ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ

By ಸೋನು ಗೌಡ

ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಅವರಿಗೆ ಇಂದು (ಜುಲೈ 18)ಸಂಭ್ರಮದ ದಿನ. ಬಾಲಿವುಡ್-ಹಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಪ್ರಿಯಾಂಕ ಅವರಿಗೆ ಇಂದು (ಜುಲೈ 18) ಹುಟ್ಟುಹಬ್ಬದ ಸಂಭ್ರಮ. ಇಂದಿಗೆ ಪ್ರಿಯಾಂಕ ಅವರು ಭರ್ತಿ 34 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಹಾಲಿವುಡ್ ನ 'ಕ್ವಾಂಟಿಕೋ' ಎಂಬ ಟಿವಿ ಸೀರೀಸ್ ಮೂಲಕ ಹಾಲಿವುಡ್ ಕ್ಷೇತ್ರದಲ್ಲೂ ಫೇಮಸ್ ಆದ ನಟಿಗೆ 'ಬೇವಾಚ್' ಎಂಬ ಹಾಲಿವುಡ್ ಸಿನಿಮಾದ ಮೂಲಕ ನಟಿಸಲು ಅಪೂರ್ವ ಅವಕಾಶ ದೊರೆಯಿತು.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

ಸದಾ ಪಾಸಿಟಿವ್ ಮನೋಭಾವವನ್ನು ಹೊಂದಿರುವ ನಟಿ ಪಿಗ್ಗಿ ಅವರಿಗೆ ನಟನೆ ಎಂದರೆ ಬಲು ಸಲೀಸು. ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿರುವ ನಟಿ ಇದೀಗ ಹಲವು ಹೊಸ ಪ್ರತಿಭೆಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ.

ಎಲ್ಲೋ ಇರಬೇಕಾದವರು ಅಪ್ಪಿ-ತಪ್ಪಿ ನಟನಾ ಕ್ಷೇತ್ರಕ್ಕೆ ಧುಮುಕಿ ಇದೀಗ ನಟನೆಯಲ್ಲಿ ಪ್ರೊಫೆಶನಲ್ ಈಜುಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಪಿಗ್ಗಿ ಅವರ ಕೆಲವು ಅಪರೂಪದ ವಿಚಾರಗಳನ್ನು ತಿಳಿದುಕೊಳ್ಳೋಣ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

18ನೇ ವಯಸ್ಸಿನಲ್ಲಿ ಮಿಸ್ ವರ್ಲ್ಡ್

18ನೇ ವಯಸ್ಸಿನಲ್ಲಿ ಮಿಸ್ ವರ್ಲ್ಡ್

ಬಿಹಾರ ಮೂಲದ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ 18ನೇ ವಯಸ್ಸಿನಲ್ಲಿ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದರು. ತದನಂತರ 2003 ರಲ್ಲಿ ಬಾಲಿವುಡ್ ಗೆ ಧುಮುಕಿದ ನಟಿ ಮೊಟ್ಟ ಮೊದಲ ಬಾರಿಗೆ ಸನ್ನಿ ಡಿಯೋಲ್ ಅವರ ಜೊತೆ 'ದ ಹೀರೋ: ಲವ್ ಸ್ಟೋರಿ ಆಫ್ ಸ್ಪೇ' ಎಂಬ ಚಿತ್ರದಲ್ಲಿ ಮಿಂಚಿದರು. ಅದಕ್ಕೂ ಮುನ್ನ ತಮಿಳು ನಟ ವಿಜಯ್ ಅವರ ಜೊತೆ 2002 ರಲ್ಲಿ 'ಥಮೀಝಾನ್' ಎಂಬ ತಮಿಳು ಚಿತ್ರದಲ್ಲಿ ಮಿಂಚಿದ್ದರು.['ಇವರನ್ನು' ಪ್ರಿಯಾಂಕ ಅನ್ಕೊಂಡ್ರಾ, ಖಂಡಿತ ಅಲ್ವೇ ಅಲ್ಲ.!]

ಅಪ್ಪನ ಮುದ್ದಿನ ಮಗಳು

ಅಪ್ಪನ ಮುದ್ದಿನ ಮಗಳು

ಪಿಗ್ಗಿ ಅಪ್ಪನ ಹೆಸರು ಡಾ.ಅಶೋಕ್ ಚೋಪ್ರಾ. ಅಪ್ಪನ ಮುದ್ದಿನ ಮಗಳಾದ ಪ್ರಿಯಾಂಕ ಅವರು ಯಾವಾಗಲೂ ಅಪ್ಪನೇ ಜೊತೆನೇ ಇರುತ್ತಿದ್ದರು. ಪಿಗ್ಗಿಯ ಪ್ರತಿಯೊಂದು ಸಮಾರಂಭದಲ್ಲೂ ಅವರ ಅಪ್ಪ ಹಾಜರಿರುತ್ತಿದ್ದರು. ಅಪ್ಪ ತೀರಿಕೊಂಡ ಸಂದರ್ಭದಲ್ಲಿ ಪಿಗ್ಗಿ ತುಂಬಾ ನೊಂದಿದ್ದರು. ಅಂದಹಾಗೆ ಪಿಗ್ಗಿ ಅವರು ತಮ್ಮ ಅಮ್ಮನನ್ನು ಅಮ್ಮ ಅನ್ನೋ ಭಾವನೆಗಿಂತ ಹೆಚ್ಚಾಗಿ ಗೆಳತಿ ತರ ನೋಡುತ್ತಾರೆ.['ಬೇವಾಚ್' ಕಂಪ್ಲೀಟ್ ಆದ ಖುಷಿಯಲ್ಲಿ ಪ್ರಿಯಾಂಕ ಲಿಪ್ ಲಾಕ್ ಮಾಡಿದ್ರಾ?]

ಅಂದಾಝ್ ಹಿಟ್

ಅಂದಾಝ್ ಹಿಟ್

2003 ರಲ್ಲಿ ನಟಿಸಿದ 'ಅಂದಾಝ್' ಹಾಗೂ 2004 ರಲ್ಲಿ ನಟಿಸಿದ ಮುಝ್ ಸೇ ಶಾದಿ ಕರೋಗಿ' ಬಾಕ್ಸಾಪೀಸ್ ನಲ್ಲಿ ಹಿಟ್ ಆಗಿದ್ದೇ ತಡ ಪಿಗ್ಗಿಗೆ ಅವಕಾಶಗಳು ಹರಿದು ಬರಲಾರಂಭಿಸಿದವು. 2006ರ ನಂತರ ಪ್ರಿಯಾಂಕ ಅವರು 'ಡಾನ್', 'ಕ್ರಿಷ್' ಸಿನಿಮಾದಲ್ಲಿ ಮಿಂಚಿದರು. 2008 ರಲ್ಲಿ 'ಫ್ಯಾಶನ್' ಚಿತ್ರದಲ್ಲಿ ನಟಿಸಿದ ಪಿಗ್ಗಿ ಎಲ್ಲರ ಮೆಚ್ಚುಗೆ ಗಳಿಸಿ ಅತ್ಯುತ್ತಮ ನಟಿ ಎಂದು 'ನ್ಯಾಷನಲ್ ಫಿಲ್ಮ್ ಫೇರ್' ಆವಾರ್ಡ್ ಪಡೆದುಕೊಂಡರು.

ಸಾಲು-ಸಾಲು ಸಿನಿಮಾ

ಸಾಲು-ಸಾಲು ಸಿನಿಮಾ

2009 ರಲ್ಲಿ 'ಕಮೀನೇ', 7 ಖೂನ್ ಮಾಫ್, ಬರ್ಫಿ, ಮೇರಿ ಕೋಮ್, ದಿಲ್ ಧಡಕನೇ ದೋ, ಬಾಜೀರಾವ್ ಮಸ್ತಾನಿ, ಜೈ ಗಂಗಾಜಲ್ ಮುಂತಾದ ಸಾಲು-ಸಾಲು ಚಿತ್ರಗಳಲ್ಲಿ ಕೆಲವೊಂದು ಬಿಗ್ ಬ್ರೇಕ್ ಕೊಟ್ಟರೆ ಕೆಲವು ಚಿತ್ರಗಳು ಮೆಚ್ಚುಗೆ ಪಡೆದುಕೊಂಡವು. 'ಬಾಜೀರಾವ್ ಮಸ್ತಾನಿ' ಚಿತ್ರದ ನಟನೆಗೆ 'ಅತ್ಯುತ್ತಮ ಪೋಷಕ ನಟಿ' ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡರು.

