'ಆದಿಪುರುಷ್' ಚಿತ್ರಕ್ಕೆ ಎದುರಾಯ್ತು ಸಂಕಷ್ಟ: ದೆಹಲಿ ಕೋರ್ಟ್‌ನಲ್ಲಿ ದೂರು ದಾಖಲು

ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರಕ್ಕೆ ಸಂಕಷ್ಟ ಎದುರಾಗುವ ಸುಳಿವು ಸಿಕ್ತಿದೆ. ಸಿನಿಮಾ ರಿಲೀಸ್ ಬೆನ್ನಲ್ಲೇ ದೆಹಲಿ ಹೈಕೋರ್ಟ್‌ನಲ್ಲಿ ಸಿನಿಮಾ ವಿರುದ್ಧ ದೂರು ದಾಖಲಾಗಿದೆ. ಟೀಸರ್ ರಿಲೀಸ್ ಆಗಿದ್ದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಈ ಪೌರಾಣಿಕ ಸಿನಿಮಾ ಸುದ್ದಿಯಲ್ಲಿದೆ.

ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ 'ಆದಿಪುರುಷ್' ಸಿನಿಮಾ ನಿರ್ಮಾವಾಗಿದೆ. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ತಿದೆ. ಸ್ವತಃ ಪ್ರಭಾಸ್ ಅಭಿಮಾನಿಗಳು ಸಿನಿಮಾ ಅಷ್ಟಾಗಿ ಇಷ್ಟವಾಗ್ತಿಲ್ಲ. ಇನ್ನು ರಾಮಾಯಣ ಕಾವ್ಯದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಪ್ರೇಕ್ಷಕರ ಮನಗೆಲ್ಲಲು ಓಂ ರಾವುತ್ ಪ್ರಯತ್ನಿಸಿದ್ದಾರೆ. ಆದರೆ ಈ ಹಾದಿಯಲ್ಲಿ ಎಡವಿದ್ದಾರೆ. ಕೆಲವೊಮ್ಮೆ ವಿಷ್ಯುವಲಿ ಸಿನಿಮಾ ಅದ್ಭುತ ಅನುಭವ ನೀಡಿದರೂ ಇಡೀ ಸಿನಿಮಾ ರುಚಿಸುವುದಿಲ್ಲ.

Hindu Sena files PIL in Delhi HighCourt seeking removal of alleged objectionable scenes

ಎಲ್ಲರಿಗೂ ಗೊತ್ತಿರುವ ರಾಮಾಯಣ ಕಾವ್ಯವನ್ನು ತನ್ನದೇ ಶೈಲಿಯಲ್ಲಿ ಇವತ್ತಿನ ತಂತ್ರಜ್ಞಾನ ಬಳಸಿ ಚಿತ್ರಿಸಲಾಗಿದೆ. ಆದರೆ ಕ್ರಿಯೇಟಿವ್ ಲಿಬರ್ಟಿ ಹೆಸರಿನಲ್ಲಿ ತಮಗೆ ತೋಚಿದಂತೆ ಓಂ ರಾವುತ್ ಸಿನಿಮಾ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ. ಪ್ರೇಕ್ಷಕರಿಗೆ ಸಿನಿಮಾ ಬಹಳ ನಿರಾಸೆ ಮೂಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದೀಗ ಸಿನಿಮಾ ವಿರುದ್ಧ ದೂರು ದಾಖಲಾಗಿದೆ.

ಕೋರ್ಟ್‌ನಲ್ಲಿ ದೂರು

ತಮಗೆ ಇಷ್ಟಬಂದಂತೆ ಚಿತ್ರತಂಡ ರಾಮಾಯಣ ಕಾವ್ಯವನ್ನು ತೆರೆಮೇಲೆ ತೋರಿಸಿದೆ ಎಂದು ಹಿಂದೂ ಸೇನಾ ಸಂಘಟನೆ ಆರೋಪಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ. ಟೀಸರ್ ರಿಲೀಸ್ ಆದಾಗಲೇ ಸಾಕಷ್ಟು ಟೀಕೆ ಎದುರಾಗಿತ್ತು. ಆದರೆ 6 ತಿಂಗಳು ಹೆಚ್ಚಿನ ಸಮಯ ಪಡೆದು ಎಲ್ಲವನ್ನು ತಿದ್ದುತೀಡುತ್ತೀವಿ ಎಂದು ಹೇಳಿ ಹಳೇ ಚಿತ್ರವನ್ನೇ ರಿಲೀಸ್ ಮಾಡಿದ್ದಾರೆ.

ದು ಹಿಂದೂಗಳ ಹಕ್ಕುಗಳ ಉಲ್ಲಂಘನೆಯಾಗಿದೆ

ಇದೀಗ ದೆಹಲಿ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಹಿಂದೂ ಸೇನಾ ಸಂಘಟನೆಯ ಮುಖ್ಯಸ್ಥ ಮಾತನಾಡಿ "ಶ್ರೀರಾಮ, ಸೀತೆ, ಹನುಮಂತನ ಕುರಿತಾಗಿ ಭಾರತೀಯರಿಗೆ ಒಂದು ನಿರ್ದಿಷ್ಟ ಕಲ್ಪನೆ ಇದೆ. ಆ ಕಲ್ಪನೆಯನ್ನು ಬದಲಾಯಿಸುವ ಪ್ರಯತ್ನ 'ಆದಿಪುರುಷ್' ಸಿನಿಮಾದ ಮೂಲಕ ಆಗುತ್ತಿದೆ. ಕೆಲ ದೃಶ್ಯಗಳು, ಚಿತ್ರಣಗಳು ಹಿಂದೂ ಸಂಸ್ಕೃತಿಯ ಅವಹೇಳನ ಮಾಡುವಂತಿದೆ. ತಪ್ಪು ತಪ್ಪಾಗಿ ದೇವರುಗಳ ಚಿತ್ರಣವಿದೆ. ಇದು ಹಿಂದೂಗಳ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸರಿಪಡಿಸಲು ಒತ್ತಾಯ

"ರಾಮಾಯಣ ಕಾವ್ಯದಲ್ಲಿ ಎಲ್ಲಾ ಪಾತ್ರಗಳ ವಸ್ತ್ರ ವಿನ್ಯಾಸ, ಕೇಶಶೈಲಿ, ವ್ಯಕ್ತಿತ್ವ, ದೇಹಾಕಾರ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಆದರೆ ಅದ್ಯಾವುದು ಗೊತ್ತೇಯಿಲ್ಲ ಎನ್ನುವಂತೆ ತಮ್ಮ ಮನಸ್ಸಿಗೆ ತೋಚಿದಂತೆ ಆದಿಪುರುಷ್ ಸಿನಿಮಾ ಮಾಡಿದದ್ದಾರೆ. ಕಾವ್ಯಕ್ಕಿಂತ ಸಿನಿಮಾದಲ್ಲಿ ಸಾಕಷ್ಟು ವಿಚಾರಗಳನ್ನು ತಿರುಚಲಾಗಿದೆ. ಈ ತಿರುಚುವಿಕೆಯು ಹಿಂದೂ ಮನೋಭಾವಕ್ಕೆ ಧಕ್ಕೆ ತಂದಿದೆ. ಈ ತಪ್ಪುಗಳನ್ನು ಸರಿಪಡಿಸುವಂತೆ ನ್ಯಾಯಾಲವು ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಸೂಚಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಸಖತ್ ಟ್ರೋಲ್

ಇನ್ನು ಸೋಶಿಯಲ್ ಮೀಡಿಯಾದಲ್ಲಿ 'ಆದಿಪುರುಷ್' ಚಿತ್ರವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ರಾಮ, ರಾಣವರ ಲುಕ್, ಲಂಕೇಶ್ವರನ ಕಾಸ್ಟ್ಯೂಮ್ ಎಲ್ಲದರ ಬಗ್ಗೆಯೂ ಚಕಾರ ಎತ್ತಿದ್ದಾರೆ. ಪುಷ್ಪಕ ವಿಮಾನ ಇಲ್ಲ, ಹಾಲಿವುಡ್ ಫಿಕ್ಷನ್ ಸಿನಿಮಾ ಪತ್ರಗಳನ್ನು ರಾಮಾಯಣದ ಪಾತ್ರಗಳು ಎನ್ನುವಂತೆ ಬಿಂಬಿಸಲಾಗಿದೆ. ಇದೆಲ್ಲದರ ಬಗ್ಗೆಯೂ ಟ್ರೋಲ್ ಮಾಡುತ್ತಿದ್ದಾರೆ. ಇಷ್ಟು ದಿನ ರಾಮಾಯಣದ ಬಗ್ಗೆ ಇದ್ದ ಕಲ್ಪನೆಯನ್ನೇ ಬುಡಮೇಲು ಮಾಡುವಂತೆ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಓಂರಾವುತ್ ವಿರುದ್ಧ ಗರಂ!

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನಿರ್ದೇಶಕ ಓಂ ರಾವುತ್ ವಿರುದ್ಧ ಅಸಮಾಧಾನ ವ್ಯಕ್ತಪಡಿದ್ತಿದ್ದಾರೆ. ಪ್ರಭಾಸ್‌ನಂತಹ ನಟ, 500 ಕೋಟಿ ರೂ. ಬಜೆಟ್ ಎಲ್ಲಾ ಇದ್ದು ಚಿತ್ರವನ್ನು ಸರಿಯಾಗಿ ನಿರೂಪಿಸಿಲ್ಲ. ಓಂ ರಾವುತ್‌ಗಿಂತ ರಾಜಮೌಳಿ ಗ್ರೇಟ್. ಇಂತಹ ಸಿನಿಮಾಗಳು, ಪಾತ್ರಗಳನ್ನು ತೋರಿಸುವ ರೀತಿಯನ್ನು ಎಲ್ಲರೂ ಮೌಳಿ ಬಳಿ ಬೇಕು ಎಂದಿದ್ದಾರೆ.ಲಿಕ

More from Filmibeat

English summary
Hindu Sena files PIL in Delhi HighCourt seeking removal of alleged objectionable scenes. Prabhas Starrer film entire Karnataka release by KRG Studios.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X