'ರುಸ್ತುಂ' ಕಲೆಕ್ಷನ್: ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಅಕ್ಷಯ್

By ಸೋನು ಗೌಡ

ಸದ್ಯಕ್ಕೆ ಬಿಟೌನ್ ನಲ್ಲಿ ಗೆಲುವಿನ ಬೆನ್ನತ್ತಿ ಓಡುತ್ತಿರುವ ನಟ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ 'ರುಸ್ತುಂ' ಕಳೆದ ಶುಕ್ರವಾರ (ಆಗಸ್ಟ್ 12), ವರಮಹಾಲಕ್ಷ್ಮಿ ಹಬ್ಬದ ದಿನದಂದು ತೆರೆ ಕಂಡಿತ್ತು. ದೇಶ ಸೇವೆಗೆ ಸಂಬಂಧಪಟ್ಟ ಕಥೆಯಾಧರಿತ ಈ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿತ್ತು.

ಇದೀಗ ಕಳೆದ ಶುಕ್ರವಾರದಿಂದ ಲಾಂಗ್ ವೀಕೆಂಡ್ ಇದ್ದ ಕಾರಣ ಕಲೆಕ್ಷನ್ ವಿಚಾರದಲ್ಲಿ 'ರುಸ್ತುಂ' ಹಿಂದೆ ಬಿದ್ದಿಲ್ಲ. ಮೊದಲ ದಿನವೇ ಬರೋಬ್ಬರಿ 14.11 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಭಾಕ್ಸಾಫೀಸ್ ನಲ್ಲಿ ಅಕ್ಷಯ್ ಕುಮಾರ್ ಧೂಳೆಬ್ಬಿಸುತ್ತಿದ್ದಾರೆ.[ನಾವು ಹೇಳಿದ್ಹಂಗೆ ಆಯ್ತು : ಅಪ್ಪು-ಅಕ್ಷಯ್ ಬಗ್ಗೆ ಬ್ರೇಕಿಂಗ್ ಬಂತು.!]

Hindi Movie 'Rustom' Box Office Collection Report

ಶುಕ್ರವಾರ ಮತ್ತು ಶನಿವಾರ, ಎರಡು ದಿನದ ಕಲೆಕ್ಷನ್ ರಿಪೋರ್ಟ್ ಗೆ ಬಂದರೆ, ಶುಕ್ರವಾರ 14.11 ಕೋಟಿ ಕಮಾಯಿಸಿದ್ದು, ಶನಿವಾರ 16.43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂತೂ ಎರಡು ದಿನ ಒಟ್ಟು ಸರಿ-ಸುಮಾರು 30.54 ಕೋಟಿ ರೂಪಾಯಿ ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಮಾಡಿದೆ.

'ಏರ್ ಲಿಫ್ಟ್' ಚಿತ್ರದ ನಂತರ ಅಕ್ಷಯ್ ಕುಮಾರ್ ಅವರು ಗೆಲುವಿನ ಕುದುರೆಯಾಗಿದ್ದು, 'ಏರ್ ಲಿಫ್ಟ್' ಮತ್ತು 'ಹೌಸ್ ಫುಲ್ 3' ಈ ಎರಡೂ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿವೆ. ಇದೀಗ 'ರುಸ್ತುಂ' ಕೂಡ ಅತ್ಯುತ್ತಮ ಓಪನಿಂಗ್ ಪಡೆದುಕೊಂಡಿದ್ದು, ಗೆಲ್ಲುವ ಎಲ್ಲಾ ಸೂಚನೆ ನೀಡಿದೆ.[ಗೆಲುವಿನ ಕುದುರೆ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆ ಎಷ್ಟು?]

Hindi Movie 'Rustom' Box Office Collection Report

ಟೀನು ಸುರೇಶ್ ದೇಸಾಯಿ ನಿರ್ದೇಶನದ 'ರುಸ್ತುಂ' ಚಿತ್ರದಲ್ಲಿ ನೌಕಾಧಿಕಾರಿ ಕೆ.ಎಮ್ ನಾನಾವತಿ ಅವರ ಇಡೀ ಜೀವನದ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಡಲಾಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಇಲಿಯಾನಾ ಕಾಂಬಿನೇಷನ್ ನ ಸಖತ್ ಆಗಿ ಮೂಡಿಬಂದಿತ್ತು.[ವಿಶ್ವದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ನಟರಿವರು]

More from Filmibeat

English summary
The much awaited film of the year, 'Rustom' has hit the theatres on August 12, 2016. The opening day figures of "Rustom" can touch the Rs 14.11 crore mark. Starring Bollywood Actor Akshay Kumar, Actress ‪Ileana Dcruz,‬ Actress Esha Gupta, ‪‎Arjan Bajwa‬ and others. Movie Directed by Tinu Suresh Desai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X