For Quick Alerts
  ALLOW NOTIFICATIONS  
  For Daily Alerts

  'ಲಕ್ಷ್ಮೀ ಬಾಂಬ್' ಟೈಟಲ್ ಬದಲಾವಣೆಗೆ ಒತ್ತಾಯ: ಉಗ್ರ ಪ್ರತಿಭಟನೆ ಮಾಡುವುದಾಗಿ ಹಿಂದೂ ಸೇನಾ ಎಚ್ಚರಿಕೆ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಲಕ್ಷ್ಮೀ ಬಾಂಬ್ ಸಿನಿಮಾ ಈಗ ವಿವಾದಲ್ಲಿ ಸಿಲುಕಿದೆ. ಟ್ರೈಲರ್ ರಿಲೀಸ್ ಆದಾಗಿನಿಂದಲೂ ಸಿನಿಮಾದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದ ಬಳಿಕ ಟೈಟಲ್ ಬದಲಾಯಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

  ಈ ಟ್ರೈಲರ್ ಲವ್ ಜಿಹಾದ್ ಗೆ ಉತ್ತೇಜನ ನೀಡುತ್ತಿದೆ ಎಂದು ನೆಟ್ಟಿಗರು ಅಕ್ಷಯ್ ಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ #ShameonuAkshayKumar ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಹಿಂದೂ ಸೇನಾ ಸಂಘಟನೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಸಿನಿಮಾದ ಪ್ರಚಾರಕರು, ಪಾತ್ರವರ್ಗ ಮತ್ತು ತಂಡದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಮುಂದೆ ಓದಿ..

  ಅಕ್ಷಯ್ ಕುಮಾರ್ 'ಲಕ್ಷ್ಮೀ ಬಾಂಬ್' ಸಿನಿಮಾದ ವಿರುದ್ಧ ಲವ್ ಜಿಹಾದ್ ಆರೋಪ: #ShameonuAkshayKumar ಟ್ರೆಂಡ್ಅಕ್ಷಯ್ ಕುಮಾರ್ 'ಲಕ್ಷ್ಮೀ ಬಾಂಬ್' ಸಿನಿಮಾದ ವಿರುದ್ಧ ಲವ್ ಜಿಹಾದ್ ಆರೋಪ: #ShameonuAkshayKumar ಟ್ರೆಂಡ್

  ಹಿಂದೂ ದೇವತೆಯನ್ನು ಅಪಹಾಸ್ಯ ಮಾಡಲಾಗಿದೆ

  ಹಿಂದೂ ದೇವತೆಯನ್ನು ಅಪಹಾಸ್ಯ ಮಾಡಲಾಗಿದೆ

  ಪತ್ರದಲ್ಲಿ ಸಿನಿಮಾದ ಟೈಟಲ್ ಹಿಂದೂ ದೇವತೆ ಲಕ್ಷ್ಮೀ ಹೆಸರನ್ನು ಇಟ್ಟು ಅಪಹಾಸ್ಯ ಮಾಡಲಾಗುತ್ತಿದೆ ಮತ್ತು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಲಾಗಿದೆ' ಎಂದು ಹಿಂದೂ ಸೇನಾ ಅಭಿಪ್ರಾಯ ಪಟ್ಟಿದೆ. ಜೊತೆಗೆ ಚಿತ್ರದ ಟೈಟಲ್ ಅನ್ನು ಬದಲಾಯಿಸಬೇಕೆಂದು ಒತ್ತಾಯಿಸಿದೆ.

  ಲಕ್ಷ್ಮೀ ಪಕ್ಕದಲ್ಲಿ ಬಾಂಬ್ ಸೇರಿಸಿರುವುದು ಸರಿಯಲ್ಲ

  ಲಕ್ಷ್ಮೀ ಪಕ್ಕದಲ್ಲಿ ಬಾಂಬ್ ಸೇರಿಸಿರುವುದು ಸರಿಯಲ್ಲ

  ಪತ್ರದಲ್ಲಿ ಹಿಂದೂ ಸೇನೆ, ಚಲನಚಿತ್ರದ ಹೆಸರು ಅತ್ಯಂತ ಅವಹೇಳನಕಾರಿಯಾಗಿದೆ. ಹಿಂದೀ ದೇವತೆ ಲಕ್ಷ್ಮೀ ಅದೃಷ್ಟ ಮತ್ತು ಸಂಪತ್ತಿನ ದೇವತೆ. ಆದರೆ ಚಿತ್ರದಲ್ಲಿ ಲಕ್ಷ್ಮೀ ಜೊತೆಗೆ ಬಾಂಬ್ ಎಂಬ ಪದವನ್ನು ಬಳಸಲಾಗಿದೆ. ಇಂದು ಹಿಂದೂ ಸಮುದಾಯಕ್ಕೆ ಸ್ವೀಕರಾರ್ಹವಲ್ಲ' ಎಂದು ಬರೆದಿದ್ದಾರೆ.

  ಅಕ್ಷಯ್ ಕುಮಾರ್ ಬೈಕ್ ಏರಿ ಚಿತ್ರೀಕರಣಕ್ಕೆ ಹೊರಟ ಕಾರಣ ಬಹಿರಂಗಅಕ್ಷಯ್ ಕುಮಾರ್ ಬೈಕ್ ಏರಿ ಚಿತ್ರೀಕರಣಕ್ಕೆ ಹೊರಟ ಕಾರಣ ಬಹಿರಂಗ

  ಟೈಟಲ್ ಬದಲಾಗದಿದ್ದರೆ ಪ್ರತಿಭಟನೆ ಮಾಡುತ್ತೇವೆ

  ಟೈಟಲ್ ಬದಲಾಗದಿದ್ದರೆ ಪ್ರತಿಭಟನೆ ಮಾಡುತ್ತೇವೆ

  ಈ ಬಗ್ಗೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ಪ್ರತಿಕ್ರಿಯೆ ನೀಡಿ, 'ನಮ್ಮ ಬೇಡಕೆ ಈಡೇರದಿದ್ದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಿದರೆ ಉಗ್ರವಾದ ಪ್ರತಿಭಟನೆ ನಡೆಸುತ್ತೇವೆ. ಹಿಂದೂ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರಿಗೂ ವಿನಂತಿಸುತ್ತೇನೆ, ಸಿನಿಮಾದ ಶೀರ್ಷಿಕೆ ಬದಲಾಗದಿದ್ದರೆ ಚಿತ್ರವನ್ನು ಬಹಿಷ್ಕರಿಸಿ' ಎಂದು ಹೇಳಿದ್ದಾರೆ.

  Vajramuni ಮಗ ಚಿತ್ರರಂಗಕ್ಕೆ ಯಾಕೆ ಬಂದಿಲ್ಲ ಗೊತ್ತಾ..? | Filmibeat Kannada
  ಟ್ರೈಲರ್ ನಲ್ಲಿ ಏನಿದೆ

  ಟ್ರೈಲರ್ ನಲ್ಲಿ ಏನಿದೆ

  ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಆಸಿಫ್ ಎನ್ನುವ ಮುಸ್ಲಿಂ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ನಿಯ ಹೆಸರು ಪ್ರಿಯಾ. ಅಕ್ಷಯ್ ಕುಮಾರ್ ಪತ್ನಿಯಾಗಿ ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಮುಸ್ಲಿಂ ಪಾತ್ರ ಮಾಡಿರುವ ಅಕ್ಷಯ್ ಕುಮಾರ್ ಹಿಂದೂ ಹುಡುಗಿ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಜೊತೆಗೆ ಲಕ್ಷ್ಮೀ ಬಾಂಬ್ ಸಿನಿಮಾ ಹೆಸರಿನ ಬದಲು ಆಸಿಯಾಬಾಂಬ್, ಫಾತೀಮಾಬಾಂಬ್ ಎಂದು ಹೆಸರಿಡಬಹುದು ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.

  English summary
  Hindu Sena demands Akshay Kumar starrer Laxmmi Bomb movie title to be changed. warns will protest outside halls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X