twitter
    For Quick Alerts
    ALLOW NOTIFICATIONS  
    For Daily Alerts

    'ಬ್ರಿಟಿಷರು ನಮ್ಮನ್ನು ಒಡೆದಿದ್ದು ಹೀಗೆ': ಕಿಚ್ಚನ ಹೇಳಿಕೆಗೆ ಅಕ್ಷಯ್ ಪರೋಕ್ಷ ಪ್ರತಿಕ್ರಿಯೆ

    |

    ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ರಾಷ್ಟ್ರ ಬಗ್ಗೆ, ಉತ್ತರ ಭಾರತ, ದಕ್ಷಿಣ ಭಾರತ ಎಂಬುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ 'ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ' ಎಂಬ ಹೇಳಿಕೆಯ ಬಳಿಕವಂತೂ ಇದು ಮತ್ತಷ್ಟು ಚರ್ಚೆಗೆ ಬಂದಿತ್ತು.

    ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ ಎಂಬ ಹೇಳಿಕೆ ಕೆಲವು ದಿನಗಳ ಹಿಂದೆ ಬಾಲಿವುಡ್ ನಟ ಅಜಯ್ ದೇವಗನ್ ವಿರೋಧ ವ್ಯಕ್ತಪಡಿಸಿದ್ದರು. ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವೆ ಟ್ವಿಟರ್ ವಾರ್ ನಡೆದಿತ್ತು. ಆ ವೇಳೆ ನೆಟ್ಟಿಗರು ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದರು.

    ದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆ

    Recommended Video

    Akshay Kumar | Sudeep | 'ಬ್ರಿಟಿಷರು ನಮ್ಮನ್ನು ಒಡೆದಿದ್ದು ಹೀಗೆ' ಎಂದ ಅಕ್ಷಯ್ ಕುಮಾರ್

    ಈಗ ಅಕ್ಷಯ್ ಕುಮಾರ್ ಅಖಾಡಕ್ಕೆ ಇಳಿಸಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಅನ್ನುವ ವಾದ-ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅನ್ನುವುದರ ಬಗ್ಗೆನೂ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಹಾಗಿದ್ದರೆ, ಬಾಲಿವುಡ್‌ ಅಕ್ಷಯ್ ಕುಮಾರ್ ಈ ವಿವಾದದ ಬಗ್ಗೆ ನೀಡಿದ ಪ್ರತಿಕ್ರಿಯೆಯೇನು? ಎಂದು ತಿಳಿಯಲು ಮುಂದೆ ಓದಿ.

    ಅಕ್ಷಯ್ ಕುಮಾರ್ ರಿಯಾಕ್ಷನ್ ಏನು?

    ಅಕ್ಷಯ್ ಕುಮಾರ್ ರಿಯಾಕ್ಷನ್ ಏನು?

    ಕಳೆದ ಎರಡು ವಾರಗಳಿಂದ ರಾಷ್ಟ್ರ ಭಾಷೆಯ ವಿಚಾರವಾಗಿ ದೇಶವ್ಯಾಪಿ ಚರ್ಚೆಯಾಗುತ್ತಿದೆ. ಅದರಲ್ಲೂ ಪತ್ರಿಕಾ ಗೋಷ್ಠಿಯಲ್ಲಿ ಸುದೀಪ್ "ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ" ಎಂಬ ಹೇಳಿಕೆ ಹಲವರ ನಿದ್ದೆ ಕೆಡಿಸಿತ್ತು. ಬಾಲಿವುಡ್‌ನ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಇದರಲ್ಲಿ ಬಾಲಿವುಡ್ ನಟ ಅಜಯ್ ದೇವಗನ್, ಅರ್ಜುನ್ ರಾಮ್‌ಪಾಲ್ ಕೂಡ ಹಿಂದಿ ರಾಷ್ಟ್ರ ಭಾಷೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಅಕ್ಷಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ, ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಗೈರು!ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ, ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಗೈರು!

