ದೀಪಿಕಾ, ಪ್ರಿಯಾಂಕ, ರಶ್ಮಿಕಾಗೆ ಸೆಡ್ಡು ಹೊಡೆದ 23 ವರ್ಷ ಚೆಲುವೆ ; ಕೊರಿಯನ್ ಚಿತ್ರಕ್ಕೆ ನಾಯಕಿಯಾದ ಭಾರತದ ಮೊದಲ ನಟಿ ಇವರೇ

ಬದುಕೇ ಹಾಗೆ ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಸದ್ಯದ ಅತ್ಯುತ್ತಮ ಉದಾಹರಣೆಯೇ ಅನುಷ್ಕಾ ಸೇನ್.

ಹೌದು, ಅನುಷ್ಕಾ ಸೇನ್.. ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ಕೇವಲ 7ರ ಪ್ರಾಯದಲ್ಲೇ ''ಯಹಾ ಮೈ ಘರ್ ಘರ್ ಖೇಲಿ'' ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ಅನುಷ್ಕಾ ಆ ನಂತರ ''ದೇವೋಂ ಕೆ ದೇವ್ ಮಹಾದೇವ್'' ಧಾರಾವಾಹಿಯಲ್ಲಿ ಬಾಲ ಪಾರ್ವತಿಯಾಗಿ ಮಿಂಚಿದರು.

history-made-anushka-sen-breaks-barriers-as-first-indian-actor-to-lead-a-korean-film

''ಬಾಲ್‌ವೀರ್'' ಇವರ ಖ್ಯಾತಿಯನ್ನು ಹೆಚ್ಚಿಸಿದ ಇನ್ನೊಂದು ಪ್ರಮುಖವಾದ ಧಾರಾವಾಹಿ. ಇದರಲ್ಲಿನ ಇವರು ನಿರ್ವಹಿಸಿದ್ದ ''ಮೆಹರ್ ದಾಗ್ಲಿ'' ಪಾತ್ರ ಹಲವರ ಹೃದಯ ಗೆದ್ದಿತ್ತು. ಆ ನಂತರ ''ಝಾನ್ಸಿ ಕಿ ರಾಣಿ''ಯಲ್ಲಿ ವೀರರಾಣಿ ಲಕ್ಷ್ಮೀಬಾಯಿ ಪಾತ್ರವನ್ನು ನಿರ್ವಹಿಸಿದ್ದ ಅನುಷ್ಕಾ ''ಖತ್ರೋನ್ ಕೆ ಕಿಲಾಡಿ'' ಸೀಸನ್ ಹನ್ನೊಂದರಲ್ಲಿ ಕೂಡ ಭಾಗವಹಿಸಿದ್ದರು.

ಕೇವಲ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲಿಯೂ ಕೂಡ ಅನುಷ್ಕಾ ಮಿಂಚಿದ್ದಾರೆ.''ಕ್ರೇಜಿ ಕುಕ್ಕೂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅನುಷ್ಕಾ, ''ಲಿಹಾಫ್ : ದಿ ಕ್ವಿಲ್ಟ್''.. ''ಆಮ್ ಐ ನೆಕ್ಸ್ಟ್‌'' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ''ಕಿಲ್-ದಿಲ್''.. ''ಕ್ಯ್ರಾಶ್'' ಅಂತಹ ವೆಬ್ ಸರಣಿಗಳನ್ನು ಕೂಡ ಮಾಡಿದ್ದಾರೆ.

ಇಂಥಾ ಅನುಷ್ಕಾ ಸೇನ್, ಸದ್ಯ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ರಶ್ಮಿಕಾ ಮಂದಣ್ಣ, ಸೇರಿದಂತೆ ಭಾರತದ ಖ್ಯಾತ ನಾಯಕಿಯರಿಗೆಲ್ಲಾ ಸೆಡ್ಡು ಹೊಡೆದಿದ್ದಾರೆ. ಕೊರಿಯನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ.ಕೊರಿಯನ್ ಚಿತ್ರದಲ್ಲಿ ಅಭಿನಯಿಸಿದ ಮೊದಲ ಭಾರತೀಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇನ್ನು ಅನೇಕರಿಗೆ ಗೊತ್ತಿರುವಂತೆ ಭಾರತದಲ್ಲಿ ಕೊರಿಯನ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಹಲವರು ಮನರಂಜನೆಗಾಗಿ ಕೊರಿಯನ್ ಚಿತ್ರಗಳನ್ನೇ ಅವಲಂಬಿಸಿದ್ದಾರೆ. ಚಿತ್ರರಂಗದಲ್ಲಿನ ಹಲವರಿಗೆ ಐಡಿಯಾಗಳು ಬರುವುದು ಕೂಡ ಇದೇ ಕೊರಿಯನ್ ಸಿನಿಮಾಗಳಿಂದ. ಹೀಗಿರುವಾಗ ಭಾರತದ ಖ್ಯಾತನಾಮರಿಗೆಲ್ಲ ಒಲಿಯದ ಈ ಕೊರಿಯನ್ ಲಾಟರಿ ಅನುಷ್ಕಾ ಸೇನ್‌ಗೆ ಒಲಿದಿದೆ. ಈ ಹಿನ್ನೆಲೆ ಹಲವರು ಆಶ್ಚರ್ಯ ಚಕಿತಗೊಂಡಿದ್ದಾರೆ. ಅನುಷ್ಕಾಗೆ ಸದ್ಯ ಅಭಿನಂದನೆ ಸಲ್ಲಿಸುತ್ತಿದ್ದಾರೆ.

