'ಬಿಗ್ ಬಾಸ್' ರನ್ನರ್ ಅಪ್ ಹೀನಾ ಖಾನ್ ನಟನೆಯ 'ಹ್ಯಾಕ್ಡ್' ಟ್ರೈಲರ್ ಯೂಟ್ಯೂಬ್ ನಲ್ಲಿ ಹಿಟ್.!

'ಬಿಗ್ ಬಾಸ್-11' ರಿಯಾಲಿಟಿ ಶೋನಲ್ಲಿ ಹೆಚ್ಚು ವಿವಾದಕ್ಕೀಡಾಗಿದ್ದ ಸ್ಪರ್ಧಿ ಹೀನಾ ಖಾನ್. ದಕ್ಷಿಣ ಭಾರತದ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿ ಕಾಂಟ್ರವರ್ಸಿಯನ್ನು ಮೈಮೇಲೆ ಎಳೆದುಕೊಂಡಿದ್ದ ಹೀನಾ ಖಾನ್ ಕೊನೆಗೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದರು.

'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಮೇಲೆ 'ಕಸೌತಿ ಝಿಂದಗಿ ಕೇ' ಧಾರಾವಾಹಿಯಲ್ಲಿ ಬಿಜಿಯಾದ ನಟಿ ಹೀನಾ ಖಾನ್ ಇದೀಗ 'ಹ್ಯಾಕ್ಡ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ.

ಹೀನಾ ಖಾನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಹ್ಯಾಕ್ಡ್' ಚಿತ್ರದ ಟ್ರೈಲರ್ ನಾಲ್ಕು ದಿನಗಳ ಹಿಂದೆಯಷ್ಟೇ ಬಿಡುಗಡೆ ಆಗಿತ್ತು. ಸೈಬರ್ ಕ್ರೈಂ ಕುರಿತಾದ ಕಥಾಹಂದರ ಹೊಂದಿರುವ 'ಹ್ಯಾಕ್ಡ್' ಚಿತ್ರ ಕೇವಲ ನಾಲ್ಕು ದಿನಗಳಲ್ಲಿ 11 ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ. ಮೂರು ಲಕ್ಷಕ್ಕೂ ಹೆಚ್ಚು ಮಂದಿ 'ಹ್ಯಾಕ್ಡ್' ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Hina Khan starrer Hacked movie trailer is trending in YouTube

ವಿಕ್ರಮ್ ಭಟ್ ನಿರ್ದೇಶನ ಮಾಡಿರುವ 'ಹ್ಯಾಕ್ಡ್' ಚಿತ್ರದಲ್ಲಿ ಹೀನಾ ಖಾನ್ ಜೊತೆಗೆ ರೋಹನ್ ಶಾ, ಮೋಹಿತ್ ಮಲ್ಹೋತ್ರ ಕೂಡ ಅಭಿನಯಿಸಿದ್ದಾರೆ. ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿರುವ 'ಹ್ಯಾಕ್ಡ್' ಚಿತ್ರದ ಟ್ರೈಲರ್ ಫೆಬ್ರವರಿ 7 ರಂದು ಬಿಡುಗಡೆ ಆಗಲಿದೆ.

English summary
Hina Khan starrer Hacked movie trailer is trending in YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X