    ಬ್ರಿಟಿಷರಿಂದ ನಾವು ಬುದ್ಧಿ ಕಲಿತಿಲ್ಲ

    ಬ್ರಿಟಿಷರಿಂದ ನಾವು ಬುದ್ಧಿ ಕಲಿತಿಲ್ಲ

    ಅಕ್ಷಯ್ ಕುಮಾರ್ ತನ್ನ ಹೊಸ ಸಿನಿಮಾ 'ಪೃಥ್ವಿರಾಜ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಪ್ರತಿಕ್ರಿಯಲ್ಲಿ ಭಾಷೆ ಹಾಗೂ ಉತ್ತರ-ದಕ್ಷಿಣ ಎಂಬ ಕಲ್ಪನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಚಿತ್ರರಂಗವನ್ನು ಯಾರಾದರೂ ಉತ್ತರ ಭಾರತ ಚಿತ್ರರಂಗ. ದಕ್ಷಿಣ ಭಾರತದ ಚಿತ್ರರಂಗ ಎಂದು ಕರೆಯುವುದು ನನಗೆ ಇಷ್ಟವಿಲ್ಲ. ಇಂತಹ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು. ನಾವೆಲ್ಲರೂ ಒಂದು ಚಿತ್ರರಂಗದವರು. ಬ್ರಿಟಿಷರು ನಮ್ಮನ್ನು ಒಡೆದು ಆಳಿದ ಬಳಿಕವೂ ನಾವೂ ಪಾಠ ಕಲಿತಂತೆ ಇಲ್ಲ. ನಾವೆಲ್ಲರೂ ಒಂದೇ ಚಿತ್ರರಂಗ ಎಂದು ಅರಿತು ಕೆಲಸ ಮಾಡಲು ಶುರು ಮಾಡಿದರೆ, ಒಳ್ಳೆ ಕೆಲಸಗಳಾಗುತ್ತವೆ." ಎಂದು ಬ್ರಿಟಿಷರ ಉದಾಹರಣೆಯೊಂದಿಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ರಾಷ್ಟ್ರ ಭಾಷೆಯ ಬಗ್ಗೆ ಮೋದಿ ಪ್ರತಿಕ್ರಿಯೆ

    ರಾಷ್ಟ್ರ ಭಾಷೆಯ ಬಗ್ಗೆ ಮೋದಿ ಪ್ರತಿಕ್ರಿಯೆ

    ಹಿಂದಿ ರಾಷ್ಟ್ರಭಾಷೆ ಹೌದು, ಅಲ್ಲ ಎಂಬ ವಾದ-ವಿವಾದಕ್ಕೆ ಪ್ರಧಾನಿ ಮೋದಿ ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದರು. ಕೇಂದ್ರ ಸರ್ಕಾರ ಹಿಂದಿ ರಾಷ್ಟ್ರಭಾಷೆ ಎಂಬ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಹೇಳಿ ಬಂದಿತ್ತು. ಆದರೆ ಮೋದಿ, "ಪ್ರಾದೇಶಿಕ ಭಾಷೆಗಳಿಗೆ ನಾವು ಯಾವಾಗಲೂ ಬೆಲೆ ಕೊಟ್ಟಿದ್ದೇವೆ. ಕೆಲವು ದಿನಗಳಿಂದ ಸುಖಾ ಸುಮ್ಮನೆ ಭಾಷೆಗಳ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸಲಾಗುತ್ತಿದೆ." ಎಂದಿದ್ದರು.

    ಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ

    ಪೃಥ್ವಿರಾಜ್ 3 ಭಾಷೆಯಲ್ಲಿ ರಿಲೀಸ್

    ಪೃಥ್ವಿರಾಜ್ 3 ಭಾಷೆಯಲ್ಲಿ ರಿಲೀಸ್

    ಅಕ್ಷಯ್ ಕುಮಾರ್ ಹೊಸ ಸಿನಿಮಾ 'ಪೃಥ್ವಿರಾಜ್' ಜೂನ್ ಮೂರರಂದು ಬಿಡುಗಡೆಯಾಗುತ್ತಿದ್ದು, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಚಂದ್ರ ಪ್ರಕಾಶ್ ದ್ವಿವೇದಿ ಈ ಸಿನಿಮಾ ನಿರ್ದೇಶನ ಮಾಡಿದ್ದು, ಭಾರತದ ಮಹಾರಾಜ ಪೃಥ್ವಿರಾಜ್ ಚೌಹಾಣ್ ಕಥೆಯನ್ನು ಹೊಂದಿದೆ.

    English summary
    Hindi Language War: Akshay Kumar Says This is How Britishers Divided Us, Know More.
    Sunday, May 22, 2022, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X