»   » ಚಿತ್ರಗಳು: 'ಏ ಹೈ ಮೊಹಬ್ಬತೇನ್' ನಟಿ ದಿವ್ಯಾಂಕ ಮದುವೆ ಆಗುತ್ತಿದ್ದಾರೆ

ಚಿತ್ರಗಳು: 'ಏ ಹೈ ಮೊಹಬ್ಬತೇನ್' ನಟಿ ದಿವ್ಯಾಂಕ ಮದುವೆ ಆಗುತ್ತಿದ್ದಾರೆ

Posted By: ಸೋನು ಗೌಡ
Subscribe to Filmibeat Kannada

ಹಿಂದಿ ಚಾನಲ್ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುವ 'ಏ ಹೈ ಮೊಹಬ್ಬತೇನ್' ಧಾರಾವಾಹಿಯನ್ನು ನೀವು ನೋಡಿರುತ್ತೀರಲ್ವಾ?. ಅದರಲ್ಲಿ ಬರುವ ಇಶಿತಾ ಪಾತ್ರಧಾರಿಯ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯ ಇದ್ದೇ ಇರುತ್ತೆ.

ಕಿರುತೆರೆ ನಟಿ ದಿವ್ಯಾಂಕ ತ್ರಿಪಾಟಿ ಅಲಿಯಾಸ್ ಇಶಿತಾ ಅವರು ಇದೀಗ ನೂತನ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಇನ್ನು ಜೂನ್ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳುವುದಾಗಿ ಖುದ್ದು ದಿವ್ಯಾಂಕ ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.[ರಂಗೀಲಾ ಬೆಡಗಿ ಊರ್ಮಿಳಾ ಸದ್ದಿಲ್ಲದೆ ಮದ್ವೆ]

Hindi serial actress Divyanka Tripathi to wed in july

ನಟಿ ದಿವ್ಯಾಂಕ ತ್ರಿಪಾಟಿ ಅವರು ತಮ್ಮ ದೀರ್ಘಕಾಲದ ಬಾಯ್ ಫ್ರೆಂಡ್ ಶರದ್ ಮಲ್ಹೋತ್ರಾ ಜೊತೆ ಬ್ರೇಕ್ ಅಪ್ ಮಾಡಿಕೊಂಡ ನಂತರ ನಟ ವಿವೇಕ್ ದಹಿಯಾ ಅವರ ಜೊತೆ ಸುತ್ತಾಡುತ್ತಿದ್ದರು. ಮಾತ್ರವಲ್ಲದೇ ಜನವರಿ 15ರಂದು ಇವರಿಬ್ಬರ ನಿಶ್ಚಿತಾರ್ಥ ಕೂಡ ಗ್ರ್ಯಾಂಡ್ ಆಗಿ ನೇರವೇರಿತ್ತು.

ಈ ಮೂಲಕ ಇವರಿಬ್ಬರ ಪ್ರೀತಿಗೆ ಅಧೀಕೃತ ಮುದ್ರೆ ಬಿದ್ದಿತ್ತು. ಅಂದಹಾಗೆ ನಟ ವಿವೇಕ್ ದಹಿಯಾ ಅವರು ಕೂಡ 'ಏ ಹೈ ಮೊಹಬ್ಬತೇನ್' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಪೊಲೀಸ್ ಆಫೀಸರ್ ಅಭಿಷೇಕ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.[ಬಿಪಾಶಾ ಬಸು - ಕರಣ್ ಮದುವೆ ಆಮಂತ್ರಣ ಪತ್ರಿಕೆ ಹಿಂಗಿದೆ.!]

ಇನ್ನು ಇವರಿಬ್ಬರ ಮದುವೆಯ ದಿನಾಂಕವನ್ನು ಎರಡು ಕುಟುಂಬದವರು ಸೇರಿ ನಿರ್ಧರಿಸಲಿದ್ದು, ಮದುವೆ ಮಾತ್ರ ವಿವೇಕ್ ಅವರ ತವರೂರಾದ ಚಂಡಿಗಡ ಅಥವಾ ದಿವ್ಯಾಂಕ ತವರೂರಾದ ಭೋಪಾಲ್ ನಲ್ಲಿ ನಡೆಯಬಹುದು. ಆದರೆ ಆರತಕ್ಷತೆ ಮುಂಬೈನಲ್ಲೇ ನಡೆಯಲಿದೆ ಅನ್ನೋದು ಮಾತ್ರ ಪಕ್ಕಾ.

ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಟಿ (ಇಶಿತಾ) ಮತ್ತು ಕಿರುತೆರೆ ನಟ ವಿವೇಕ್ ದಹಿಯಾ ಅವರ ನಿಶ್ಚಿತಾರ್ಥದ ಫೋಟೋ ಆಲ್ಬಂ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ...

-
-
-
-
-
-
-
-
-
-
-
-
-
-
-
-
-
-
-
-

English summary
Hindi serial 'Ye Hai Mohabbatein' fame actress Divyanka Tripathi to wed in july. Actress Divyanka Tripathi confirmed her twitter page about her marriage.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X