂದ ಜನರು ಅಳುತ್ತಿದ್ದರು, ಕೂಗುತ್ತಿದ್ದರು, ಎಲ್ಲರೂ ಖರ್ಚಿಯ ಮೇಲೆ ಕುಳಿತಿದ್ದರು ಏರ್ ಇಂಡಿಯಾ ಸಂಸ್ಥೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

Himanshi Khurana upset Air India for worst service.

ಎಂದಿಗೂ ಏರ್ ಇಂಡಿಯಾ ಪ್ಲೈಟ್ ಅನ್ನು ಬುಕ್ ಮಾಡಬೇಡಿ, ಸಾಮಾನ್ಯ ಜನರು ಇಲ್ಲಿ ಅಳುತ್ತಿದ್ದಾರೆ ಮತ್ತು ಮಕ್ಕಳು ಕೂಗುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಬೇರೆ ವಿಮಾನಗಳ ಆಯ್ಕೆ ಸಹ ಇರುವುದಿಲ್ಲ. ಜನರನ್ನು ಹೆಚ್ಚು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಮ್ಯಾನರ್ಸ್ ಇಲ್ಲದ ಸಿಬ್ಬಂದಿ ಎಂದು ಬೇಸರ ಹೊರಹಾಕಿದ್ದಾರೆ.

ಹಿಮಾಂಶಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ, ಹಿಮಾಂಶಿ ಅವರೆ ವಿಮಾನ ಸಂಖ್ಯೆಯನ್ನು ನವೀಕರಿಸಲು ಸಮಸ್ಯೆ ಎದುರಾಗಿದೆ. ಅಗತ್ಯ ಸಹಾಯಕ್ಕಾಗಿ ಸಂಬಂಧ ಪಟ್ಟ ತಂಡ ಕೆಲಸ ಮಾಡುತ್ತಿದೆ'ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಮತ್ತೊಂದು ಟ್ವೀಟ್ ಮಾಡಿ ಹಿಮಾಂಶಿ ಖುರಾನಾ, ದಯವಿಟ್ಟು ಈ ಅನುಭವಕ್ಕಾಗಿ ನಮ್ಮ ಕ್ಷಮೆಯನ್ನು ಸ್ವೀಕರಿಸಿ. ನಮ್ಮ ದೆಹಲಿ ತಂಡದೊಂದಿಗೆ ಪರಿಶೀಲಿಸಿದಂತೆ, ಮುಂದಿನ ವಿಮಾನದಲ್ಲಿ ಚೆಕ್ ಇನ್ ಮಾಡಲಾಗುತ್ತದೆ. ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ನಮ್ಮ ದೆಹಲಿ ವಿಮಾನ ನಿಲ್ದಾಣ ತಂಡ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಮಾಂಶಿ, ನೀವು ಜನರಿಗೆ ಖರ್ಚನ್ನು ಪಾವತಿಸಬೇಕು, ಕ್ಯಾಬ್, ಹೋಟೆಲ್ ಎಲ್ಲಾ ಖರ್ಚನ್ನು ಪಾವತಿಸಬೇಕು ಎಂದು ಹೇಳಿದ್ದಾರೆ.

More from Filmibeat

English summary
Bigg Boss -13 fame Himanshi Khurana upset Air India for worst service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X