»   » ಬಾಕ್ಸ್ ಆಫೀಸ್ ನಲ್ಲಿ ಹ್ಯಾಟ್ರಿಕ್ ದಾಖಲೆ ಮಾಡಿದ ಶ್ರದ್ಧಾ ಕಪೂರ್

ಬಾಕ್ಸ್ ಆಫೀಸ್ ನಲ್ಲಿ ಹ್ಯಾಟ್ರಿಕ್ ದಾಖಲೆ ಮಾಡಿದ ಶ್ರದ್ಧಾ ಕಪೂರ್

Posted By:
Subscribe to Filmibeat Kannada

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಚಿತ್ರರಂಗ ಕ್ಷೇತ್ರಕ್ಕೆ ಕಾಲಿಟ್ಟ ಘಳಿಗೆ ಚೆನ್ನಾಗಿತ್ತು ಅನಿಸುತ್ತದೆ. ಏಕೆಂದರೆ ಅವರು ನಟಿಸಿದ ಚಿತ್ರಗಳಲ್ಲಿ ಮೂರು ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿವೆ. ಮಾತ್ರವಲ್ಲದೇ 27 ವರ್ಷದ ನಟಿ ಬಾಲಿವುಡ್ ಕ್ಷೇತ್ರದಲ್ಲಿ ಬಹಳ ಬೇಗನೆ ಗುರುತಿಸಿಕೊಂಡರು.

ನಟಿ ಶ್ರದ್ಧಾ ಕಪೂರ್ ಮತ್ತು ನಟ ಟೈಗರ್ ಶ್ರಾಫ್ ಒಂದಾಗಿ ಮಿಂಚಿದ್ದ, ಕಳೆದ ವಾರ ತೆರೆಕಂಡ 'ಬಾಗಿ' ಸಿನಿಮಾ ಕೂಡ ಬಾಕ್ಸಾಪೀಸ್ ಕೊಳ್ಳೆ ಹೊಡೆಯುತ್ತಿದೆ. ಶಬ್ಬೀರ್ ಖಾನ್ ನಿರ್ದೇಶನ ಮಾಡಿದ್ದ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಬರೋಬ್ಬರಿ 11.87 ಕೋಟಿ ರೂಪಾಯಿ. ಹಾಗೂ ಒಂದು ವಾರದ ಕಲೆಕ್ಷನ್ ಸುಮಾರು 50 ಕೋಟಿ ದಾಟಿದೆ.

Hindi Actress Shraddha Kapoor makes Hat-trick at Box-Office

ಮಾತ್ರವಲ್ಲದೇ ಶ್ರದ್ಧಾ ಕಪೂರ್ ಅವರು ನಟಿಸಿರುವ ಮೂರು ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಎರಡಂಕಿ ದಾಟಿವೆ. ಹೌದು ಶ್ರದ್ಧಾ ಅವರ 'ಏಕ್ ವಿಲನ್' ಮೊದಲ ದಿನ ಮಾಡಿದ ಕಲೆಕ್ಷನ್ ಸುಮಾರು 16.72 ಕೋಟಿ, 'ಎಬಿಸಿಡಿ 2' ಮೊದಲ ದಿನದ ಕಲೆಕ್ಷನ್ 14.3 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಶ್ರದ್ಧಾ ಅವರು ಇದೀಗ ಹ್ಯಾಟ್ರಿಕ್ ಸಾಧನೆ ಮಾಡಿದಂತಿದೆ.

Hindi Actress Shraddha Kapoor makes Hat-trick at Box-Office

'ಆಶಿಕಿ 2' ಚಿತ್ರದ ನಂತರ ಮತ್ತೆ ನಟ ಆದಿತ್ಯ ರಾಯ್ ಕಪೂರ್ ಅವರ ಜೊತೆ ತಮಿಳಿನ 'ಓಕೆ ಕಣ್ಮಣಿ' ರಿಮೇಕ್ ನಲ್ಲಿ ಮಿಂಚುತ್ತಿರುವ ಕಪೂರ್ ಜೋಡಿಗಳು ಈ ಚಿತ್ರದಲ್ಲೂ ಬಾಕ್ಸಾಪೀಸ್ ಉಡೀಸ್ ಮಾಡ್ತಾರೋ ಅನ್ನೋದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

English summary
Hindi Actress Shraddha Kapoor has scored a hat-trick of double-digit openings with her past three releases, ‘Ek Villain,’ ‘ABCD-2’ and the very recent ‘Baaghi'. very first day, ‘Ek Villain’ earned Rs. 16.72 crores, ‘ABCD 2’ earned Rs. 14.3 crores and ‘Baaghi’ raked in Rs. 11.87 crores.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X