ಕನ್ನಡದಲ್ಲಿ 'ಆದಿತ್ಯ' ಹೆಸರು ಹಚ್ಚೆ ಹಾಕಿಸಿಕೊಂಡ ಬಾಲಿವುಡ್ ನಟಿ!

ಬೆಡಗಿ ಮೇಘಾ ಗುಪ್ತಾ ಹಿಂದಿ ಕಿರುತೆರೆಯ ಹಾಟ್ ನಟಿಯರಲ್ಲೊಬ್ಬರು. ಇತ್ತೀಚೆಗಂತೂ ಗ್ಲಾಮರಸ್ ಫೋಟೊಶೂಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಈ ನಟಿ.

ಮೇಘಾ ಗುಪ್ತಾ ಕ್ಯಾಮೆರಾ ಎದುರು ತಮ್ಮ ಮೈಮಾಟ ಪ್ರದರ್ಶಿಸುತ್ತಿರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ. ಈ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೇಘಾರ ದೇಹದ ಮೇಲಿನ ಹಚ್ಚೆಯೊಂದು ಗಮನ ಸೆಳೆಯುತ್ತದೆ.

ಉತ್ತರ ಪ್ರದೇಶದ ಲಖನೌನಲ್ಲಿ ಜನಿಸಿದ ಮೇಘಾ ಗುಪ್ತಾಗೆ ದೂರ-ದೂರಕ್ಕೂ ಕನ್ನಡದೊಟ್ಟಿಗೆ ಸಂಬಂಧವಿಲ್ಲ. ಆದರೆ ಆಕೆಯ ದೇಹದ ಮೇಲೆ ಹೆಸರೊಂದನ್ನು ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ!

2004 ರಿಂದಲೂ ನಟನಾ ವೃತ್ತಿಯಲ್ಲಿರುವ ಮೇಘಾ ಗುಪ್ತ ಈವರೆಗೆ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಗ್ಲಾಮರ್‌ ಲುಕ್‌ನಿಂದಾಗಿಯೇ ಗಮನ ಸೆಳೆದಿರುವ ಮೇಘಾ ದೇಹದ ಮೇಲೆ 'ಆದಿತ್ಯ' ಎಂದು ಕನ್ನಡದಲ್ಲಿ ಬರೆದಿರುವ ಟ್ಯಾಟೂ ಇದೆ. ಹಾಗಿದ್ದರೆ ಯಾರು ಈ ಆದಿತ್ಯ. ಆತನ ಹೆಸರನ್ನು ಕನ್ನಡದಲ್ಲಿಯೇ ಏಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಈ ನಟಿ?

ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿರುವ ಮೇಘಾ

ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿರುವ ಮೇಘಾ

ಎದೆಯ ಕೆಳಭಾಗದಲ್ಲಿ 'ಆದಿತ್ಯ' ಎಂದು ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ ನಟಿ ಮೇಘಾ. 'ಆದಿತ್ಯ' ಎಂದರೆ ಕನ್ನಡದ ಆದಿತ್ಯ ಅಲ್ಲ, ಮೇಘಾ ಗುಪ್ತಾರ ಮೊದಲ ಪತಿಯ ಹೆಸರು ಆದಿತ್ಯ ಶ್ರಾಫ್. ಅವರ ಹೆಸರನ್ನೇ ನಟಿ ಮೇಘಾ ಗುಪ್ತಾ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪತಿಯ ಹೆಸರು ಹಚ್ಚೆ ಹಾಕಿಸಿಕೊಂಡಿದ್ದು ಸರಿ ಆದರೆ ಕನ್ನಡದಲ್ಲಿಯೇ ಏಕೆ? ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಹಚ್ಚೆ ಹಾಕಿಸಿಕೊಳ್ಳುವವರು ಇತರರಿಗೆ ಅರ್ಥವಾಗದಿರಲೆಂದು ಚೈನೀಸ್ ಭಾಷೆಯಲ್ಲಿ ಇನ್ನಿತರ ಭಾಷೆಗಳಲ್ಲಿ ಪ್ರೀತಿ ಪಾತ್ರರ ಹೆಸರು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಇದೇ ಕಾರಣಕ್ಕೆ ಮೇಘಾ ಸಹ ಆದಿತ್ಯ ಹೆಸರನ್ನು ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿರುವ ಸಾಧ್ಯತೆ ಇದೆ.

2010 ರಲ್ಲಿ ವಿವಾಹ, 2014 ರಲ್ಲಿ ವಿಚ್ಛೇದನ

2010 ರಲ್ಲಿ ವಿವಾಹ, 2014 ರಲ್ಲಿ ವಿಚ್ಛೇದನ

ಮೇಘಾ ಗುಪ್ತಾ ಹಾಗೂ ಆದಿತ್ಯ ಶ್ರಾಫ್ 2010ರಲ್ಲಿ ವಿವಾಹವಾಗಿದ್ದರು. ಯೋಗ ಟೀಚರ್ ಹಾಗೂ ನವೋದ್ಯಮಿ ಆಗಿರುವ ಆದಿತ್ಯ ಶ್ರಾಫ್‌ ಜೊತೆಗೆ ನಾಲ್ಕು ವರ್ಷಗಳ ವಿವಾಹ ಬಂಧನದ ಬಳಿಕ 2014 ರಲ್ಲಿ ಮೇಘಾ ಗುಪ್ತಾ ವಿಚ್ಛೇದನ ಪಡೆದು ದೂರಾದರು. ವಿಚ್ಛೇದನ ಪಡೆದರೂ ಸಹ ಮೊದಲ ಪತಿಯ ಹೆಸರಿನ ಹಚ್ಚೆಯನ್ನು ಅಳಿಸಿಲ್ಲ ನಟಿ ಮೇಘಾ. ಆದಿತ್ಯ ಶ್ರಾಫ್, ಮೇಘಾರನ್ನು ವಿವಾಹವಾಗುವ ಮುಂಚೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಜೊತೆ ಕೆಲ ಸಮಯ ಡೇಟಿಂಗ್ ಮಾಡಿದ್ದರು. ಆದರೆ ಸೋನಾಕ್ಷಿ ಬಾಲಿವುಡ್‌ನಲ್ಲಿ ಖ್ಯಾತಿಗಳಿಸಿದ ಬಳಿಕ ಇವರಿಬ್ಬರೂ ದೂರಾದರು.

2014 ರಲ್ಲಿ ಸಿದ್ಧಾಂತ್ ಕಾರ್ನಿಕ್ ಜೊತೆ ವಿವಾಹ

2014 ರಲ್ಲಿ ಸಿದ್ಧಾಂತ್ ಕಾರ್ನಿಕ್ ಜೊತೆ ವಿವಾಹ

2014 ರಲ್ಲಿ ಆದಿತ್ಯ ಶ್ರಾಫ್ ಜೊತೆ ವಿಚ್ಛೇದನ ಪಡೆದ ಬಳಿಕ ಸಿದ್ಧಾಂತ್ ಕಾರ್ನಿಕ್ ಅನ್ನು ವಿವಾಹವಾದರು ಮೇಘಾ. ಅವರೊಟ್ಟಿಗೂ ಸಹ ನಾಲ್ಕು ವರ್ಷಗಳ ಸಂಸಾರದ ಬಳಿಕ 2020 ರಲ್ಲಿ ವಿಚ್ಛೇದನ ಪಡೆದುಕೊಂಡರು. ಸಿದ್ಧಾಂತ್ ಕಾರ್ನಿಕ್ ಸಹ ನಟರಾಗಿದ್ದ ಹಲವು ಟಿವಿ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿದ್ಧಾಂತ್ ಜೊತೆಗೆ ವಿಚ್ಛೇಧನದ ಬಳಿಕ ಪ್ರಸ್ತುತ ಸಿಂಗಲ್ ಆಗಿದ್ದಾರೆ ನಟಿ ಮೇಘಾ ಗುಪ್ತಾ.

2018 ರಿಂದ ನಟನೆಯಿಂದ ದೂರ

2018 ರಿಂದ ನಟನೆಯಿಂದ ದೂರ

2004 ರಲ್ಲಿ ಕುಸುಮ್ ಧಾರಾವಾಹಿಯಲ್ಲಿ ಪೋಷಕ ಪಾತ್ರಧಾರಿಯಾಗಿ ನಟನೆ ಆರಂಭಿಸಿದ ಮೇಘಾ ಗುಪ್ತಾ ಆ ನಂತರ ಹಲವಾರು ಧಾರಾವಾಹಿಗಳಲ್ಲಿ ನಟಿಸಿದರು. ನಚ್ ಬಲಿಯೇ ಸೇರಿದಂತೆ ಕೆಲವು ಜನಪ್ರಿಯ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದರು. 2018 ರಲ್ಲಿ ಉಲ್ಲು ಒಟಿಟಿಗೆ 'ಬ್ರೈಬ್' ಹೆಸರಿನ ಸೆಮಿ ಸೆಕ್ಸ್ ವೆಬ್ ಸರಣಿಯಲ್ಲಿ ಸಹ ನಟಿಸಿದರು. ಈ ವೆಬ್ ಸರಣಿಯಲ್ಲಿ ಅವರದ್ದು ವೇಶ್ಯೆಯ ಪಾತ್ರ. 2018 ರ ಬಳಿಕ ನಟನೆಯಿಂದ ದೂರ ಉಳಿದಿದ್ದಾರೆ ಮೇಘಾ ಆದರೆ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಸಾಕಷ್ಟು ಬಿಕಿನಿ ಫೋಟೊ ಶೂಟ್‌ಗಳಿಗೂ ಫೋಸು ನೀಡುತ್ತಿರುತ್ತಾರೆ ಈ ನಟಿ.

More from Filmibeat

English summary
Hindi actress Megha Gupta tattooed a name in Kannada language. She tattooed her first husband Aditya's name in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X