KGF 2 Hindi: ಬಾಲಿವುಡ್ ಖಾನ್‌ಗಳಿಗೆ ಟೆನ್ಷನ್, ಮುಂಬೈನಲ್ಲಿ 'ಕೆಜಿಎಫ್ 2' ಬಗ್ಗೆ ಮೀಟಿಂಗ್!
ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ 'KGF 2'.
'ಕೆಜಿಎಫ್ 2' ವಿಶೇಷವಾಗಿ ಗಮನ ಸೆಳೆದಿದ್ದು ಹಿಂದಿಯಲ್ಲಿ. ಈ ಚಿತ್ರ ಉತ್ತರ ಭಾರತದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಡಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಹಿಂದಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಮೇಲೆ ಎಲ್ಲರ ಕಣ್ಣತ್ತು. ಇದ್ದ ನಿರೀಕ್ಷೆಗಳನ್ನು ಈಗ ಈ ಚಿತ್ರ ನಿಜ ಮಾಡಿದೆ.
ಬಾಲಿವುಡ್‌ನಲ್ಲಿ ಯಶ್ ಚಿತ್ರ ನಂಬರ್ 1 ಆಗಿ ಬಿಟ್ಟಿದೆ. 'ಕೆಜಿಎಫ್ 2' ಬಾಲಿವುಡ್ ಬಾಕ್ಸ್ ಆಫೀಸ್ ರೆಕರ್ಡ್‌ಗಳನ್ನು ಪುಡಿ, ಪುಡಿ ಮಾಡಿದೆ. ಈ ಹಿಂದೆ ಬಾಲಿವುಡ್ ಚಿತ್ರಗಳು ಮಾಡಿದ ರೆಕಾರ್ಡ್‌ಗಳನ್ನು ಧೂಳಿ ಪಟ ಮಾಡಿದೆ. ಈ ಮೂಲಕ ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.
Recommended Video


ಬಾಲಿವುಡ್ ಬಾಕ್ಸಾಫೀಸ್ ಚಿಂದಿ ಮಾಡಿದ 'ಕೆಜಿಎಫ್ 2'!
ಕೆಜಿಎಫ್ 2 ರಿಲೀಸ್ ಆಗಿದ್ದೇ, ಆಗಿದ್ದು ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಭರ್ಜರಿ ಸುದ್ದಿ ಮಾಡುತ್ತಿದೆ. ನಾರ್ತ್ ನಲ್ಲಿ ಕೆಜಿಎಫ್ ಬಗ್ಗೆ ನಿರೀಕ್ಷೆ ಇದೆ, ಕ್ರೇಜ್ ಇದೆ ಎನ್ನುವುದು ಗೊತ್ತಿತ್ತು. ಆದರೆ ಈ ಪರಿಯ ದಾಖಲೆಯನ್ನು ಯಾರೂ ಊಹಿಸಿರಲಿಲ್ಲ. ಬಾಲಿವುಡ್ ಬಾಕ್ಸಾಫೀಸ್ ಶೇಕ್ ಮಾಡಿದ ಕೆಜಿಎಫ್2, ಬಿಗ್ ಖಾನ್ ಗಳಿಗೆ ತಲೆ ನೋವು ತಂದಿದೆ.

ಕೆಜಿಎಫ್ ಬಗ್ಗೆ ಮುಂಬೈನಲ್ಲಿ ಖಾನ್‌ಗಳ ಮೀಟಿಂಗ್!
ಇನ್ನು ಕೆಜಿಎಫ್ 2 ಚಿತ್ರವನ್ನು ಲೈಟಾಗಿ ತೆಗೆದು ಕೊಂಡ ಬಾಲಿವುಡ್‌ನ ಬಿಗ್ ಸ್ಟಾರ್ ನಟರಿಗೆ ಸದ್ಯ ಚಳಿ ಜ್ವರ ಬಂದ ಹಾಗೆ ಆಗಿ ಬಿಟ್ಟಿದೆ. ಕನ್ನಡದ ಡಬ್ಬಿಂಗ್ ಚಿತ್ರವೊಂದು ಬಾಲಿವುಡ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಆಗುವುದು ಎಂದರೆ ಸುಮ್ಮನ್ನೆ ಅಲ್ಲ. ಹಾಗಾಗಿ ಬಾಲಿವುಡ್‌ನ ಸ್ಟಾರ್ ನಟರು ಕೆಜಿಎಫ್ 2 ಚಿತ್ರದ ಬಗ್ಗೆ ಮೀಟಿಂಗ್ ನಡೆಸಿದ್ದಾರೆ ಎನ್ನುವ ಉದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಾ ಇದೆ.

ಖಾನ್‌ಗಳ ರೆಕಾರ್ಡ್ ಹಿಮ್ಮೆಟ್ಟಿದ ಕೆಜಿಎಫ್ 2!
ಹಿಂದಿಗೆ ಡಬ್ ಆದ ಕನ್ನಡದ ಚಿತ್ರ ಬಾಲಿವುಡ್ ಖಾನ್‌ಗಳು ವರ್ಷಗಳಿಂದ ಮಾಡಿದ ಇತಿಹಾಸವನ್ನು ಧೂಳಿ ಪಟ ಮಾಡಿದೆ. ಸದ್ಯ ಹಿಂದಿಯಲ್ಲಿ 53 ಕೋಟಿ ರೂ. ಓಪನಿಂಗ್ ಪಡೆದ ಕೆಜಿಎಫ್ 2 ಚಿತ್ರ ಬಾಲಿವುಡ್‌ನಲ್ಲಿ ರೆಕಾರ್ಡ್ ಮಾಡಿದ್ದ ಚಿತ್ರಗಳನ್ನು ಹಿಂದೆ ಹಾಕಿ ಮನ್ನುಗ್ಗುತ್ತಿದೆ. ಇದು ಸಲ್ಮಾನ್ ಖಾನ್, ಶಾರು ಖಾನ್, ಆಮಿರ್ ಖಾನ್, ಅಕ್ಷಯ್ ಕುಮಾರ್ ಅಂತಹ ನಟರಿಗೆ ದೊಡ್ಡ ಶಾಕ್ ಕೊಟ್ಟಿದೆ.

'ವಾರ್' 51 ಕೋಟಿ, 'ಕೆಜಿಎಫ್ 2' 53 ಕೋಟಿ!
ಬಾಲಿವುಡ್‌ನಲ್ಲಿ ಅಲ್ಲಿನ ಹಿಂದಿ ಚಿತ್ರಗಳು ಮಾಡಿದ ದಾಖಲೆಯನ್ನು ಮುರಿದು ಹೊಸ ಇತಿಹಾಸ ಮಾಡಿದೆ 'ಕೆಜಿಎಫ್ 2'. ಹಿಂದಿಯಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಅಂದರೆ ಅದು ಟೈಗರ್ ಶ್ರಾಫ್, ಹೃತಿಕ್ ರೋಷನ್ ಅಭಿನಯದ 'ವಾರ್'. ಈ ಚಿತ್ರ 51.60 ಕೋಟಿ ಓಪನಿಂಗ್ ಪಡೆದುಕೊಂಡು ದಾಖಲೆ ಬರೆದಿತ್ತು. ಆದರೆ ಈಗ 'ಕೆಜಿಎಫ್ 2', 53.95 ಕೋಟಿ ಗಳಿಕೆ ಮಾಡಿ ವಾರ್ ಸಿನಿಮಾದ ದಾಖಲೆಯನ್ನು ಮುರಿದಿದೆ. ಈ ಮೂಲಕ 'ಕೆಜಿಎಫ್ 2' ನಂಬರ್ 1 ಆಗಿದೆ.


Click it and Unblock the Notifications











