»   » ಅಬ್ಬಾ.! ಕೊನೆಗೂ ಸಲ್ಮಾನ್ ಖಾನ್ ವಿವಾಹ ಆಗ್ತಾರಂತೆ

ಅಬ್ಬಾ.! ಕೊನೆಗೂ ಸಲ್ಮಾನ್ ಖಾನ್ ವಿವಾಹ ಆಗ್ತಾರಂತೆ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಅಂತೂ ಇಂತೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದು, ಅದಕ್ಕಾಗಿ ಎಲ್ಲಾ ತಯಾರಿ ಮಾಡುತ್ತಿದ್ದಾರೆ. ಬಹು ದಿನಗಳ ಗೆಳತಿ ಲುಲಿಯಾ ಅವರನ್ನು ಈ ವರ್ಷದ ಅಂತ್ಯದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರಂತೆ ಸಲ್ಲು.

ಸಲ್ಮಾನ್ ಖಾನ್ ಅವರ ಅಮ್ಮನಿಗೆ ಆದಷ್ಟು ಬೇಗ ತಮ್ಮ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆತರುವ ಮನಸ್ಸಾಗಿದೆಯಂತೆ. ಅದಕ್ಕಾಗಿ ಇದೀಗ ಭಾಯ್ ಜಾನ್ ಅವರು ಅಮ್ಮನ ಆಸೆ ತೀರಿಸುವ ಉದ್ದೇಶದಿಂದ ಮದುವೆಯಾಗಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.[ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್']

Hindi Actor Salman Khan Is Getting Married To Iulia Vantur

ಕೊನೆಗೂ 50ನೇ ವಯಸ್ಸಿನಲ್ಲಿ ಮದುವೆಯಾಗುವ ಮನಸ್ಸು ಮಾಡಿರುವ ಬಾಕ್ಸಾಫೀಸ್ ಸುಲ್ತಾನ ಸಲ್ಲುಮೀಯಾ ತಮ್ಮ ದೀರ್ಘಕಾಲದ ಬ್ಯಾಚುರಲ್ ಜೀವನಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.

ಅಂದಹಾಗೆ ಸಲ್ಮಾನ್ ಖಾನ್ ಅವರಿಗೆ ಫಾರಿನ್ ಗೆಳತಿ ಲುಲಿಯಾ ವಂಟೂರ್ ಜೊತೆ ಕಳೆದ ವರ್ಷದಿಂದ ಉತ್ತಮ ಸ್ನೇಹ ಸಂಬಂಧ ಇದ್ದು, ಇದೀಗ ಅದನ್ನು ಜೀವನಪೂರ್ತಿ ಉಳಿಸಿಕೊಳ್ಳುವ ಸಲುವಾಗಿ ಇಬ್ಬರು ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ.[ಚಿತ್ರಗಳು: 8 ದಿನದ ಪುಟ್ಟ ಅಳಿಯನಿಗೆ ಸಲ್ಲು ಕೊಟ್ರು ದುಬಾರಿ ಗಿಫ್ಟ್]

Hindi Actor Salman Khan Is Getting Married To Iulia Vantur

ಸದಾ ಒಂದಲ್ಲಾ ಒಂದು ಕಾರಣ ಕೊಟ್ಟು ಮದುವೆ ವಿಚಾರದಿಂದ ಜಾರಿಕೊಳ್ಳುತ್ತಿದ್ದ ಸಲ್ಮಾನ್ ಖಾನ್ ಈ ಬಾರಿ ಮದುವೆಯಾಗುತ್ತಾರೋ ಇಲ್ವೋ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.

English summary
Bollywood Actor Salman Khan will soon tie the knot with the Romanian beauty Iulia Vantur. The Bollywood heavyweight, who turned 50 in December last year, is planning to bid goodbye to his bachelorhood by the end of 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada