For Quick Alerts
  ALLOW NOTIFICATIONS  
  For Daily Alerts

  ಒಡವೆ ಕಳೆದಿದ್ದು ಯಾರೋ, ಕೆಟ್ಟ ಹೆಸರು ಬಂದಿದ್ದು ಮಾತ್ರ ಹೀನಾ ಖಾನ್ ಗೆ.!

  By Harshitha
  |

  ಅವಾರ್ಡ್ ಫಂಕ್ಷನ್ ಒಂದಕ್ಕೆ ಧರಿಸಲು ಚಿನ್ನಾಭರಣ ಕಂಪನಿಯಿಂದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪಡೆದು, ಅದಕ್ಕೆ ದುಡ್ಡು ಕೊಡದೆ, ಒಡವೆಗಳನ್ನು ವಾಪಸ್ ಮಾಡದೆ 'ಬಿಗ್ ಬಾಸ್ 11' ರನ್ನರ್ ಅಪ್, ನಟಿ ಹೀನಾ ಖಾನ್ ವಂಚಿಸಿದ್ದಾರೆ ಎಂದು ಚಿನ್ನಾಭರಣ ಕಂಪನಿಯೊಂದು ಆಕೆಗೆ ಲೀಗಲ್ ನೋಟೀಸ್ ಕಳುಹಿಸಿದೆ ಎಂದು ವರದಿ ಆಗಿತ್ತು.

  ಇದಕ್ಕೆ, ''ನಾನು ಆ ಒಡವೆಗಳನ್ನು ಧರಿಸಲಿಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ. ಇದು ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡುವ ಹುನ್ನಾರ'' ಎಂದು ಹೀನಾ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದರು.

  ಸಾಲದಕ್ಕೆ, ಸುಳ್ಳು ಸುದ್ದಿ ಹಬ್ಬಿಸಿದ ಚಿನ್ನಾಭರಣ ಕಂಪನಿಗೆ ನಟಿ ಹೀನಾ ಖಾನ್ ಲೀಗಲ್ ನೋಟೀಸ್ ಕಳುಹಿಸಿ ತಿರುಗೇಟು ನೀಡಿದ್ದರು. ಸತ್ಯ ಯಾವುದು ಸುಳ್ಳು ಯಾವುದು ಎಂದು ತಿಳಿದುಕೊಳ್ಳದೇ ಸುದ್ದಿ ಬಿತ್ತರಿಸಿದ ಮಾಧ್ಯಮಗಳ ವಿರುದ್ಧವೂ ಹೀನಾ ಖಾನ್ ಕೆಂಡಕಾರಿದ್ದರು.

  ಇಷ್ಟೆಲ್ಲ ಆದ್ಮೇಲೆ, ಸತ್ಯ ಏನು ಎನ್ನುವುದು ಬಯಲಾಗಿದೆ. ಚಿನ್ನಾಭರಣ ವಂಚನೆ ಪ್ರಕರಣಕ್ಕೂ ಹೀನಾ ಖಾನ್ ಗೂ ಯಾವುದೇ ಸಂಬಂಧ ಇಲ್ಲ. ಹೀನಾ ಖಾನ್ ರವರ ಸ್ಟೈಲಿಸ್ಟ್ ಅಸಿಸ್ಟೆಂಟ್ ಗಳು ಮಾಡಿದ ಎಡವಟ್ಟಿನಿಂದ ಆಕೆಗೆ ಕೆಟ್ಟ ಹೆಸರು ಬರುವಂತಾಗಿದೆ. ಮುಂದೆ ಓದಿರಿ...

  ಬಾಯಿ ಬಿಟ್ಟ ಹೇಮಲತಾ

  ಬಾಯಿ ಬಿಟ್ಟ ಹೇಮಲತಾ

  ''ಏಪ್ರಿಲ್ ನಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಹೀನಾ ಖಾನ್ ರವರಿಗೆ ಚಿನ್ನಾಭರಣ ಕಂಪನಿಯಿಂದ ಒಡವೆಗಳನ್ನು ತಂದಿದ್ದೆ. ಆದ್ರೆ, ಆ ಒಡವೆಗಳನ್ನು ಅವರು ರಿಜೆಕ್ಟ್ ಮಾಡಿದ್ದರು. ಹೀಗಾಗಿ, ನನ್ನ ಅಸಿಸ್ಟೆಂಟ್ ಗಳಿಗೆ ಅದನ್ನ ವಾಪಸ್ ಮಾಡುವಂತೆ ಹೇಳಿದ್ದೆ'' ಎಂದು ಹೀನಾ ಖಾನ್ ಸ್ಟೈಲಿಸ್ಟ್ ಹೇಮಲತಾ ಬಾಯಿಬಿಟ್ಟಿದ್ದಾರೆ.

