Rashami Desai: ಸಹನಟನ ಅಭಿಮಾನಿಗಳ ವಿರುದ್ಧ ದೂರು ನೀಡಿದ ನಟಿ

ನಟಿಯೊಬ್ಬರು ಆಕೆಯ ಸಹ ನಟನ ಅಭಿಮಾನಿಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಸಿನಿಮಾ, ಕಿರುತೆರೆಯಲ್ಲಿ ಜನಪ್ರಿಯ ತಾರೆಯಾಗಿರುವ ರಶ್ಮಿ ದೇಸಾಯಿ ವಿರುದ್ಧ ನಟ ಉಮರ್ ರಿಯಾಜ್ ವಿರುದ್ಧ ಮುಗಿಬಿದ್ದಿದ್ದು, ಅಭಿಮಾನಿಗಳ ಸತತ ನಿಂದನೆ ತಾಳಲಾರದೆ ನಟಿ ಪೊಲೀಸರ ನೆರವು ಕೋರಿದ್ದಾರೆ.

ಆಗಿದ್ದಿಷ್ಟು, ನಟಿ ರಶ್ಮಿ ದೇಸಾಯಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾವು ಉಮರ್ ರಿಯಾಜ್ ಅನ್ನು ಡೇಟಿಂಗ್ ಮಾಡುತ್ತಿಲ್ಲ, ನಾವಿಬ್ಬರು ಒಳ್ಳೆಯ ಗೆಳೆಯರು ಎಂದಿದ್ದರು. ಇಷ್ಟಕ್ಕೆ ಸುಮ್ಮನಾಗಿದ್ದಿದ್ದರೆ ಎಲ್ಲವೂ ಸರಿ ಇರುತ್ತಿತ್ತೇನೊ, ಆದರೆ ಮುಂದುವರೆದು, ಉಮರ್‌ರ ಖಾಸಗಿ ಜೀವನದ ಬಗ್ಗೆ ಕಮೆಂಟ್ ಮಾಡಿದ್ದರು. ಉಮರ್ ಈಗಾಗಲೇ ಮತ್ತೊಬ್ಬ ಹುಡುಗಿಯ ಜೊತೆ ಸಂಬಂಧದಲ್ಲಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಂದರ್ಶನದಲ್ಲಿ ಹೇಳಿದ್ದರು. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

Hindi Actress Rashmi Desai Gave Complaint Against Actor Umar Riazs Fans

''ಗೆಳೆಯ ಎಂದು ಗೆಳೆಯನ ಖಾಸಗಿ ಜೀವನದ ಬಗ್ಗೆ ಮಾಧ್ಯಮಗಳ ಎದುರು ಮಾತನಾಡುತ್ತೀರಲ್ಲ. ನಿಮ್ಮ ಇಮೇಜ್‌ ಶುದ್ಧವಾಗಿದೆ ಎಂದು ತೋರಿಸಲು ಬೇರೆಯವರ ಇಮೇಜ್ ಹಾಳು ಮಾಡುವುದು ಸರಿಯಲ್ಲ'' ಎಂಬಿತ್ಯಾದಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಇನ್ನು ಕೆಲವರಂತೂ ನಟಿಯ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ, ಕೆಲವರು ಕುಟುಂಬದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಬೆದರಿಕೆಯನ್ನೂ ಹಾಕಿದ್ದಾರೆ. ಆರಂಭದಲ್ಲಿ ಇದನ್ನೆಲ್ಲ ನೋಡಿ ಸುಮ್ಮನಿದ್ದ ನಟಿ ರಶ್ಮಿ ದೇಸಾಯಿ ಇದೀಗ ಪೊಲೀಸ್ ಸಹಾಯ ಕೋರಿದ್ದು, ತಮಗೆ ಧಮ್ಕಿ ಹಾಕಿದವರ ವಿರುದ್ಧ, ನಿಂದನೆ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ.

