ಹಾಟ್ ಆದ ಬೆನ್ನಲ್ಲೇ ಕಂಗನಾ ಬಗ್ಗೆ ಕೇಳಿಬರ್ತಿದೆ ಸೂಪರ್ ಡೂಪರ್ ಸುದ್ದಿ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಲೈವಿ ಸಿನಿಮಾ ಬಿಡುಗಡೆ ಎದುರು ನೋಡುತ್ತಿರುವ ಕಂಗನಾ ಇತ್ತೀಚಿಗಷ್ಟೆ ಮತ್ತೊಂದು ಬಹುನಿರೀಕ್ಷೆಯ ಧಾಕಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್‌ನಿಂದ ಕಂಗನಾ ಹಾಲಿವುಡ್‌ಗೆ ಹಾರ್ತಾರಾ ಎನ್ನುವ ಮಾತು ಚರ್ಚೆಯಾಗುತ್ತಿದೆ.

ಇತ್ತೀಚಿಗಷ್ಟೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹೊತ್ತಿಸಿದ್ದ ಕಂಗನಾ ಇದೀಗ ಹಾಲಿವುಡ್ ಸಿನಿಮಾದ ಬಗ್ಗೆ ಸದ್ದು ಮಾಡುತ್ತಿದ್ದಾರೆ. ಅಂದ ಹಾಗೆ ಬಾಲಿವುಡ್ ಕ್ವೀನ್ ಹಾಲಿವುಡ್ ಕಡೆ ಮುಖ ಮಾಡುತ್ತಾರಾ ಎನ್ನುವ ಮಾತು ಬಿ ಟೌನ್‌ನಲ್ಲಿ ಚರ್ಚೆಯಾಗಲು ಕಾರಣ ಹಾಲಿವುಡ್‌ನ ಖ್ಯಾತ ನಟನ ಟ್ವೀಟ್. ಈ ಟ್ವೀಟ್ ಕಂಗನಾಗೆ ಹಾಲಿವುಡ್‌ನಿಂದ ಆಫರ್ ಬಂದಿರುವ ಸೂಚನೆ ಸಿಕ್ಕಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಹಾಲಿವುಡ್‌ನ ಆ ಖ್ಯಾತ ನಟ ಮತ್ಯಾರು ಅಲ್ಲ ಆಸ್ಕರ್ ಪ್ರಶಸ್ತಿ ವಿಜೇತ ರಸೆಲ್ ಕ್ರೋವ್. ಹಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ರಸೆಲ್ ಅವರಿಗೆ ಭಾರತದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಕಂಗನಾ ಅಭಿಮಾನಿಗಳು ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಬೇಕೆಂದು ಆಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿ ರಸಲ್‌ಗೆ ಟ್ಯಾಗ್ ಮಾಡಿದ್ದರು.

Hollywood Actor Russell Crowe reacts to Kangana fans tweet

ಕಂಗನಾ ಟ್ವಿಟ್ಟರ್‌ನಲ್ಲಿಲ್ಲ ಆದರೆ ಅವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಆಕ್ಟೀವ್ ಆಗಿದ್ದಾರೆ. ಕಂಗನಾ ಅಭಿಮಾನಿಗಳು ಮಾಡಿದ ಟ್ವೀಟ್ ಗಮನಿಸಿದ ರಲೆಸ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿ, ಕಂಗನಾ ಜೊತೆ ನಟಿಸಲು ಸಮ್ಮತಿ ಸೂಚಿಸಿದ್ದಾರೆ.

ಕಂಗನಾ ಅಭಿಮಾನಿ ಮಾಡಿದ ಟ್ವೀಟ್ ನಲ್ಲಿ, "ಎರಡು ವಿಭಿನ್ನ ಚಲನಚಿತ್ರರಂಗದ ಇಬ್ಬರೂ ಮಹಾನ್ ಕಲಾವಿದರು. ಅಕಾಡೆಮಿ ಪ್ರಶಸ್ತಿ ವಿಜೇತ ರಸೆಲ್ ಕ್ರೋವ್ ಮತ್ತು 4 ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಒಟ್ಟಿಗೆ ಒಂದೆ ಸಿನಿಮಾ ಮಾಡಿದರೆ ಎಷ್ಟು ಚೆನ್ನಾಗಿರುತ್ತದೆ" ಎಂದು ಟ್ವೀಟ್ ಮಾಡಿ ರಸೆಲ್ ಅವರಿಗೆ ಟ್ಯಾಗ್ ಮಾಡಿದ್ದರು.

Hollywood Actor Russell Crowe reacts to Kangana fans tweet

57 ವರ್ಷದ ಖ್ಯಾತ ನಟ ರಸೆಲ್ 2000ರಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದರು. ಖ್ಯಾತ ನಟ ಅಭಿಮಾನಿಯ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿದ್ದಾರೆ. ಇದು ಕಂಗನಾ ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಈ ಬಗ್ಗೆ ಅನೇಕರು ಕಾಮೆಂಟ್ ಮಾಡಿ ಇಬ್ಬರನ್ನು ಒಟ್ಟಿಗೆ ನೋಡಲು ಬಯಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಬ್ಬರ ಚಿತ್ರಕ್ಕೆ ಕಾಯಲು ಸಾಧ್ಯವಿಲ್ಲ, ಬೇಗ ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ರಸೆಲ್ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಕಂಗನಾ ಜೊತೆ ತೆರೆ ಹಂಚಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.

Hollywood Actor Russell Crowe reacts to Kangana fans tweet

ಇನ್ನು ನಟಿ ಕಂಗನಾ ಬಳಿಯೂ ಅನೇಕ ಸಿನಿಮಾಗಳಿವೆ. ಇತ್ತೀಚಿಗಷ್ಟೆ ಧಾಕಡ್ ಸಿನಿಮಾ ಮುಗಿಸಿದ್ದಾರೆ. ಯೂರೋಪ್‌ನಲ್ಲಿ ಚಿತ್ರೀಕರಣ ಮುಗಿಸಿ ಕೊನೆಯ ದಿನದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಂಗನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಧಾಕಡ್ ಮುಗಿಯುತ್ತಿದ್ದಂತೆ ಪಂಗ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ನಿರ್ದೇಶನಕ್ಕೂ ಇಳಿದಿದ್ದಾರೆ. ಎಮರ್ಜೆನ್ಸಿ ಹೆಸರಿನಲ್ಲಿ ಸಿನಿಮಾ ಘೋಷಣೆ ಮಾಡಿದ್ದು, ನಿರ್ದೇಶನದ ತಯಾರಿ ನಡೆಸುತ್ತಿದ್ದಾರೆ.

ಇನ್ನೂ ಕಂಗನಾ ಬಳಿ ಬಹುನಿರೀಕ್ಷೆಯ ತಲೈವಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಜೀವನಾಧಾರಿತ ಸಿನಿಮಾ ಇದಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದೆ.

More from Filmibeat

English summary
Hollywood famous Actor Russell Crowe reacts to Kangana fans tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X