ಜಸ್ಬಾ ವಿಮರ್ಶೆ: ಪ್ರೇಕ್ಷಕರಿಗೆ ಸಖತ್ ಥ್ರಿಲ್ಲಿಂಗ್ ಅನುಭವ

By ಸೋನು ಗೌಡ

ಸುಮಾರು 5 ವರ್ಷಗಳ ನಂತರ ನಿಮಗೆ ಮಾಜಿ ಸುಂದರಿ ಐಶ್ವರ್ಯ ರೈ ಅವರನ್ನು ನೋಡಬೇಕೆನಿಸಿದರೆ ನೀವು 'ಜಸ್ಬಾ' ಚಿತ್ರ ನೋಡಿ. ನಿಜ ಜೀವನದಲ್ಲಿ ಬೆಸ್ಟ್ ಅಮ್ಮ ಎಂದು ತೋರಿಸಿಕೊಟ್ಟಿರುವ ಐಶ್ವರ್ಯ ರೈ ಅವರು 'ಜಸ್ಬಾ' ಸಿನಿಮಾದಲ್ಲೂ ಅದನ್ನೇ ಫಾಲೋ ಮಾಡಿದ್ದಾರೆ. ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ನೋಡಿ..

ಸಂಪೂರ್ಣ ವಿಮರ್ಶೆ..

ಕಥೆ:

ನಿರ್ದೇಶಕ ಸಂಜಯ್ ಗುಪ್ತಾ ಆಕ್ಷನ್-ಕಟ್ ಹೇಳಿರುವ 'ಜಸ್ಬಾ' ಚಿತ್ರದಲ್ಲಿ ನಟಿ ಐಶ್ವರ್ಯ ರೈ ಅವರು ಯಶಸ್ವಿ ಲಾಯರ್ ಅನುರಾಧ ವರ್ಮಾ ಎಂಬ ಪಾತ್ರದಲ್ಲಿ ಮಿಂಚಿದ್ದು, ಸನಾಯ (ಸಾರಾ ಅರ್ಜುನ್) ನ ಮುದ್ದು ಅಮ್ಮನಾಗಿರುತ್ತಾಳೆ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಲಾಯರ್ ಅನುರಾಧ(ಐಶ್ವರ್ಯ ರೈ) ಕ್ರಿಮಿನಲ್ ಗಳ ವಿರುದ್ದ ಹೋರಾಡುವ ಮಹತ್ವಾಂಕಾಕ್ಷೆಯನ್ನು ಹೊಂದಿರುವ ಮಹಿಳೆಯಾಗಿರುತ್ತಾರೆ. ಹೀಗೆ ಗಿಲ್ಟಿ ಫ್ರೀ ಆಗಿ ಕ್ರಿಮಿನಲ್ ಕೇಸ್ ಗಳ ವಿರುದ್ದ ಹೋರಾಡುತ್ತಿರುವ ಇಂತಹ ಖಡಕ್ ಲಾಯರ್ ಆಫೀಸರ್ ಗೆ ಒಂದು ದಿನ ಬ್ಲ್ಯಾಕ್ ಡೇ ಬರುತ್ತದೆ.

ಲಾಯರ್ ಅನುರಾಧ ಅವರ ಮಗಳು ಸನಾಯ, ಕಿಡ್ನಾಪ್ ಆಗುತ್ತಾಳೆ. ಈ ಸಂದರ್ಭದಲ್ಲಿ ಕಿಡ್ನಾಪ್ ಮಾಡಿದ ಕಿಡ್ನಾಪರುಗಳು, ಕೊಲೆಗಾರ ಹಾಗೂ ಅತ್ಯಾಚಾರಿ ಮೀಯಾಜ್ ಶೇಖ್ (ಚಂದನ್ ರಾಯ್ ಸನ್ಯಾಲ್) ಅವರನ್ನು 4 ದಿನಗಳ ಒಳಗಾಗಿ ಜೈಲ್ ನಿಂದ ಹೊರತರಬೇಕು ಎಂದು ಬೆದರಿಕೆ ಹಾಕುತ್ತಾರೆ.

ಪೊಲೀಸ್ ಪಾತ್ರ ಮಾಡಿರುವ ಇರ್ಫಾನ್ ಖಾನ್ ಅವರು ಲಾಯರ್ ಅನುರಾಧ ಅವರ ಬೆಸ್ಟ್ ಫ್ರೆಂಡ್ ಆಗಿದ್ದು, ಮಗಳನ್ನು ವಾಪಸ್ ಕರೆತರಲು ಸಹಾಯ ಮಾಡುತ್ತಾರೆ. ಶಬಾನಾ ಅಜ್ಮಿ ಅವರು ಅಪರಾಧಿಯ ಮಗಳ ಪಾತ್ರದಲ್ಲಿ ಮಿಂಚಿದ್ದು, ತಮ್ಮ ತಂದೆಗೆ ವಿರುದ್ದ ನಿಂತಿರುತ್ತಾರೆ.

ಮುಂದೆ ಕಥೆ ಹೇಗೆ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಲಾಯರ್ ಅನುರಾಧಗೆ ತಮ್ಮ ಮಗಳು ಜೀವಂತವಾಗಿ ಸಿಗುತ್ತಾಳ ಅಂತ ನೀವು ಥಿಯೇಟರ್ ನಲ್ಲಿ ಉತ್ತರ ಕಂಡುಕೊಳ್ಳಿ.

ನಟನೆ:

5 ವರ್ಷಗಳ ನಂತರ ಸಿಲ್ವರ್ ಸ್ಕ್ರೀನ್ ನಲ್ಲಿ ಮಿಂಚಿರುವ ಬಾಲಿವುಡ್ ಬೆಡಗಿ ಐಶ್ವರ್ಯ ಅವರ ನಟನೆ ಅದ್ಭುತ. ಸಿನಿಮಾದುದ್ದಕ್ಕೂ ಐಶ್ವರ್ಯ ಅವರೇ ಹೈಲೈಟ್ ಆಗುತ್ತಾರೆ 'ಜಸ್ಬಾ' ಚಿತ್ರದ ನಟನೆಯ ಮೂಲಕ ಐಶ್ ಅವರು ಮತ್ತೊಮ್ಮೆ ಸ್ಟಾರ್ ನಟಿ ಅಂತ ಪ್ರೂವ್ ಮಾಡಿದ್ದಾರೆ.

ತಮ್ಮ ಬೆಸ್ಟ್ ಪರ್ಫಾಮೆನ್ಸ್ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಐಶ್ ಯಶಸ್ವಿಯಾಗಿದ್ದಾರೆ. ಇರ್ಫಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕೂಲ್ ಆಗಿ ನಟಿಸಿದ್ದು, ಹೈಪರ್ ಆಕ್ಟಿವ್ ಐಶ್ ಜೊತೆ ಇವರ ನಟನೆ ಶ್ಲಾಘನೀಯ.

ಶಬಾನಾ ಅಜ್ಮಿ ಅವರು ತಮ್ಮ ಪಾತ್ರವನ್ನು ತಕ್ಕ ಮಟ್ಟಿಗೆ ನಿಭಾಯಿಸುವಲ್ಲಿ ಸೋತಿದ್ದಾರೆ. ಜೊತೆಗೆ ಚಂದನ್ ಅವರು ತಮ್ಮ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಒಟ್ನಲ್ಲಿ ಐಶ್ವರ್ಯ ಅವರ ನಟನೆಯ ಮುಂದೆ ಶಬಾನಾ ಹಾಗೂ ಇರ್ಫಾನ್ ಅವರ ನಟನೆ ಸ್ವಲ್ಪ ಮಟ್ಟಿಗೆ ಡಲ್ ಎನಿಸುತ್ತದೆ.

ಕಥೆ-ಚಿತ್ರಕಥೆ-ನಿರ್ದೇಶನ-ತಾಂತ್ರಿಕತೆ:

ಚಿತ್ರದ ಕಥೆಯಲ್ಲಿ ನಿರ್ದೇಶಕರ ಹಿಡಿತವಿದೆ, ಆದರೆ ಸಂಜಯ್ ಗುಪ್ತಾ ಅವರಿಗೆ ಹೆಚ್ಚಿನ ಕ್ರೆಡಿಟ್ ನೀಡಲಾಗುವುದಿಲ್ಲ. ಕೊರಿಯನ್ ಸಿನಿಮಾ '7 ಡೇಸ್' ಚಿತ್ರವನ್ನು ಜಸ್ಟ್ ರಿಮೇಡ್ ಮಾಡಿದ್ದಾರೆ. ಇನ್ನು ಚಿತ್ರದ ಥ್ರಿಲ್ಲಿಂಗ್ ಮೇಕಿಂಗ್ ಸೂಪರ್ ಆಗಿದ್ದು, ಸಿನಿಮಾ ನೋಡುತ್ತ, ನೋಡುತ್ತ ಪ್ರೇಕ್ಷಕರು ಸೀಟಿನ ತುದಿಗೆ ಬರುತ್ತಾರೆ.

ಜೊತೆಗೆ ಚಿತ್ರದಲ್ಲಿ ಎಮೋಷನ್ ಗೆ ಸ್ವಲ್ಪ ಜಾಸ್ತೀನೇ ಆದ್ಯತೆ ನೀಡಿರುವ ನಿರ್ದೇಶಕರು, ಐಶ್ ಅವರನ್ನ ಸಖತ್ ಅಳಿಸಿದ್ದಾರೆ. ಇದರೊಂದಿಗೆ ಇರ್ಫಾನ್ ಖಾನ್ ಅವರ ಡೈಲಾಗ್ ನಿಮ್ಮನ್ನು ಕೊಂಚ ಸೀರಿಯಸ್ ಆಗುವಂತೆ ಮಾಡಬಹುದು.

ಒಟ್ನಲ್ಲಿ ಈ ಎಲ್ಲಾ ಸೀನ್ ಗಳು ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ. ಪ್ರತಿ ಸೆಕೆಂಡ್ ನಲ್ಲೂ ಪ್ರೇಕ್ಷಕರ ಗಮನ ಅತ್ತಿತ್ತ ಹರಿದಾಡದಂತೆ ಮಾಡುತ್ತದೆ.

ಸಂಗೀತ:

ಚಿತ್ರದ ಹಾಡುಗಳು ಸಖತ್ ಆಗಿದ್ದು, ಈಗಾಗಲೇ ಮಾರ್ಕೆಟ್ ನಲ್ಲಿ ಹಿಟ್ ಆಗಿವೆ. ಪ್ರತಿ ಥೀಮ್ ಗೂ ಹಾಡುಗಳು ಸಿಂಕ್ ಆಗಿವೆ. ಇನ್ನು ರಾಬಿನ್ ಭಟ್ ಮತ್ತು ಕಮಲೇಶ್ ಪಾಂಡೆ ಅವರ ಪೈಸಾ ವಸೂಲ್ ಡೈಲಾಗ್ ಗೆ ಹ್ಯಾಟ್ಸಾಫ್ ಹೇಳಲೇಬೇಕು.

ಒಟ್ಟಾರೆ 'ಜಸ್ಬಾ':

ಒಟ್ಟಾರೆ 'ಜಸ್ಬಾ' ಚಿತ್ರದ ನಿರ್ದೇಶಕರು ಈ ವೀಕೆಂಡ್ ಗೆ ಒಂದು ಉತ್ತಮ ಎಂರ್ಟಟೈನ್ ಜೊತೆಗೆ ಗ್ರಿಪ್ಪಿಂಗ್ ಥ್ರಿಲ್ಲರ್ ಕಥೆಯನ್ನು ಹೊತ್ತು ತಂದಿದ್ದಾರೆ. ಒಟ್ನಲ್ಲಿ ಸಖತ್ ಎಕ್ಸೈಟಿಂಗ್ ಮೆಲೋಡ್ರಾಮವನ್ನು ನಿರ್ದೇಶಕ ಸಂಜಯ್ ಗುಪ್ತಾ ಅವರು ಪ್ರೇಕ್ಷಕರಿಗೆ ಹೊತ್ತು ತಂದಿದ್ದಾರೆ.

ಚಿತ್ರ : ಜಸ್ಬಾ

ನಿರ್ದೇಶನ: ಸಂಜಯ್ ಗುಪ್ತಾ

ತಾರಾಗಣ: ಐಶ್ವರ್ಯ ರೈ, ಇರ್ಫಾನ್ ಖಾನ್, ಶಬಾನಾ ಅಜ್ಮಿ, ಚಂದನ್ ರಾಯ್ ಸನ್ಯಾಲ್,

ರೇಟಿಂಗ್:

Rating:
3.0/5

More from Filmibeat

English summary
Hindi Actress Aishwarya Rai Bachchan, Actor Irrfan Khan starrer Hindi movie 'Jazbaa' has hit the screens today (October 9). 'Jazbaa' film review is here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X