ಹಾಲಿವುಡ್ ಬೇವಾಚ್

ಹಾಲಿವುಡ್ ಬೇವಾಚ್

ಹಾಲಿವುಡ್ ಟಿವಿ ಸೀರಿಸ್ 'ಕ್ವಾಂಟಿಕೋ' ದಲ್ಲಿ ನಟಿಸಿದ ಪರಿಣಾಮ ಇದೀಗ ಹಾಲಿವುಡ್ ನಟ ಡ್ವೈನ್ ಜಾನ್ಸನ್ ಅವರ ಜೊತೆ 'ಬೇವಾಚ್' ಎಂಬ ಚಿತ್ರದಲ್ಲಿ ಸೆಕ್ಸಿ ವಿಲನ್ ರೋಲ್ ಮಾಡಿದ್ದಾರೆ. ಸದ್ಯಕ್ಕೆ ಚಿತ್ರದ ಶೂಟಿಂಗ್ ಮುಗಿದಿದ್ದು, ಮೇ 19, 2017ಗೆ ತೆರೆ ಕಾಣುತ್ತಿದೆ. ಜೊತೆಗೆ ಪಿಗ್ಗಿ ಅವರು ಈ ವರ್ಷ 'ಆಸ್ಕರ್' ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ಹೆಮ್ಮೆಯ ಬಾಲಿವುಡ್ ನಟಿಯಾಗಿದ್ದಾರೆ.[44ನೇ ವರ್ಷಕ್ಕೆ ಕಾಲಿಟ್ಟ ಡ್ವೈನ್: ಶುಭಾಶಯ ಕೋರಿದ ಪ್ರಿಯಾಂಕ]

ಪೀಪಲ್ ಚಾಯ್ಸ್ ಅವಾರ್ಡ್

ಪೀಪಲ್ ಚಾಯ್ಸ್ ಅವಾರ್ಡ್

ನಟಿ ಪ್ರಿಯಾಂಕ ಚೋಪ್ರಾ ಅವರು 'ಕ್ವಾಂಟಿಕೋ' ಸೀರಿಯಲ್ ನ ಅತ್ಯುತ್ತಮ ನಟನೆಗೆ ಮೊಸ್ಟ್ ಫೇವರಿಟಿ ನಟಿ ಎಂದು 'ಪೀಪಲ್ ಚಾಯ್ಸ್' ಆವಾರ್ಡ್ ಗಿಟ್ಟಿಸಿಕೊಂಡ ಏಷ್ಯಾದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೇ ಈ ವರ್ಷ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಿಶೆಲ್ ಒಬಾಮ ದಂಪತಿಗಳ ಜೊತೆ ಡಿನ್ನರ್ ಸವಿದು ಬಂದ ಹೆಗ್ಗಳಿಕೆ ಪಿಗ್ಗಿ ಅವರದು.[ಭೋಜನ ಸವಿದ ನಂತರ ಒಬಾಮಾ ಬಗ್ಗೆ ಪ್ರಿಯಾಂಕ ಮಾಡಿದ ಕಾಮೆಂಟ್ ಏನು?]

ಇಂಜಿನಿಯರ್ ಆಗಬೇಕಿತ್ತು

ಇಂಜಿನಿಯರ್ ಆಗಬೇಕಿತ್ತು

ನಟಿ ಪ್ರಿಯಾಂಕ ಚೋಪ್ರಾ ಅವರು ಬಾಲ್ಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಮತ್ತು ಕಥಕ್ ಅಭ್ಯಾಸ ಮಾಡಿದ್ದರು. ಅಲ್ಲದೇ ನಾಟಕಗಳಲ್ಲಿಯೂ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದರು. ಮಾಡೆಲಿಂಗ್ ಕ್ಷೇತ್ರಕ್ಕೆ ಬರೋ ಮುನ್ನ ಇಂಜಿನಿಯರ್ ಅಥವಾ ಪೈಲಟ್ ಆಗಬೇಕೆಂಬ ಕನಸು ಪಿಗ್ಗಿ ಅವರಿಗಿತ್ತು. ಆದರೆ ಏನೋ ಅಪ್ಪಿ-ತಪ್ಪಿ ಸಿನಿಮಾ ಕ್ಷೇತ್ರಕ್ಕೆ ಬಂದು ಇದೀಗ 'ಗ್ಲೋಬಲ್ ಐಕಾನ್' ಆಗಿದ್ದಾರೆ.

ಹ್ಯಾಪಿ ಬರ್ತ್ ಡೇ

ಹ್ಯಾಪಿ ಬರ್ತ್ ಡೇ

ಸದ್ಯಕ್ಕೆ 'ಕ್ವಾಂಟಿಕೋ' ಭಾಗ 2'ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿಯ ಎಲ್ಲಾ ಕನಸುಗಳು ಈಡೇರಲಿ ಎಂದು ಹಾರೈಸುತ್ತಾ ಹ್ಯಾಪಿ ಬರ್ತ್ ಡೇ ಹೇಳಿ.

More from Filmibeat

English summary
Hindi Actress Priyanka Chopra Celebrates Her 34th Birthday Today (July 18th). She celebrated her birthday in style with her bollywood friends. Here is the interesting factors about actress Priyanka Chopra check it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X