  ಚಿನ್ನಾಭರಣ ಕಂಪನಿಗೆ 12 ಲಕ್ಷ ಮೋಸ ಮಾಡಿದ್ರಾ 'ಬಿಗ್ ಬಾಸ್' ಸ್ಪರ್ಧಿ.?ಚಿನ್ನಾಭರಣ ಕಂಪನಿಗೆ 12 ಲಕ್ಷ ಮೋಸ ಮಾಡಿದ್ರಾ 'ಬಿಗ್ ಬಾಸ್' ಸ್ಪರ್ಧಿ.?

  ಶಾಕ್ ಆಯ್ತು

  ಶಾಕ್ ಆಯ್ತು

  ''ಒಡವೆಗಳು ಕಳೆದು ಹೋಗಿವೆ ಅಂತ ನನ್ನ ಅಸಿಸ್ಟೆಂಟ್ ಗಳು ಹೇಳಿದಾಗ, ನನಗೆ ಶಾಕ್ ಆಯ್ತು. ಹೀಗಾಗಿ, ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟೆ. ಎಫ್.ಐ.ಆರ್ ಕೂಡ ದಾಖಲಾಗಿದೆ'' ಅಂತಾರೆ ಹೇಮಲತಾ

  ಚಿನ್ನಾಭರಣ ಕಂಪನಿಗೆ ಲೀಗಲ್ ನೋಟೀಸ್ ಕಳುಹಿಸಿದ ಹೀನಾ ಖಾನ್ ಚಿನ್ನಾಭರಣ ಕಂಪನಿಗೆ ಲೀಗಲ್ ನೋಟೀಸ್ ಕಳುಹಿಸಿದ ಹೀನಾ ಖಾನ್

  ಸಮಸ್ಯೆ ಬಗೆಹರಿಯುತ್ತಿಲ್ಲ.!

  ಸಮಸ್ಯೆ ಬಗೆಹರಿಯುತ್ತಿಲ್ಲ.!

  ''ಚಿನ್ನಾಭರಣಗಳಿಗೂ ಹೀನಾ ಖಾನ್ ಗೂ ಯಾವುದೇ ಸಂಬಂಧ ಇಲ್ಲ. ಚಿನ್ನಾಭರಣ ಕಂಪನಿಯೊಂದಿಗೆ ನೇರವಾಗಿ ಮಾತನಾಡಲು ಮಧ್ಯವರ್ತಿಗಳು ಬಿಡುತ್ತಿಲ್ಲ. ಆದ್ದರಿಂದ ಸಮಸ್ಯೆ ಬಗೆಹರಿಯದೆ, ಹೀನಾ ಖಾನ್ ಗೆ ಕೆಟ್ಟ ಹೆಸರು ಬರುತ್ತಿದೆ'' - ಹೇಮಲತಾ, ಹೀನಾ ಖಾನ್ ಸ್ಟೈಲಿಸ್ಟ್

  ಯಾರೀ ಹೀನಾ ಖಾನ್.?

  ಯಾರೀ ಹೀನಾ ಖಾನ್.?

  'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿಯಲ್ಲಿ ಅಭಿನಯಿಸಿದ ಕಿರುತೆರೆ ನಟಿ ಹೀನಾ ಖಾನ್. ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಹೀನಾ ಖಾನ್ ಕೂಡ ಒಬ್ಬರು. 'ಬಿಗ್ ಬಾಸ್ 11' ರಿಯಾಲಿಟಿ ಶೋನಲ್ಲಿ ಹೀನಾ ಖಾನ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

  English summary
  Hina Khan jewellery fraud controversy: Stylist Hemalatha says Hina Khan has nothing to do with the Jewellery.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X