ಉಮ್ರಾ ಮಾಡಿ ಗಣೇಶನ ದೇವಸ್ಥಾನಕ್ಕೆ ಹೋಗ್ತೀಯಾ, ಅಲ್ಲಾ ನಿನ್ನ ಕ್ಷಮಿಸಲ್ಲ, ನಟಿ ವಿರುದ್ಧ ಆಕ್ರೋಶ..!
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ.
ಇನ್ನೂ ಚಿತ್ರರಂಗದಲ್ಲಿ ಜಾತಿ-ಧರ್ಮಗಳ ಕುರಿತು ಮಾತನಾಡುವುದನ್ನೇ ಮಹಾ ಅಪರಾಧ ಎಂದುಕೊಂಡವರು ಕೂಡ ನಮ್ಮ ನಿಮ್ಮ ನಡುವೆ ಇದ್ದಾರೆ. ಇಂಥಾ ಕೋಮು ವಿಷ ಬೀಜ ಬಿತ್ತುವರ ನಡುವೆ ಅನ್ಯಧರ್ಮದ ನಾಯಕಿ ಹಿಂದೂ ದೇವಾಲಯಕ್ಕೆ ತೆರಳಿದರೆ ಪರಿಸ್ಥಿತಿ ಹೇಗಿರಬೇಡ ? ಇದಕ್ಕೆ ಹೀನಾ ಖಾನ್ ಮತ್ತು ಅವರ ಮೇಲಾಗುತ್ತಿರುವ ಸೈಬರ್ ದಾಳಿ ಸದ್ಯದ ಉದಾಹರಣೆ.

ಹೌದು, ಹೀನಾ ಖಾನ್, ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನಾಯಕಿ. 36ರ ಹರೆಯದ ಹೀನಾ ಮೂರನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿ ಸದ್ಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ' ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಧಾರಾವಾಹಿ ಮೂಲಕ ಜನಮನ್ನಣೆ ಗಳಿಸಿ ಬಿಗ್ ಬಾಸ್ 14, ಫಿಯರ್ ಫ್ಯಾಕ್ಟರ್ ಖತ್ರೋನ್ ಕೆ ಖಿಲಾಡಿ ಅಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಇವರು ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಪ್ರೇಕ್ಷಕರ ಹೃ ದಯವನ್ನು ಗೆದ್ದಿದ್ದರು. ಆದರೆ, ಕ್ಯಾನ್ಸರ್ ಹೀನಾ ಸಂಭ್ರಮವನ್ನೇ ನುಂಗಿ ಹಾಕಿತು.
ಇಂಥಾ ಹೀನಾ ಖಾನ್ 08 ಕಿಮೊಥೆರಪಿ ಚಿಕಿತ್ಸೆಗಳ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೀನಾ ಖಾನ್ ಅಭಿನಯದ ಗೃಹಲಕ್ಷ್ಮಿ ವೆಬ್ ಸರಣಿ ಈ 16ರಿಂದ ಓಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಹಿನ್ನೆಲೆ ನಿನ್ನೆ ಮುಂಬೈನ ಪ್ರಸಿದ್ದ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಗಣೇಶನ ದರ್ಶನವನ್ನು ಪಡೆದಿದ್ದಾರೆ. ದರ್ಶನವನ್ನು ಪಡೆದು ಹಣೆಗೆ ಕುಂಕುಮವನ್ನು ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಹೀನಾ ಖಾನ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋವನ್ನು ನೋಡಿದ ಅನೇಕರು ಹೀನಾ ಖಾನ್ ವಿರುದ್ಧ ಸಮರ ಸಾರಿದ್ದಾರೆ. ಹೀನಾ ಖಾನ್ ಕ್ಯಾನ್ಸರ್ ವಿರುದ್ದ ಹೋರಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಕೂಡ ವ್ಯೆಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಉಮ್ರಾ ಮಾಡಿ ದೇವಸ್ಥಾನಕ್ಕೆ ಹೋಗಿದ್ದೀಯಲ್ಲ ? ಆ ಅಲ್ಲಾಹ್ ನಿನ್ನನ್ನು ಕ್ಷಮಿಸಲ್ಲ ಎಂದು ಕಿಡಿ ಕಾರುತ್ತಿದ್ದಾರೆ. ಮುಸ್ಲಿಂ ಆಗಿ ನೀವು ದೇವಸ್ಥಾನಕ್ಕೆ ಹೋಗಬಹುದಾ ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಉಮ್ರಾ ಮಾಡಿದ ನಂತರವೂ ನಿನಗೆ ಬುದ್ದಿ ಬರಲಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಗಟಾರದಲ್ಲಿ ಬಿದ್ದು ಹೊರಳಾಡಿ ಬಂದು ಹೊಟ್ಟೆ ಸೇರಿದ ಹೊಲಸನ್ನೆಲ್ಲ ಕಾಮೆಂಟ್ ಮಾಡುವ ಮೂಲಕ ಕಾರಿಕೊಳ್ಳುತ್ತಿದ್ದಾರೆ.
ಅಂದ್ಹಾಗೇ ಹೀನಾ ಖಾನ್ ಅಭಿನಯದ 'ಗೃಹಲಕ್ಷ್ಮಿ'ಯಲ್ಲಿ ಚಂಕಿ ಪಾಂಡೆ, ರಾಹುಲ್ ದೇವ್ ಮತ್ತು ದಿಬ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನು ಉತ್ತರಾಖಂಡದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುವ ಸಮಯದಲ್ಲಿಯೇ ಹೀನಾ ಖಾನ್ ಅವರಿಗೆ ಕ್ಯಾನ್ಸರ್ ತಗುಲಿತ್ತು. ಆದರೆ ಅವರಿಗೆ ಕ್ಯಾನ್ಸರ್ ಇರುವುದು ಅರಿವಾಗಿರಲಿಲ್ಲ. ಚಿತ್ರೀಕರಣ ಮುಕ್ತಾಯವಾದ ನಂತರ ಆಸ್ಪತ್ರೆಯಲ್ಲಿ ದಾಖಲಾದ ನಂತರವಷ್ಟೇ ಹೀನಾ ಖಾನ್‌ಗೆ ತಮಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಅಲ್ಲಿಂದ ಕ್ಯಾನ್ಸರ್ ವಿರುದ್ಧ ಹೋರಾಟವನ್ನು ಶುರು ಮಾಡಿದ ಹೀನಾ ತಮ್ಮ ಈ ಕ್ಯಾನ್ಸರ್ ಜರ್ನಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡುತ್ತಲೇ ಬಂದಿದ್ದಾರೆ. ಸದ್ಯ ಹೀನಾ ಖಾನ್ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿರುವ ವಿಡಿಯೋಗಳು ವೈರಲ್ ಆಗಿದ್ದು ಹೀನಾ ಖಾನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.


Click it and Unblock the Notifications











