ಗಣೇಶನ ಮೂರ್ತಿ ಮುಂದೆ ಶೂ ಧರಿಸಿ ನಿಂತ ಹೀನಾ ಖಾನ್: ನೆಟ್ಟಿಗರು ಫುಲ್ ಗರಂ.!
ವಿವಾದಗಳಿಗೂ-ಹೀನಾ ಖಾನ್ ಗೂ ಒಂಥರಾ ಬಿಡಿಸಲಾರದ ನಂಟು. ವಿವಾದಗಳೇ ಹೀನಾ ಖಾನ್ ರನ್ನ ಅರಸಿ ಬರುತ್ವೋ, ಇಲ್ಲ ಅವರೇ ವಿವಾದಗಳ ಬೆನ್ನೆತ್ತಿ ಹೋಗ್ತಾರೋ, ಗೊತ್ತಿಲ್ಲ. ಒಟ್ನಲ್ಲಿ.. ಹೀನಾ ಖಾನ್ ಅಂದ್ರೆ ವಿವಾದ, ವಿವಾದ ಅಂದ್ರೆ ಹೀನಾ ಖಾನ್ ಎಂಬಂತಾಗಿದೆ.
'ಬಿಗ್ ಬಾಸ್' ಮನೆಯೊಳಗೆ ಲಾಕ್ ಆಗಿದ್ದಾಗ ಪ್ರತಿ ದಿನ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ವಿವಾದಗಳಿಗೆ ಗ್ರಾಸವಾಗುತ್ತಿದ್ದರು ಹೀನಾ ಖಾನ್. 'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೂ, ಹೀನಾ ಖಾನ್ ಕಾಂಟ್ರವರ್ಸಿಗಳ ಸುಳಿಯಲ್ಲಿ ಆಗಾಗ ಸಿಲುಕುತ್ತಲೇ ಇದ್ದಾರೆ.
ದಕ್ಷಿಣ ಭಾರತದ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದ ಹೀನಾ ಖಾನ್ ಹಲವು ಬಾರಿ ಟ್ರೋಲ್ ಆಗಿದ್ದರು. ಈಗಲೂ ನಟಿ ಹೀನಾ ಖಾನ್ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಒಂದು ಫೋಟೋ.
ಗಣೇಶನ ಮೂರ್ತಿ ಮುಂದೆ ಶೂ ಧರಿಸಿ, ಬಾಯ್ ಫ್ರೆಂಡ್ ರಾಕಿ ಜೈಸ್ವಾಲ್ ಜೊತೆಗೆ ನಿಂತು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ ನಟಿ ಹೀನಾ ಖಾನ್. ಇದನ್ನ ನೋಡಿದ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಮುಂದೆ ಓದಿರಿ...

ಇದೇ ನೋಡಿ ಫೋಟೋ
ಸ್ನೇಹಿತರ ಜೊತೆಗೆ ವೈನರಿಯೊಂದಕ್ಕೆ ನಟಿ ಹೀನಾ ಖಾನ್ ಭೇಟಿ ಕೊಟ್ಟಿದ್ದರು. ವೈನರಿಯಲ್ಲಿದ್ದ ಗಣೇಶನ ಮೂರ್ತಿ ಮುಂದೆ ಬಾಯ್ ಫ್ರೆಂಡ್ ರಾಕಿ ಜೈಸ್ವಾಲ್ ಜೊತೆಗೆ ನಿಂತು ಹೀನಾ ಖಾನ್ ಫೋಟೋ ತೆಗೆಸಿಕೊಂಡಿದ್ದರು. ಇಷ್ಟೇ ಆಗಿದ್ದರೆ, ವಿವಾದ ಆಗುತ್ತಿರಲಿಲ್ಲ. ಗಣೇಶನ ಮೂರ್ತಿ ಮುಂದೆ ಹೀನಾ ಹಾಗೂ ರಾಕಿ ಶೂ ಧರಿಸಿ ನಿಂತಿರುವುದು ಅನೇಕರ ಕೋಪಕ್ಕೆ ಕಾರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ದೇವರ ಮುಂದೆ ಶೋ ಧರಿಸಿ ನಿಂತಿರುವ ಹೀನಾ ಖಾನ್ ಗೆ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ''ದೇವರಿಗೆ ಗೌರವ ಕೊಡುವುದನ್ನು ಕಲಿಯಿರಿ'' ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಬೆಂಡೆತ್ತುತ್ತಿರುವ ನೆಟ್ಟಿಗರು
ಇನ್ನೂ ಕೆಲವರಂತೂ ಹೀನಾ ಖಾನ್ ಗೆ ಬೆಂಡೆತ್ತಿ ಬ್ರೇಕ್ ಹಾಕುತ್ತಿದ್ದಾರೆ. ಬಾಯಿಗೆ ಬಂದ ಹಾಗೆ ಕಾಮೆಂಟ್ ಹಾಕುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಂತೂ ಹೀನಾ ವಿರುದ್ಧ ಬಹುತೇಕರು ಮುನಿಸಿಕೊಂಡಿದ್ದಾರೆ.
ಅಭಿಮಾನಿಗಳು ಕೊಡ್ತಿರೋ ಸಮಜಾಯಿಷಿ
''ಅದು ದೇವಸ್ಥಾನ ಅಲ್ಲ. ವೈನರಿ ಪ್ರವೇಶಿಸುವ ಜಾಗದಲ್ಲಿ ಇರುವ ಮೂರ್ತಿ ಅಷ್ಟೇ. ಹೀನಾ ಹಾಗೂ ರಾಕಿಗೆ ತಾವು ಏನ್ಮಾಡ್ತಿದ್ದೀವಿ ಅನ್ನೋದು ಗೊತ್ತಿದೆ. ಉರ್ಕೊಳ್ಳೋವ್ರು ಉರ್ಕೊಳ್ಳಿ'' ಎಂದು ಹೀನಾ ಖಾನ್ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.


Click it and Unblock the Notifications











