»   » ಸದಾ ಬಡವರಿಗಾಗಿ ಮಿಡಿಯುತ್ತದೆ ಅಕ್ಷಯ್ ಕುಮಾರ್ ಹೃದಯ

ಸದಾ ಬಡವರಿಗಾಗಿ ಮಿಡಿಯುತ್ತದೆ ಅಕ್ಷಯ್ ಕುಮಾರ್ ಹೃದಯ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತುಂಬಾ ವಿಶಾಲ ಹೃದಯವನ್ನು ಹೊಂದಿದ್ದಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಈ ಮೊದಲು ಬರ ಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡಲು ಧಾವಿಸಿದ್ದ ನಟ ಅಕ್ಷಯ್ ಕುಮಾರ್ ಮತ್ತೆ ರೈತರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಕಳೆದ ವರ್ಷ ಬರದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಒಟ್ಟು 90 ಲಕ್ಷ ರೂಪಾಯಿಗಳ ನೆರವು ನೀಡಿ ಸಹಾಯ ಮಾಡಿದ್ದ ನಟ ಅಕ್ಷಯ್ ಕುಮಾರ್ ಅವರು ಈ ಬಾರಿ ರೈತರಿಗೋಸ್ಕರ ತಾವು ಪಡೆಯುತ್ತಿರುವ ಸಂಭಾವನೆಯಲ್ಲಿಯೇ ಅರ್ಧದಷ್ಟು ಅಂದರೆ 5 ಕೋಟಿ ರೂಪಾಯಿ ಕಡಿಮೆ ಮಾಡಿಕೊಂಡಿದ್ದಾರೆ.[ಚೆನ್ನೈ ಮಹಾನಗರಿಗೆ ಅಕ್ಷಯ್ ಕುಮಾರ್ ಮಹಾ ದೇಣಿಗೆ]

Hindi Actor Akshay Kumar reduce his endorsement fee

ಬಾಲಿವುಡ್ ನಟ ಅಕ್ಕಿ ಅಲಿಯಾಸ್ ಅಕ್ಷಯ್ ಕುಮಾರ್ ಅವರು 'ಡ್ರಿಂಕ್ಸ್ ಮಿಕ್ಸ್ ಮೇಕರ್'ನ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡ ಪ್ರಕಾರ ಈ ವರ್ಷ ಅವರ ಸಂಭಾವನೆಯಲ್ಲಿ ಏರಿಕೆಯಾಗಬೇಕಿತ್ತು.

ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ ಹಾಗಾಗಿ ಸಾಕಷ್ಟು ಪ್ರಮಾಣದ ಹಣ್ಣು ದೊರೆಯುತ್ತಿಲ್ಲ, ಆದ್ದರಿಂದ ರೈತ ಹಾಗೂ ಕಂಪೆನಿ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವುದಾಗಿ ಖುದ್ದು ಕಂಪೆನಿಯವರು ಹೇಳಿಕೊಂಡಿದ್ದಾರೆ.[ಚಿತ್ರಗಳು: ಉದ್ಯಮಿ ಜೊತೆ ಸಪ್ತಪದಿ ತುಳಿದ ನಟಿ ಅಸಿನ್]

Hindi Actor Akshay Kumar reduce his endorsement fee

ಈ ಕಾರಣಕ್ಕಾಗಿ 'ಖಿಲಾಡಿ' ನಟ ಅಕ್ಷಯ್ ಕುಮಾರ್ ಅವರು ಒಪ್ಪಂದದ ಪ್ರಕಾರ ಈ ಬಾರಿ 10 ಕೋಟಿ ಸಂಭಾವನೆ ಪಡೆಯಬೇಕಾಗಿದ್ದವರು ರೈತರಿಗೋಸ್ಕರ ಅರ್ಧ ಸಂಭಾವನೆಯನ್ನು ಇಳಿಸಿಕೊಂಡು ಬರೇ 5 ಕೋಟಿ ರೂಪಾಯಿ ಪಡೆದಿದ್ದಾರೆ.

ಒಟ್ನಲ್ಲಿ ತೆರೆಯ ಮೇಲೆ ವಿಭಿನ್ನ ರೀತಿಯ ಸಾಮಾಜಿಕ ಕಾರ್ಯಗಳ ಪಾತ್ರಗಳನ್ನು ಮಾಡುವ ಅಕ್ಷಯ್ ಕುಮಾರ್ ಅವರು ನಿಜ ಜೀವನದಲ್ಲಿ ಕೂಡ ಅದನ್ನೇ ಪಾಲಿಸುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ.

English summary
Hindi Actor Akshay Kumar is one of the few stars who is silently working towards making lives of drought-hit farmers better. Actor Akshay, apparently, readily agreed to cut down on his charges. He was being paid a massive Rs 10 crore for the deal, which has now been reduced to Rs 5 crore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada