For Quick Alerts
  ALLOW NOTIFICATIONS  
  For Daily Alerts

  ಚಿನ್ನಾಭರಣ ಕಂಪನಿಗೆ ಲೀಗಲ್ ನೋಟೀಸ್ ಕಳುಹಿಸಿದ ಹೀನಾ ಖಾನ್

  By Harshitha
  |

  'ಬಿಗ್ ಬಾಸ್ 11' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದ ಹೀನಾ ಖಾನ್ ಗೆ ಇತ್ತೀಚೆಗಷ್ಟೇ ಚಿನ್ನಾಭರಣ ಕಂಪನಿಯೊಂದು ಲೀಗಲ್ ನೋಟೀಸ್ ಕಳುಹಿಸಿತ್ತು. ಯಾಕಂದ್ರೆ, ಈವೆಂಟ್ ಒಂದಕ್ಕೆ ಧರಿಸಲು ಚಿನ್ನಾಭರಣ ಕಂಪನಿಯಿಂದ ದುಬಾರಿ ಬೆಲೆಯ ಒಡವೆಗಳನ್ನು ನಟಿ ಹೀನಾ ಖಾನ್ ಪಡೆದಿದ್ದರು.

  ಆದ್ರೆ, 12 ಲಕ್ಷ ರೂಪಾಯಿ ಮೌಲ್ಯದ ಆ ಒಡವೆಗಳನ್ನು ಹೀನಾ ಖಾನ್ ವಾಪಸ್ ಮಾಡಿರಲಿಲ್ಲ. ಹೀಗಾಗಿ, 15 ದಿನಗಳ ಒಳಗೆ ಒಡವೆಗಳನ್ನು ಹಿಂದಿರುಗಿಸುವಂತೆ ಚಿನ್ನಾಭರಣ ಕಂಪನಿ ಹೀನಾ ಖಾನ್ ಗೆ ನೋಟೀಸ್ ಜಾರಿ ಮಾಡಿತ್ತು.

  ''ಇದೆಲ್ಲ ನನ್ನ ಹೆಸರಿಗೆ ಮಸಿ ಬಳಿಯುವ ಯತ್ನ'' ಅಂತ ಪ್ರತಿಕ್ರಿಯೆ ನೀಡಿದ್ದ ಹೀನಾ ಖಾನ್ ಇದೀಗ ಚಿನ್ನಾಭರಣ ಕಂಪನಿಗೆ ನೋಟೀಸ್ ಕಳುಹಿಸಿದ್ದಾರೆ. ಮುಂದೆ ಓದಿರಿ...

  ಟ್ವೀಟ್ ಮಾಡಿರುವ ಹೀನಾ ಖಾನ್

  ಟ್ವೀಟ್ ಮಾಡಿರುವ ಹೀನಾ ಖಾನ್

  ''ಇದೆಲ್ಲ ಶುರುವಾಗಿದ್ದು ಪಬ್ಲಿಕ್ ನಲ್ಲಿಯೇ. ಹೀಗಾಗಿ ನಾನೂ ಕೂಡ ನನ್ನ ಪ್ರತಿಕ್ರಿಯೆಯನ್ನ ಪಬ್ಲಿಕ್ ಆಗಿಯೇ ಹಂಚಿಕೊಳ್ಳುತ್ತಿದ್ದೇನೆ. ಚಿನ್ನಾಭರಣ ಕಂಪನಿಗೆ ನನ್ನ ವಕೀಲರು ಸರಿಯಾದ ಸ್ಟಾಂಪ್ ಹಾಗೂ ಸಹಿ ಹಾಕಿ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ಲೀಗಲ್ ನೋಟೀಸ್ ಅಂದ್ರೆ ಇದು. ಚೀಪ್ ಪಬ್ಲಿಸಿಟಿಗಾಗಿ ಸೃಷ್ಟಿಸಿದ ಸ್ಟ್ಯಾಂಪ್ ಇಲ್ಲದ ನೋಟೀಸ್ ಅಲ್ಲ'' ಎಂದು ತಿರುಗೇಟು ಕೊಟ್ಟಿದ್ದಾರೆ ನಟಿ ಹೀನಾ ಖಾನ್.

  ಚಿನ್ನಾಭರಣ ಕಂಪನಿಗೆ 12 ಲಕ್ಷ ಮೋಸ ಮಾಡಿದ್ರಾ 'ಬಿಗ್ ಬಾಸ್' ಸ್ಪರ್ಧಿ.?ಚಿನ್ನಾಭರಣ ಕಂಪನಿಗೆ 12 ಲಕ್ಷ ಮೋಸ ಮಾಡಿದ್ರಾ 'ಬಿಗ್ ಬಾಸ್' ಸ್ಪರ್ಧಿ.?

  ಸತ್ಯಮೇವ ಜಯತೆ ಎಂದ ಹೀನಾ ಖಾನ್

  ಸತ್ಯಮೇವ ಜಯತೆ ಎಂದ ಹೀನಾ ಖಾನ್

  ''ಸೆಲೆಬ್ರಿಟಿ ಆಗುವುದು ಸುಲಭದ ಮಾತಲ್ಲ. ಈ ಮಟ್ಟ ತಲುಪಲು ನಾನು ಕಷ್ಟ ಪಟ್ಟಿರುವೆ. ಆದ್ರೆ, ಸೆಲೆಬ್ರಿಟಿಗಳೇ ಅನೇಕರಿಗೆ ಸುಲಭದ ಟಾರ್ಗೆಟ್. ಸರಿಯಾದ ಸಾಕ್ಷ್ಯಾಧಾರ ಇದ್ದರೆ ಸುಳ್ಳು ಆರೋಪ ಮಾಡುವವರಿಗೆ ತಕ್ಕ ಶಾಸ್ತಿ ಆಗುತ್ತೆ. ಸತ್ಯಮೇವ ಜಯತೆ'' ಎಂದಿದ್ದಾರೆ ನಟಿ ಹೀನಾ ಖಾನ್.

  ಏನಿದು ವಿವಾದ.?

  ಏನಿದು ವಿವಾದ.?

  ಏಪ್ರಿಲ್ ತಿಂಗಳಲ್ಲಿ ಕಾರ್ಯಕ್ರಮವೊಂದಕ್ಕಾಗಿ ಧರಿಸಲು ಚಿನ್ನಾಭರಣ ಕಂಪನಿಯೊಂದರಿಂದ ಬರೋಬ್ಬರಿ 12 ಲಕ್ಷ ಮೌಲ್ಯದ ಆಭರಣಗಳನ್ನು ನಟಿ ಹೀನಾ ಖಾನ್ ಪಡೆದಿದ್ದರು. ಆದ್ರೆ, ಈವರೆಗೂ ಆ ಆಭರಣಗಳನ್ನು ಹೀನಾ ಖಾನ್ ಚಿನ್ನಾಭರಣ ಕಂಪನಿಗೆ ವಾಪಸ್ ನೀಡಿಲ್ಲ. ಹೀಗಾಗಿ, 15 ದಿನಗಳ ಒಳಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಹೀನಾ ಖಾನ್ ಗೆ ವಕೀಲರ ಮುಖಾಂತರ ಚಿನ್ನಾಭರಣ ಕಂಪನಿ ನೋಟೀಸ್ ನೀಡಿದೆ ಎಂದು ವರದಿ ಆಗಿದೆ.

  ಹೀನಾ ಖಾನ್ ವಾದ ಏನು.?

  ಹೀನಾ ಖಾನ್ ವಾದ ಏನು.?

  ಅಷ್ಟಕ್ಕೂ, ಚಿನ್ನಾಭರಣ ಕಂಪನಿಯಿಂದ ಹೀನಾ ಖಾನ್ ಗಾಗಿ ಒಡವೆಗಳನ್ನ ತಂದವರು ಸ್ಟೈಲಿಸ್ಟ್ ಹೇಮಲತಾ. ''ನಾನು ಆ ಆಭರಣಗಳನ್ನು ಧರಿಸಲಿಲ್ಲ. ಯಾಕಂದ್ರೆ, ನನಗದು ಇಷ್ಟ ಆಗಲಿಲ್ಲ. ಹೀಗಾಗಿ ಬೇರೆ ಧರಿಸಿದೆ. ನನ್ನ ಸ್ಟೈಲಿಸ್ಟ್ ಹೇಮಲತಾ ಅದನ್ನ ಆಟೋದಲ್ಲಿ ಬಿಟ್ಟುಬಿಟ್ಟಿದ್ದಾರೆ. ಈಗಾಗಲೇ 2.86 ಲಕ್ಷ ವಾಪಸ್ ಕೊಡಲಾಗಿದೆ'' ಎಂದು ಸಂದರ್ಶನದಲ್ಲಿ ಹೀನಾ ಖಾನ್ ತಿಳಿಸಿದ್ದಾರೆ.

  English summary
  Hina Khan serves legal notice to jewellery company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X