»   » ಐಶ್ವರ್ಯ ರೈ ಮನೆಯಲ್ಲಿ ಹೋಳಿ ಸಂಭ್ರಮ ಹೇಗಿತ್ತು.?

ಐಶ್ವರ್ಯ ರೈ ಮನೆಯಲ್ಲಿ ಹೋಳಿ ಸಂಭ್ರಮ ಹೇಗಿತ್ತು.?

Posted By:
Subscribe to Filmibeat Kannada

ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಹೋಳಿ ಆಚರಣೆ ಅದ್ಧೂರಿಯಾಗಿ ನಡೆದಿದೆ. ಬಿಗ್ ಬಿ ಅಮಿತಾಬ್, ಐಶ್ವರ್ಯ ರೈ ಬಚ್ಚನ್, ಮಗಳು ಆರಾಧ್ಯ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಸೇರಿ ಹೋಳಿ ಹಬ್ಬವನ್ನ ಆಚರಿಸಿದ್ದಾರೆ.

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಚ್ಚನ್ ಕುಟುಂಬ ಈ ಸಡಗರದಲ್ಲಿ ಅಭಿಷೇಕ್ ಬಚ್ಚನ್ ಗೈರು ಎದ್ದು ಕಾಣುತ್ತಿದೆ. ಮೂಲಗಳ ಪ್ರಕಾರ ಅಭಿಷೇಕ್ ಬಚ್ಚನ್ ತಮ್ಮ ಮುಂದಿನ ಚಿತ್ರದಲ್ಲಿ ಬ್ಯುಸಿಯಿರುವ ಕಾರಣ ಫ್ಯಾಮಿಲಿ ಜೊತೆ ಪಾಲ್ಗೊಂಡಿಲ್ಲ ಎನ್ನಲಾಗಿದೆ.

ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

ಸಂಪ್ರದಾಯದಂತೆ ಹಳೆಯ ವಸ್ತುಗಳನ್ನ ಬೆಂಕಿಯಲ್ಲಿ ಹಾಕುವ ಪದ್ದತಿ ಹೋಳಿ ಹಬ್ಬದ ದಿನ ನಡೆಯುತ್ತೆ. ಈ ಸಂಪ್ರದಾಯವನ್ನ ಆಚರಿಸಿರುವ ಬಚ್ಚನ್ ಕುಟುಂಬ ಕಟ್ಟಿಗೆಗಳಿಂದ ಬೆಂಕಿ ಇಟ್ಟು ಅಗ್ನಿದೇವನ ಕೃಪೆಗೆ ಪಾತ್ರರಾಗಿದ್ದಾರೆ.

holi celebration in Aishwarya Rai Bahchan family

ಹೋಳಿ ಹಬ್ಬದ ಅದ್ಭುತ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿದ್ದು ಜಯಾಬಚ್ಚನ್ ಅಮಿತಾಬ್ ಹಣೆಗೆ ತಿಲಕವಿಡುತ್ತಿರುವುದು ನೋಡಲು ಸುಂದರವಾಗಿದೆ.

holi celebration in Aishwarya Rai Bahchan family

ಇನ್ನು ಮೊಮ್ಮಗಳು ಆರಾಧ್ಯ ಬಚ್ಚನ್ ಗೆ ಬಿಗ್ ಬಿ ಅಮಿತಾಬ್ ತಿಲಕವಿಟ್ಟು ಆರ್ಶೀವಾದ ಮಾಡುತ್ತಿರುವ ಫೋಟೋ ಕೂಡ ಅಷ್ಟೇ ಆಕರ್ಷಿಸುತ್ತಿದೆ.

ಅಭಿಮಾನಿಗಳಿಗೆ ಬೆದರಿಕೆಯೊಡ್ಡಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಬಿಗ್ ಶಾಕ್: ಮಂಗಳೂರಿನಲ್ಲಿ ಐಶ್ವರ್ಯ ರೈಗೊಬ್ಬ ಮಗ ಇದ್ದಾನಂತೆ.!

English summary
Superstar Amitabh Bachchan did Holika dahan at his home with Aishwarya Rai Bahchan, Aaradhya Bachchan, Jaya Bachchan and Shweta Bachchan. The actor shared some pictures on the social media with his fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada