ಯಶ್ ಆಂಡ್ ಕಂಪನಿ ರಾಮಾಯಣ ಚಿತ್ರಕ್ಕೆ ಹೂಡುತ್ತಿರುವ ಹಣ ಎಷ್ಟು ? ಬಜೆಟ್ ಕೇಳಿ ಬೆಚ್ಚಿ ಬಿದ್ದ ಭಾರತೀಯ ಚಿತ್ರರಂಗ

ರಾಮಾಯಣದ ಕಥೆಯನ್ನ ನಾವೆಲ್ಲ ಕೇಳಿದ್ದೇವೆ. ಈ ಹಿಂದೆ ನೋಡಿದ್ದೇವೆ. ಇನ್ನೂ ಇದು ಬದಲಾದ ಕಾಲ. ಈ ಕಾಲದಲ್ಲಿ ಅವತ್ತು ಸರಳವಾಗಿ ರಾಮಾಯಣದ ಕಥೆ ಹೇಳಿದಂತೆ ಹೇಳುವುದು ಅಸಾಧ್ಯ. ಯಾಕೆಂದರೆ ಭಾರತದ ಮಹಾಕಾವ್ಯ ರಾಮಾಯಣಕ್ಕೆ ಏನಾದರೊಂದು ಹೊಸತನದ ಸ್ಪರ್ಶ ನೀಡಲು ನಮ್ಮಲ್ಲಿನ ನಿರ್ದೇಶಕರು ನಿರ್ಮಾಪಕರು ಮುಂದಾಗುತ್ತಾರೆ. ಇದಕ್ಕೆ ಯಶ್ ಸಹ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಮಾಯಣ ಸದ್ಯದ ಉದಾಹರಣೆ.

ಹೌದು .. ಕೆಲ ದಿನಗಳ ಹಿಂದೆಯಷ್ಟೇ ಯಶ್ ನಿರ್ಮಾಣದ ರಾಮಾಯಣ ಚಿತ್ರದ ಚಿಕ್ಕದಾದ ತುಣುಕು ಬಿಡುಗಡೆಯಾಗಿದೆ. ಕೇವಲ ಭಾರತ ಮಾತ್ರವಲ್ಲ ಜಗತ್ತು ನಮ್ಮ ನೆಲದ ಮಹಾಕಾವ್ಯದ ಚಿಕ್ಕ ಝಲಕ್ ಕಣ್ತುಂಬಿಕೊಂಡು ನಿಬ್ಬೇರಗಾಗಿದೆ. ಚಿತ್ರ ಹೊಸದೊಂದು ದಾಖಲೆ ಬರೆಯಲಿದೆ ಎನ್ನುವ ಭವಿಷ್ಯವಾಣಿ ಕೂಡ ಅಷ್ಟದಿಕ್ಕುಗಳಿಂದ ಕೇಳಿ ಬರುತ್ತಿದೆ.

HISTORY MADE Ramayana Starring Ranbir amp amp Yash Sets 1600 Crore Budget India s Costliest Film

ಇದರ ನಡುವೆ ರಾಮಾಯಣ ಚಿತ್ರಕ್ಕೆ ಆಗುತ್ತಿರುವ ಖರ್ಚು-ವೆಚ್ಚಗಳ ಕುರಿತು ಕೂಡ ಚರ್ಚೆಯಾಗುತ್ತಿದೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ರಾಮಾಯಣ ಎರಡು ಭಾಗದಲ್ಲಿ ತೆರೆಗೆ ಬರಲಿದೆ. ಹೀಗೆ ತೆರೆಗೆ ಬರುತ್ತಿರುವ ಈ ಎರಡು ಭಾಗಗಳಿಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ನೂರಲ್ಲ .. ಇನ್ನೂರಲ್ಲ .. ಬದಲಿಗೆ ₹ 800 ಕೋಟಿಗೂ ಅಧಿಕ ಹಣ ಹೂಡುತ್ತಿದ್ದಾರೆ ಎಂದು ಹಿಂದೆ ಸುದ್ದಿಯಾಗಿತ್ತು.

ಆದರೆ ಈಗ.. ''ಬಾಲಿವುಡ್ ಹಂಗಾಮಾ'' ವರದಿ ಮಾಡಿರುವಂತೆ.. ಚಿತ್ರಕ್ಕೆ ₹ 800 ಕೋಟಿ ಅಲ್ಲ ಬದಲಿಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ₹1600 ಕೋಟಿ ಹಣವನ್ನು ಹೂಡುತ್ತಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಯಾರು ಮಾಡಿರದ ಸಾಹಸವನ್ನು ನಮಿತ್ ಮಲ್ಹೋತ್ರಾ ಮಾಡಲು ಮುಂದಾಗಿದ್ದಾರೆ.

'' ಬಾಲಿವುಡ್ ಹಂಗಾಮಾ''ದ ಈ ವರದಿಯ ಪ್ರಕಾರ ರಾಮಾಯಣ ಚಿತ್ರದ ಮೊದಲ ಭಾಗಕ್ಕೆ ನಮಿತ್ ಮಲ್ಹೋತ್ರಾ ಈಗಾಗಲೇ ₹900 ಕೋಟಿ ಹಣವನ್ನು ನೀರಿನಂತೆ ಸುರಿದಿದ್ದಾರೆ. ಇನ್ನು, ಎರಡನೇ ಭಾಗದ ಚಿತ್ರೀಕರಣ ಇನ್ನು ಶುರುವಾಗಿಲ್ಲವಾದರೂ ಈ ಭಾಗಕ್ಕೆ ನಮಿತ್ ಮಲ್ಹೋತ್ರಾ ₹700 ಕೋಟಿ ಹಣವನ್ನು ಎತ್ತಿಟ್ಟಿದ್ದಾರೆ. ಮೊದಲ ಭಾಗಕ್ಕೋಸ್ಕರ ನಿರ್ಮಾಣ ಮಾಡಲಾದ ಅದ್ಭುತ.. ಅತ್ಯಮೋಘ.. ಅದ್ವೀತಿಯ ಸೆಟ್‌ನಲ್ಲಿಯೇ ಎರಡನೇ ಭಾಗದ ಚಿತ್ರೀಕರಣ ಕೂಡ ನಡೆಯುವ ಹಿನ್ನೆಲೆ ಎರಡನೇ ಭಾಗದ ಖರ್ಚು-ವೆಚ್ಚ ಕಡಿಮೆಯಾಗಿದೆ ಎಂದು ಇದೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೇ ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗದಲ್ಲಿ ಸಾಹಸ ಸನ್ನಿವೇಶಗಳು ಹೆಚ್ಚಿರಲಿದ್ದು ಈ ಆಕ್ಷನ್ ಸಿಕ್ವೆನ್ಸ್‌ಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ ಎಂದು ಕೂಡ ''ಬಾಲಿವುಡ್ ಹಂಗಾಮಾ'' ತನ್ನ ವರದಿಯಲ್ಲಿ ಹೇಳಿದೆ.

history-made-ramayana-starring-ranbir-yash-sets-1600-crore-budget-indias-costliest-film

ಅಂದ್ಹಾಗೇ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ಹಿಂದೆ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯದ 'ಕಲ್ಕಿ 2898AD ' ಚಿತ್ರಕ್ಕೆ ₹600 ಕೋಟಿ ಖರ್ಚಾಗಿತ್ತು. ಇದಕ್ಕೂ ಮೊದಲು ಬಂದ 'ಆರ್‌.ಆರ್‌.ಆರ್' ಮತ್ತು 'ಆದಿಪುರುಷ್' ಚಿತ್ರಕ್ಕೆ ₹550 ಕೋಟಿ ಹಣವನ್ನು ಸುರಿಯಲಾಗಿತ್ತು.

ಇನ್ನು ರೀಲ್ ರಾಮಾಯಣದ ರಾಮಾ ರಣ್ಭೀರ್ ಕಪೂರ್ ಹಿಂದೆ ತಮ್ಮ ಪತ್ನಿ ಆಲಿಯಾ ಭಟ್ ಜೊತೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಅಭಿನಯಿಸಿದ್ದರು. ವಿಎಫ್‌ಎಕ್ಸ್‌ ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿದ್ದ ಈ ಚಿತ್ರಕ್ಕೆ ₹375 ಕೋಟಿ ಹಣವನ್ನು ನಿರ್ಮಾಪಕರು ಹೂಡಿದ್ದರು.

ಆದರೆ.. ಈಗ ರಾಮಾಯಣ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ₹1600 ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಭಾರತದ ಅತ್ಯಂತ ದುಬಾರಿ ಚಿತ್ರ ಎನ್ನುವ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ. ಹೊಸದೊಂದು ದಾಖಲೆಯನ್ನು ಕೂಡ ಭಾರತೀಯ ಚಿತ್ರರಂಗದಲ್ಲಿ ಈ ಚಿತ್ರ ಬರೆದಿದೆ.ಇನ್ನುಳಿದಂತೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಮೊದಲ ಭಾಗ 2026ರ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ. ಎರಡನೇ ಭಾಗ 2027ರಲ್ಲಿ ತೆರೆಗೆ ಬರಲಿದೆ.

More from Filmibeat

English summary
The real budget is out! Ranbir Kapoor & Yash's 'Ramayana' shatters records with a colossal ₹1600 CRORE, now India's priciest movie
Read more about: yash ramayana budget
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X