history-made-anushka-sen-breaks-barriers-as-first-indian-actor-to-lead-a-korean-film

ಅಂದ್ಹಾಗೇ ಅನುಷ್ಕಾ ಸೇನ್‌ಗೆ ಈಗ 23 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ದೊಡ್ಡ ಧಮಾಕ ಮಾಡಿರುವ ಅನುಷ್ಕಾ ಕೊರಿಯಾದ ''ಜೇಜು ಒಲ್ಲೆ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ''ಜೇಜು ಒಲ್ಲೆ'' ಚಿತ್ರದಲ್ಲಿ ಅನುಷ್ಕಾ ಸೇನ್ ''ಅಲೀಶಾ'' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ವೃತ್ತಿಯಲ್ಲಿ ಗಾಯಕಿಯಾದ ಅಲೀಶಾ ತನ್ನ ಪ್ರೀತಿಯ ಸಹೋದರಿಯ ಅಕಾಲಿಕ ಸಾವಿನಿಂದ ಮಾನಸಿಕ ಆಘಾತಕ್ಕೀಡಾಗಿರುತ್ತಾಳೆ. ಈ ನೋವನ್ನು ಮರೆಯಲು ಮತ್ತು ಅದರಿಂದ ಹೊರ ಬರಲು ದಕ್ಷಿಣ ಕೊರಿಯಾದ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣ ''ಜೇಜು'' ದ್ವೀಪಕ್ಕೆ ಅಲೀಶಾ ಹೋಗುತ್ತಾಳೆ. ಅಲ್ಲಿ ಬದುಕನ್ನು ಮತ್ತೆ ಪುನರ್ ರೂಪಿಸಿಕೊಳ್ಳಲು ಮುಂದಾದಾಗ ಕೊರಿಯಾದ ಗಾಯಕ ಮತ್ತು ಸಾಹಿತಿ ಸನ್‌ವೂ ಪರಿಚಯವಾಗುತ್ತೆ. ಮುಂದಿನ ಭಾವನಾತ್ಮಕ ಬಂಧವೇ ಚಿತ್ರದ ತಿರುಳು.

ಸನ್‌ವೂ ಪಾತ್ರವನ್ನು ಕೊರಿಯಾದ ಖ್ಯಾತ ನಟ ಕಾಂಗ್ ಹ್ಯುಂಗ್ ಸಿಯೋಕ್ ನಿರ್ವಹಿಸಿದ್ದಾರೆ. ತಮ್ಮ ಈ ಹೊಸ ಹೆಜ್ಜೆ, ಸಾಧನೆಯ ಕುರಿತು ''ವೆರೈಟಿ''.. ''ದಿ ಹಾಲಿವುಡ್‌ ರಿಪೋರ್ಟರ್''.. ಅಂತಹ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅನುಷ್ಕಾ ಸೇನ್,ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಾನು ಕೊರಿಯನ್ ಚಿತ್ರರಂಗಕ್ಕೆ ನಾನು ಶರಣಾದೆ ಎಂದು ಹೇಳಿದ್ದಾರೆ.

ಕೊರಿಯನ್ ಕಲಾವಿದರ ಅಭಿನಯದ, ಭಾವನಾತ್ಮಕ ನಿರೂಪಣೆಗೆ ಮನ ಸೋತು ಮುಂದೊಂದು ದಿನ ಯಾವತ್ತಾದರೂ ಕೊರಿಯನ್ ಚಿತ್ರದ ಭಾಗವಾಗಬೇಕೆಂದು ಮನದಲ್ಲಿಯೇ ಅಂದುಕೊಳ್ಳುತ್ತಿದ್ದೆ, ಪ್ರಾರ್ಥನೆ ಮಾಡುತ್ತಿದ್ದೆ ಎಂದು ಹೇಳಿರುವ ಅನುಷ್ಕಾ ಸೇನ್ ಸದ್ಯ ನನ್ನ ಬದುಕಿನ ಬಹುದೊಡ್ಡ ಕನಸು ನನಸಾಗಿದೆ. ''ಜೇಜು ಒಲ್ಲೆ'' ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದಕ್ಕೆ ತುಂಬಾ ಖುಷಿ ಇದೆ ಎಂದು ಹೇಳಿದ್ಧಾರೆ.

English summary
From ultimate K-drama fan to K-movie star! Anushka Sen makes history as the first Indian actor to lead a South Korean film with 'Jeju Olle'. Read her emotional reaction here.
Read more about: hollywood actress korea
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X