»   » ಅಕ್ಟೋಬರ್ 16ಕ್ಕೆ ದಿಗಿ ವೆಡ್ಡಿಂಗ್ ಪುಲಾವ್ ತಿನ್ನೋಕೆ ರೆಡಿಯಾಗಿ

ಅಕ್ಟೋಬರ್ 16ಕ್ಕೆ ದಿಗಿ ವೆಡ್ಡಿಂಗ್ ಪುಲಾವ್ ತಿನ್ನೋಕೆ ರೆಡಿಯಾಗಿ

Posted By:
Subscribe to Filmibeat Kannada

ಚಂದನವನದ ದೂದ್ ಪೇಡಾ ದಿಗಂತ್ ಅವರ ಬಹುವರ್ಷದ ಕನಸಿನ ಬಾಲಿವುಡ್ ಚಿತ್ರ 'ವೆಡ್ಡಿಂಗ್ ಪುಲಾವ್' ಈ ವಾರ ತೆರೆ ಮೇಲೆ ಅಪ್ಪಳಿಸುತ್ತಿದೆ. ಅಕ್ಟೋಬರ್ 16 ರಂದು ದಿಗಿ 'ವೆಡ್ಡಿಂಗ್ ಪುಲಾವ್' ತಿನ್ನೋಕೆ ನೀವು ರೆಡಿಯಾಗಿ.

ಇದೇ ಮೊದಲ ಬಾರಿಗೆ ಬಾಲಿವುಡ್ ನ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ನಮ್ಮ ಕನ್ನಡದ ಹುಡುಗ ದಿಗಂತ್ ಅವರು 'ವೆಡ್ಡಿಂಗ್ ಪುಲಾವ್' ಮೂಲಕ ಬಿಟೌನ್ ನಲ್ಲಿ ಮದುಮಗನಾಗಿ ಪ್ರೇಕ್ಷಕರನ್ನು ಕಮಾಲ್ ಮಾಡಲಿದ್ದಾರೆ.

Hindi Movie Wedding Pullav releasing on October 16th

ಬಾಲಿವುಡ್ ನಿರ್ದೇಶಕ ಬಿನೋದ್ ಪ್ರಧಾನ್ ಆಕ್ಷನ್-ಕಟ್ ಹೇಳಿರುವ ಚಿತ್ರದಲ್ಲಿ ಅನುಷ್ಕಾ ರಂಜನ್, ದಿಗಿ ಜೊತೆ ಡ್ಯುಯೆಟ್ ಹಾಡಿದ್ದಾರೆ. ಲವ್-ರೋಮ್ಯಾನ್ಸ್ ಮಿಶ್ರಿತ ಕಥೆಯನ್ನಾಧರಿಸಿದ ಚಿತ್ರದಲ್ಲಿ ನಮ್ಮ ದಿಗಿ ಸಖತ್ ಆಗಿ ಮಿಂಚಿದ್ದಾರೆ.['ವೆಡ್ಡಿಂಗ್ ಪುಲಾವ್' ತಿನ್ನಿಸೋಕೆ ಬಂದ್ರು ದಿಗಂತ್]

ಇಬ್ಬರು ಬೆಸ್ಟ್ ಫ್ರೆಂಡ್ಸ್ ಬೇರೆ ಬೇರೆಯವರೊಂದಿಗೆ ಮದುವೆಯಾಗೋಕೆ ನಿರ್ಧರಿಸಿದಾಗ ನಡೆಯುವ ಕನ್ಫ್ಯೂಷನ್ ಸ್ಟೋರಿಯೇ 'ವೆಡ್ಡಿಂಗ್ ಪುಲಾವ್'.

Hindi Movie Wedding Pullav releasing on October 16th

ಸಿನಿಮಾದಲ್ಲಿ ದಿಗಂತ್ ಅವರು ಚಾಕಲೇಟ್ ಬಾಯ್ ಆಗಿ ಮಿಂಚಿದ್ದು, ಸಖತ್ ಕ್ಯೂಟ್ ಎನಿಸುತ್ತಾರೆ. ಇನ್ನು ದಿಗಂತ್ ಜೊತೆ ಅನುಷ್ಕಾ ರಂಜನ್ ಸೇರಿದಂತೆ ರಿಷಿ ಕಪೂರ್, ಹಿಮಾನಿ ಶಿವಪುರಿ, ಕರಣ್ ವಿ.ಗ್ರೋವರ್, ಸೋನಾಲಿ ಸೆಹಗಲ್ ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಬಾಲಿವುಡ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಟಿಸಿರುವ ದಿಗಂತ್ ಅವರ ನಟನೆ ನೋಡಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ದೂದ್ ಪೇಡಾ ದಿಗಂತ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಒಟ್ನಲ್ಲಿ ತುಂಬಾ ದಿನಗಳಿಂದ ನಿಂತೇ ಹೋಗಿದ್ದ 'ವೆಡ್ಡಿಂಗ್ ಪುಲಾವ್' ಗೆ ಮತ್ತೆ ಚಾಲನೆ ದೊರಕಿದ್ದು, ಅಂತೂ ಇಂತೂ ದಿಗಿ ಬಿಟೌನ್ ಬೆಡಗಿಯರ ಮನಗೆಲ್ಲುತ್ತಾರ ಅಂತ ಕಾದು ನೋಡೋಣ.

English summary
Sandalwood actor Diganth is making his debut in Hindi this week. His first Hindi movie 'Wedding Pullav' is releasing this week (October 16th). The movie is directed by Binod Pradhan and also stars Anushka Ranjan, Karan Grover and Rishi Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada