For Quick Alerts
  ALLOW NOTIFICATIONS  
  For Daily Alerts

  ಸೆಟ್ಟೇರುವ ಮೊದಲೇ ಹಿಂದಿ 'ವಿಕ್ರಂ ವೇದ' ರಿಲೀಸ್ ದಿನಾಂಕ ಘೋಷಣೆ

  |

  ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಕಾಂಬಿನೇಷನ್‌ನಲ್ಲಿ 'ವಿಕ್ರಂ ವೇದ' ಹಿಂದಿಗೆ ರಿಮೇಕ್ ಅಗಲಿದೆ ಎನ್ನುವ ವಿಚಾರ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಸಿನಿಮಾ ಸೆಟ್ಟೇರುವುದಕ್ಕೆ ಮುಂಚೆಯೇ ರಿಲೀಸ್ ದಿನಾಂಕ ಪ್ರಕಟವಾಗಿದೆ.

  ಮೂಲ ಚಿತ್ರ ನಿರ್ದೇಶಿಸಿದ್ದ ಪುಷ್ಕರ್ ಗಾಯಿತ್ರಿ ಅವರೇ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳುತ್ತಿದ್ದು, ವಿಜಯ್ ಸೇತುಪತಿ ಮತ್ತು ಆರ ಮಾಧವನ್ ಕಾಣಿಸಿಕೊಂಡಿದ್ದ ಪಾತ್ರಗಳಲ್ಲಿ ಕ್ರಮವಾಗಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯಿಸಲಿದ್ದಾರೆ. ಮುಂದೆ ಓದಿ...

  ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?

  2022ಕ್ಕೆ ರಿಲೀಸ್

  2022ಕ್ಕೆ ರಿಲೀಸ್

  ವಿಕ್ರಂ ವೇದ ಹಿಂದಿ ವರ್ಷನ್‌ಗೆ ಟೈಟಲ್ ನಿಗದಿಯಾಗಿಲ್ಲ. ಸಿನಿಮಾ ಅಧಿಕೃತವಾಗಿ ಆರಂಭವಾಗಿಲ್ಲ. ಈ ನಡುವೆ ಚಿತ್ರದ ರಿಲೀಸ್ ದಿನಾಂಕ ಪ್ರಕಟವಾಗಿದೆ. ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿರುವ ಪ್ರಕಾರ 2022ರ ಸೆಪ್ಟೆಂಬರ್ 30 ರಂದು ಹಿಂದಿ 'ವಿಕ್ರಂ ವೇದ' ತೆರೆಗೆ ಬರಲಿದೆ.

  ಹೃತಿಕ್ ರೋಷನ್ ಔಟ್?

  ಹೃತಿಕ್ ರೋಷನ್ ಔಟ್?

  ವಿಕ್ರಂ ವೇದ ಹಿಂದಿ ಸಿನಿಮಾದಿಂದ ನಟ ಹೃತಿಕ್ ರೋಷನ್ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗಿತ್ತು. ಡೇಟ್ ಕಾರಣದಿಂದ ಈ ಪ್ರಾಜೆಕ್ಟ್ ಕೈ ಬಿಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ಬಗ್ಗೆ ಯಾರು ಅಧಿಕೃತವಾಗಿ ತಿಳಿಸಿರಲಿಲ್ಲ. ನಿಜ ಏನಪ್ಪಾ ಅಂದ್ರೆ ಹೃತಿಕ್ ಈ ಸಿನಿಮಾದಿಂದ ಹಿಂದೆ ಸರಿದಿಲ್ಲ.

  ವಿಕ್ರಂ ವೇದ ಚಿತ್ರದ ಬಗ್ಗೆ

  ವಿಕ್ರಂ ವೇದ ಚಿತ್ರದ ಬಗ್ಗೆ

  ವಿಕ್ರಂ ವೇದ ಸಿನಿಮಾ 2017ರಲ್ಲಿ ಬಿಡುಗಡೆಯಾಗಿತ್ತು. ಅರ್ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಪುಷ್ಕರ್ ಗಾಯಿತ್ರಿ ಆಕ್ಷನ್ ಕಟ್ ಹೇಳಿದ್ದರು. ಹಿಂದಿಯ ರಿಲೀಸ್ ದಿನಾಂಕ ನೋಡಿದ್ರೆ 5 ವರ್ಷ ಸಮಯ ತೆಗೆದುಕೊಳ್ಳುತ್ತಿದ್ದಾರೆ.

  ಭಾರತದ ಕೊರೊನಾ ಲಸಿಕೆ ಬಿಟ್ಟು ಅಮೆರಿಕ ಲಸಿಕೆಗಾಗಿ ಕಾಯ್ತಿದ್ದಾರೆ ರಮ್ಯಾ | Filmibeat Kannada
  ಫೈಟರ್ ಮತ್ತು ಭೂತ್ ಪೊಲೀಸ್

  ಫೈಟರ್ ಮತ್ತು ಭೂತ್ ಪೊಲೀಸ್

  ಪ್ರಸ್ತುತ ಹೃತಿಕ್ ರೋಷನ್ ಫೈಟರ್ ಸಿನಿಮಾದಲ್ಲಿ ಕೆಲಸ ಮಾಡ್ತಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಭೂತ್ ಪೊಲೀಸ್ ಸಿನಿಮಾದ ಬಿಡುಗಡೆಯಾಗಿ ಕಾದಿದ್ದಾರೆ. ಶೀಘ್ರದಲ್ಲಿ ಆದಿಪುರುಷ್ ಸಿನಿಮಾ ಚಿತ್ರೀಕರಣ ಆರಂಭಿಸಲಿದ್ದಾರೆ.

  English summary
  Hrithik Roshan and Saif Ali Khan will star in the Hindi remake of Tamil film Vikram Vedha release on September 30, 2022.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X