»   » ಮಹಿಳೆಯೊಬ್ಬರು ಶಾರುಖ್ ಕೆನ್ನೆಗೆ ರಪ್ ಅಂತ ಬಾರಿಸಿದ್ರು

ಮಹಿಳೆಯೊಬ್ಬರು ಶಾರುಖ್ ಕೆನ್ನೆಗೆ ರಪ್ ಅಂತ ಬಾರಿಸಿದ್ರು

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಬಾದ್ ಷಾ, ಕಿಂಗ್ ಖಾನ್ ಶಾರುಖ್ ಖಾನ್ ಅವರು ಸದ್ಯಕ್ಕೆ ಬಾಲಿವುಡ್ ಕ್ಷೇತ್ರವನ್ನು ಆಳುತ್ತಿದ್ದಾರೆ. ಈಗ ಅತೀ ಎತ್ತರದ ಸ್ಥಾನದಲ್ಲಿರುವ ನಟ ಶಾರುಖ್ ಖಾನ್ ಅವರು ಒಮ್ಮೆ ರೈಲಿನಲ್ಲಿ ಒಬ್ಬ ಮಹಿಳೆಯಿಂದ ಏಟು ತಿಂದಿದ್ದಾರಂತೆ.

ಗಮನಿಸಿ..ಇದು ಯಾವುದೋ ಸಿನಿಮಾದಲ್ಲಿ ನಡೆದ ಘಟನೆ ಅಲ್ಲ ರಿಯಲ್ ಸುದ್ದಿ. ಕಿಂಗ್ ಖಾನ್ ಶಾರುಖ್ ಖಾನ್ ಅವರು ಒಮ್ಮೆ ರೈಲಿನಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಕಪಾಳ ಮೋಕ್ಷ ಕಾರ್ಯಕ್ರಮ ನಡೆದಿದ್ದು.[ಚಿತ್ರಗಳು: 'ಅಸಹಿಷ್ಣುತೆ' ಎಫೆಕ್ಟ್ ಶಾರುಖ್ ಚಿತ್ರಕ್ಕೆ ಭಾರಿ ಕಂಟಕ]

ಅಂದಹಾಗೆ ಈ ರಿಯಲ್ ಘಟನೆಯನ್ನು ಸ್ವಾರಸ್ಯಕರ ರೀತಿಯಲ್ಲಿ ವಿವರಿಸಿದ್ದು ಮಾತ್ರ ಶಾರುಖ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಫ್ಯಾನ್' ಟ್ರೈಲರ್ ರಿಲೀಸ್ ಮಾಡುವ ಸಂದರ್ಭದಲ್ಲಿ.

ಅಸಹಿಷ್ಣುತೆ ಬಗ್ಗೆ ಮಾತಾಡಿ ತೀವ್ರ ಟೀಕೆಗೆ ಒಳಗಾದ ನಂತರ ಕೊಂಚ ಜಾಗರೂಕತೆ ವಹಿಸಿರುವ ನಟ ಶಾರುಖ್ ಖಾನ್ ಅವರು 'ದಿಲ್ವಾಲೆ' ಚಿತ್ರದಿಂದಾದ ನಷ್ಟವನ್ನು ಮುಂದಿನ ಸಿನಿಮಾಗಳಾದ 'ರಾಯಿಸ್' ಮತ್ತು 'ಫ್ಯಾನ್' ಮೂಲಕ ಗಳಿಸಬೇಕೆಂದಿದ್ದಾರೆ.[ಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್]

ಇನ್ನು ಶಾರುಖ್ ಖಾನ್ ಅವರ ರೈಲಿನ ಸ್ವಾರಸ್ಯಕರ ಪಯಣದ ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮುಂಬೈಗೆ ರೈಲಿನಲ್ಲಿ ಪಯಣ

ಫ್ಯಾನ್ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಅಭಿಮಾನಿಗಳ ಜೊತೆ ಮಾತು-ಕತೆ ಆಡುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು 'ನೀವು ವಿಮಾನ ಬಿಟ್ಟರೆ ರೈಲಿನಲ್ಲಿ ಎಂದಿಗೂ ಪ್ರಯಾಣ ಮಾಡಿಲ್ಲವೇ? ಎಂದು ಪ್ರಶ್ನೆ ಕೇಳಿದ್ದಕ್ಕೆ, ಶಾರುಖ್ ಅವರು ಯಾಕಿಲ್ಲ ನಾನು ನನ್ನ ಭವಿಷ್ಯವನ್ನು ಅರಸುತ್ತಾ ಮೊದಲು ಮುಂಬೈಗೆ ಹೊರಟಿದ್ದೆ ರೈಲಿನಲ್ಲಿ ಎಂದರು.[ದಯವಿಟ್ಟು ನನ್ನ ಸಿನಿಮಾ ನೋಡಿ, ನಾನು ತಪ್ಪು ಮಾಡಿಲ್ಲ: ಶಾರುಖ್]

ಕಪಾಳ ಮೋಕ್ಷ ಕಥೆ ಬಿಚ್ಚಿಟ್ಟ ಕಿಂಗ್ ಖಾನ್

ಈ ಸಂದರ್ಭದಲ್ಲಿ ರೈಲಿನಲ್ಲಿ ನಡೆದ ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡರು. 'ರೈಲು ಮುಂಬೈ ತಲುಪಿದ ನಂತರ ಮತ್ತೆ ಸ್ಥಳೀಯ ಮಾರ್ಗಗಳಲ್ಲಿ ಚಲಿಸುತ್ತದೆ ಎಂದು ತಿಳಿಯದ ಕಿಂಗ್ ಖಾನ್ ಅವರಿದ್ದ ಬರ್ತ್ ಗೆ ಬಂದ ಮಹಿಳೆಯೊಬ್ಬರನ್ನು ಅವರು ಜಪ್ಪಯ್ಯ ಅಂದ್ರು ಕುಳಿತುಕೊಳ್ಳಲು ಬಿಡಲಿಲ್ಲವಂತೆ.['ಬೆಂಗಳೂರಿನಲ್ಲಿ ನನಗೆ ಬದುಕಲು ತುಂಬಾ ಆಸೆ' ಎಂದವರು ಯಾರು?]

ಹಠ ಮಾಡಿದ ಶಾರುಖ್

ಶಾರುಖ್ ಖಾನ್ ಅವರಿದ್ದ ಬರ್ತ್ ಗೆ ಮಹಿಳೆ ಒಂದು ಗಂಡಸಿನೊಂದಿಗೆ ಬಂದಾಗ ಶಾರುಖ್ ಅವರು ನಾನು ಕುಳಿತುಕೊಳ್ಳಲು ಬಿಡುವುದಿಲ್ಲ ಇದು ನನ್ನ ಬರ್ತ್ ಎಂದರಂತೆ, ಆದರೂ ನನ್ನ ಬರ್ತ್ ನಲ್ಲಿ ಕುಳಿತುಕೊಳ್ಳಬಹುದು ಆದರೆ ನಿಮ್ಮ ಜೊತೆ ಇರುವ ಪುರುಷನಿಗೆ ಕುಳಿತುಕೊಳ್ಳಲು ನಾನು ಅವಕಾಶ ನೀಡುವುದಿಲ್ಲ ಎಂದರಂತೆ.

ಕೆನ್ನೆಗೆ ರಪ್ ಅಂತ ಬಾರಿಸಿದ ಮಹಿಳೆ

ಶಾರುಖ್ ಅವರು ಹೀಗಂದಿದ್ದೇ ತಡ ತಕ್ಷಣ ಆ ಮಹಿಳೆ ಶಾರುಖ್ ಖಾನ್ ಅವರ ಕೆನ್ನೆಗೆ ರಪ್ ಅಂತ ಒಂದು ಬಾರಿಸಿ ಈ ರೈಲಿನಲ್ಲಿರುವ ಬರ್ತ್ ನಿನ್ನದಲ್ಲ, ಇದು ಎಲ್ಲರದ್ದು, ಅಂತ ಹೇಳಿ ಅಲ್ಲೇ ಕುಳಿತುಕೊಂಡರು ಎಂದು ಕಪಾಳ ಮೋಕ್ಷದ ಕಥೆ ಬಿಚ್ಚಿಟ್ಟಿದ್ದಾರೆ.

English summary
Superstar Shahrukh Khan himself revealed at the trailer launch of Fan, that he got slapped by a woman when he travelled to Mumbai by train.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada