For Quick Alerts
  ALLOW NOTIFICATIONS  
  For Daily Alerts

  'ಮೊಹೆಂಜೋದಾರೋ' 4 ದಿನದ ಕಲೆಕ್ಷನ್ ರಿಪೋರ್ಟ್ ನಿಮಗಾಗಿ

  By ಸೋನು ಗೌಡ
  |

  ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ಕರಾವಳಿ ಬೆಡಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದ 'ಮೊಹೆಂಜೋದಾರೋ' ಕಳೆದ ಶುಕ್ರವಾರ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದ ದಿನ, ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿತ್ತು.

  ಐತಿಹಾಸಿಕ ಕಥೆಯಾಧರಿತ ಈ ಚಿತ್ರ ತುಂಬಾ ನಿಧಾನವಾಗಿ ಸಾಗಿದ್ದು, ಅಭಿಮಾನಿಗಳನ್ನು ಸೆಳೆಯುವಲ್ಲಿ ಕೊಂಚ ಎಡವಿತ್ತು. ಆದರೂ ಕಲೆಕ್ಷನ್ ವಿಚಾರದಲ್ಲಿ ಜೋರಾಗಿ ಅಬ್ಬರಿಸದಿದ್ದರೂ, ಕೊಂಚ ಮಟ್ಟಿಗೆ ಚೆನ್ನಾಗೇ ಕಲೆಕ್ಷನ್ ಮಾಡಿದೆ.['ಮೊಹೆಂಜೋದಾರೊ' ನಟಿ ಪೂಜಾದ್ದು ರಣಬೀರ್ ದ್ದು ಹಳೇ ಪರಿಚಯ]

  ಬಹಳ ನಿಧಾನಗತಿಯಲ್ಲಿ ಆರಂಭವಾದ 'ಮೊಹೆಂಜೋದಾರೋ' ಯಶಸ್ಸು ಇದೀಗ ಉತ್ತಮ ಗಳಿಕೆಯತ್ತ ಸಾಗಿದೆ. ನಿರ್ದೇಶಕ ಆಶುತೋಷ್ ಗೌರಿಕ್ಕರ್ ಆಕ್ಷನ್-ಕಟ್ ಹೇಳಿದ್ದ, ಈ ಚಿತ್ರದ ನಾಲ್ಕು ದಿನಗಳ ಕಲೆಕ್ಷನ್ ರಿಪೋರ್ಟ್ ಇದೀಗ ಹೊರಬಿದ್ದಿದೆ.

  ಅಂದಹಾಗೆ 'ಮೊಹೆಂಜೋದಾರೋ' 4 ದಿನಗಳಲ್ಲಿ, ಭಾರತದಲ್ಲಿ ಮಾಡಿದ ಒಟ್ಟು ಕಲೆಕ್ಷನ್ ಬರೋಬ್ಬರಿ 40.90 ಕೋಟಿ ರೂಪಾಯಿ. ಶುಕ್ರವಾರ 8.87 ಕೋಟಿ, ಶನಿವಾರ 9.60 ಕೋಟಿ ರೂಪಾಯಿ, ಭಾನುವಾರ 12.07 ಕೋಟಿ ರೂಪಾಯಿ, ಸೋಮವಾರ 10.36 ಕೋಟಿ ರೂಪಾಯಿ. ಒಟ್ಟು 40.90 ಕೋಟಿ ರೂಪಾಯಿ ಬಾಕ್ಸಾಫೀಸ್ ನಲ್ಲಿ ಕಮಾಯಿಸಿದೆ.[ರಿಲೀಸ್ ಗೂ ಮುನ್ನ ಕೋಟಿ-ಕೋಟಿ ಬಾಚಿದ 'ಮೊಹೆಂಜೋದಾರೊ']

  Hindi Movie 'Mohenjo Daro' 4 days box office collection report

  ಇನ್ನು ಬಿಡುಗಡೆಗೆ ಮುನ್ನವೇ ಸ್ಯಾಟಲೈಟ್ ಹಕ್ಕು 45 ಕೋಟಿಗೆ, ಮ್ಯೂಸಿಕ್ ಹಕ್ಕು 15 ಕೋಟಿಗೆ ಮಾರಾಟಗೊಂಡು ಸುಮಾರು 60 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು.[ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 'ಮೊಹೆಂಜೋದಾರೊ' ಬೆಡಗಿ]

  ಒಟ್ನಲ್ಲಿ ಅಬ್ಬಬ್ಬಾ...ಎನಿಸುವಷ್ಟು ಕಲೆಕ್ಷನ್ ಮಾಡದಿದ್ದರೂ, ತಕ್ಕಮಟ್ಟಿಗೆ ಕಮಾಯಿಸಿದೆ. ಸುಮಾರು 115 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಹಾಕಿದ ಬಂಡವಾಳ ವಾಪಸ್ ಮಾಡುತ್ತೆ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನೋದು ಬಿಟೌನ್ ಗಲ್ಲಾಪೆಟ್ಟಿಗೆ ಪಂಟರ ಅಭಿಪ್ರಾಯ.['ಮೊಹೆಂಜೋದಾರೊ'ದಲ್ಲಿ ಹೃತಿಕ್ ಪಟ್ಟದರಸಿಯಾದ ಪೂಜಾ ಹೆಗ್ಡೆ]

  English summary
  Bollywood Actor Hrithik Roshan and Actress Pooja Hegde starrer 'Mohenjo Daro', which released last Friday (August 12, 2016) did rather an average job on the Indian box-office as compared to Akshay Kumar's Rustom, which released on the same day. According to trade experts 4 days box office collection is 40.90 Crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X