ಕೆಟ್ಟದಾಗಿ ಕಮೆಂಟ್ ಮಾಡಿದ ಉಮರ್ ಅಭಿಮಾನಿಗಳು ಕೆಲವರಿಗೆ ಟ್ವಿಟ್ಟರ್‌ನಲ್ಲಿ ಖಡಕ್‌ ಆಗಿಯೇ ಉತ್ತರ ನೀಡಿರುವ ನಟಿ, ನಿಂದನೆ ಹೆಚ್ಚಾದಾಗ ಟ್ವಿಟ್ಟರ್ ಮೂಲಕ ಮುಂಬೈ ಪೊಲೀಸರ ನೆರವು ಕೇಳಿದ್ದಾರೆ. ತಮ್ಮ ವಿರುದ್ಧ ಕೆಟ್ಟ ಕಮೆಂಟ್ ಮಾಡಿದ ಕೆಲವರ ಹೆಸರುಗಳನ್ನು, ಟ್ವಿಟ್ಟರ್ ಖಾತೆಗಳನ್ನು ಉಲ್ಲೇಖಿಸಿ ಮುಂಬೈ ಪೊಲೀಸ್ ಹಾಗೂ ಸೈಬರ್ ಪೊಲೀಸ್‌ಗೆ ಟ್ವೀಟ್ ಮಾಡಿರುವ ರಶ್ಮಿ ದೇಸಾಯಿ, ''ದಯವಿಟ್ಟು ಈ ವಿಷಯದ ಬಗ್ಗೆ ಗಮನ ಕೊಡಿ, ಇವರು ನನ್ನ ಹಾಗೂ ನನ್ನ ಕುಟುಂಬದ ಗೌರವಕ್ಕೆ ಧಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ಇದು ನಿಜವಾಗಿಯೂ ಅಭಿಮಾನವಾ? ಅಥವಾ ನನ್ನ ವಿರುದ್ಧ ನಡೆಯುತ್ತಿರುವ ಉದ್ದೇಶಿತ ದಾಳಿಯೇ ಗೊತ್ತಾಗುತ್ತಿಲ್ಲ. ನನ್ನ ಕುಟುಂಬದ ವಿಷಯವನ್ನೂ ಎಳೆದು ತಂದು ಮಾನ ಹಾನಿ ಮಾಡಲಾಗುತ್ತಿದೆ'' ಎಂದಿದ್ದಾರೆ.

ಉಮರ್ ಬಗ್ಗೆ ಮಾತನಾಡಿದ ಸಂದರ್ಶನದಲ್ಲಿಯೇ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿರುವ ರಶ್ಮಿ ದೇಸಾಯಿ, ''ನಾನು ಯಾರನ್ನೂ ಪ್ರೀತಿಸುತ್ತಿಲ್ಲ. ನನಗೆ ಪ್ರೀತಿ ಬೇಕಾಗಿಲ್ಲ ಸಹ. ನಾನು ಯಾರನ್ನೂ ಮದುವೆಯಾಗುವ ಆಸೆಯಲ್ಲಿಯೂ ಇಲ್ಲ. ಪ್ರೀತಿ ಇಲ್ಲದೆಯೂ ನಾನು ಖುಷಿಯಾಗಿ, ಸಂತೋಶವಾಗಿ ಇರಬಲ್ಲೆ ಎಂಬುದನ್ನು ಕಂಡುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಹಾಗೆಯೇ ಇರಲಿದ್ದೇನೆ'' ಎಂದಿದ್ದಾರೆ.

ರಶ್ಮಿ ದೇಸಾಯಿ ಹಾಗೂ ಉಮರ್ ಇಬ್ಬರೂ ಒಟ್ಟಿಗೆ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿಯಲ್ಲೂ ಒಟ್ಟಿಗೆ ನಟಿಸಿದ್ದರು. ಹಾಗಾಗಿ ಈ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಹಾಗಾಗಿಯೇ ರಶ್ಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದರೆ ಅದನ್ನು ಅಭಿಮಾನಿಗಳು ಅಫೆನ್ಸಿವ್ ಆಗಿ ಸ್ವೀಕರಿಸಿದರು.

More from Filmibeat

English summary
Hindi actress Rashmi Desai gave complaint against actor Umar Riaz's fans. She said they are defaming and threatening her and her family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X