ನಟಿ ಹೀನಾ ಖಾನ್ ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ.!
Recommended Video

'ಬಿಗ್ ಬಾಸ್ 11' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದಾಗ, ದಕ್ಷಿಣ ಭಾರತದ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿ ವಿವಾದದ ಸುಳಿಯಲ್ಲಿ ಸಿಲುಕಿದ್ದವರು ಹಿಂದಿ ಕಿರುತೆರೆಯ ನಟಿ ಹೀನಾ ಖಾನ್. ಅದಾದ ಬಳಿಕ ತಮ್ಮ ವಿಚಿತ್ರ ಡ್ರೆಸ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದ ಹೀನಾ ಖಾನ್ ಗೆ ತಾಯಂದಿರ ದಿನಾಚರಣೆಯಂದೂ ಕೂಡ ನೆಟ್ಟಿಗರು ಮಹಾ ಮಂಗಳಾರತಿ ಮಾಡಿದ್ದರು.
ಇಷ್ಟೆಲ್ಲ ಆದರೂ. ಸಾಮಾಜಿಕ ಜಾಲತಾಣಗಳಲ್ಲಿ ಹೀನಾ ಖಾನ್ ಸ್ವಲ್ಪ ಸೀರಿಯಸ್ ಆಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕೆ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಒಂದೆರಡಲ್ಲ.
ನಿನ್ನೆಯಷ್ಟೇ ಎರಡು ಫೋಟೋ ಹಾಗೂ ಒಂದು ವಿಡಿಯೋನ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ನಟಿ ಹೀನಾ ಖಾನ್ ಶೇರ್ ಮಾಡಿದ್ದರು. ಆ ಫೋಟೋ ಹಾಗೂ ವಿಡಿಯೋ ಇದೀಗ ಮಡಿವಂತರ ಕಣ್ಣು ಕೆಂಪಗೆ ಮಾಡಿದೆ. ಮುಂದೆ ಓದಿರಿ...
ವಿಡಿಯೋ ನೋಡಿ...
ಕಪ್ಪು ಬಣ್ಣದ ಡ್ರೆಸ್ ತೊಟ್ಟು ಸೊಂಟ ಬಳುಕಿಸಿರುವ ವಿಡಿಯೋವೊಂದನ್ನ ನಟಿ ಹೀನಾ ಖಾನ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಕೆಲವರಿಗೆ ಇಷ್ಟ ಆಗಿದ್ದರೆ, ಹಲವರ ಕೋಪಕ್ಕೆ ಕಾರಣವಾಗಿದೆ.

ಫೋಟೋ ನೋಡಿ...
ವಿಡಿಯೋ ಸಾಲದು ಅಂತ ಕಪ್ಪು ಹಾಗೂ ಗೋಲ್ಡನ್ ಬಣ್ಣದ ಡ್ರೆಸ್ ತೊಟ್ಟಿರುವ ಫೋಟೋವನ್ನೂ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹೀನಾ ಖಾನ್ ಶೇರ್ ಮಾಡಿದ್ದರು. ಈ ಫೋಟೋ ಹಾಗೂ ವಿಡಿಯೋದಲ್ಲಿ ಹೀನಾ ಖಾನ್ ತಮ್ಮ ದೇಹವನ್ನ ಎಕ್ಸ್ ಪೋಸ್ ಮಾಡಿದ್ದಕ್ಕೆ ಸಂಪ್ರದಾಯವಾದಿಗಳು ಮುನಿಸಿಕೊಂಡಿದ್ದಾರೆ.

ರಂಝಾನ್ ಸಂದರ್ಭದಲ್ಲಿ ಇದೆಲ್ಲ ಬೇಕಾ.?
''ಪವಿತ್ರ ರಂಝಾನ್ ಹಬ್ಬದ ಸಂದರ್ಭದಲ್ಲಿ ಇಂತಹ ಬಟ್ಟೆಯನ್ನ ಧರಿಸಬೇಕಾ.? ನಿಮಗೆ ಸ್ವಲ್ಪವೂ ನಾಚಿಕೆ ಆಗೋದಿಲ್ವಾ.?'' ಅಂತೆಲ್ಲ ನೆಟ್ಟಿಗರು ಹೀನಾ ಖಾನ್ ಗೆ ಛೀಮಾರಿ ಹಾಕುತ್ತಿದ್ದಾರೆ.

ಇಸ್ಲಾಂ ಬಗ್ಗೆ ಗೌರವ ಇದ್ಯಾ.?
''ರಂಝಾನ್ ಸಂದರ್ಭದಲ್ಲಿ ಈ ತರಹ ಎಕ್ಸ್ ಪೋಸ್ ಮಾಡುವ ನಿಮಗೆ ಏನೂ ಅನಿಸಲ್ವಾ.? ನಿಮಗೆ ಇಸ್ಲಾಂ ಧರ್ಮದ ಮೇಲೆ ಗೌರವ ಇದ್ಯಾ.?'' ಅಂತೆಲ್ಲ ನೆಟ್ಟಿಗರು ಹೀನಾಗೆ ಬೆಂಡೆತ್ತುತ್ತಿದ್ದಾರೆ. ಹೀನಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೂ, ಆಕೆ ಮಾತ್ರ ಪ್ರತಿಕ್ರಿಯೆ ಕೊಟ್ಟಿಲ್ಲ.


Click it and Unblock the Notifications











