ಶಾರುಖ್ ಖಾನ್ ಜೊತೆ ಹೊಂಬಾಳೆ ಸಿನಿಮಾ! ವಿಜಯ್ ಕಿರಗಂದೂರು ಹೇಳಿದ್ದು ಹೀಗೆ

By ಫಿಲ್ಮಿಬೀಟ್ ಡೆಸ್ಕ್

ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಕಡಿಮೆ ಅವಧಿಯಲ್ಲಿಯೇ ಭಾರತದ ಚಿತ್ರರಂಗದ ಪ್ರಮುಖ ಹಾಗೂ ಭರವಸೆಯ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಪುನೀತ್ ರಾಜ್‌ಕುಮಾರ್ ನಟನೆಯ 'ನಿನ್ನಿಂದಲೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹೊಂಬಾಳೆ ಫಿಲಮ್ಸ್ ಇಂದು ಬೆಳೆದಿರುವ ಎತ್ತರ ಕನ್ನಡಿಗ ಹೆಮ್ಮೆ ಪಡುವಂಥಹದ್ದು.

'ಕೆಜಿಎಫ್' ಸರಣಿ ಹಿಟ್ ಬಳಿಕ 'ಕಾಂತಾರ' ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ನೀಡಿದ ಹೊಂಬಾಳೆ ಇದೀಗ ತಮ್ಮ ಬಾಹುಗಳನ್ನು ಪರಭಾಷೆಗಳ ಚಿತ್ರರಂಗಕ್ಕೂ ಚಾಚಿದ್ದು, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ. ಇದೆಲ್ಲದರ ಜೊತೆಗೆ ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಜೊತೆಗೂ ಹೊಂಬಾಳೆ ಸಿನಿಮಾ ಮಾಡಲು ಮುಂದಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಶಾರುಖ್ ಖಾನ್ ಜೊತೆ ಸಿನಿಮಾ ಮಾಡ್ತಾರಾ ವಿಜಯ್ ಕಿರಗಂದೂರು

ಶಾರುಖ್ ಖಾನ್ ಜೊತೆ ಸಿನಿಮಾ ಮಾಡ್ತಾರಾ ವಿಜಯ್ ಕಿರಗಂದೂರು

ದಕ್ಷಿಣ ಭಾರತದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಕ್ಕೆ ನೂರಾರು ಕೋಟಿ ಬಂಡವಾಳ ಹೂಡಿರುವ ಹೊಂಬಾಳೆಗೆ ಶಾರುಖ್ ಖಾನ್ ಸಿನಿಮಾ ನಿರ್ಮಾಣ ಮಾಡುವುದು ದೊಡ್ಡ ಕಸರತ್ತೇನೂ ಅಲ್ಲ. ಬಾಲಿವುಡ್‌ಗೆ ಭಾರಿ ಸ್ಟಾರ್ ನಟನೊಟ್ಟಿಗೆ ಪ್ರವೇಶಿಸುವ ಕಾರಣಕ್ಕೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಹೊಂಬಾಳೆ ಮುಂದಾಗಿರಬಹುದು ಎಂಬುದು ಅಭಿಮಾನಿಗಳ ಊಹೆ. ಆದರೆ ಈ ಬಗ್ಗೆ ಸ್ವತಃ ಹೊಂಬಾಳೆಯ ಮಾಲೀಕ, ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟನೆ ನೀಡಿದ್ದಾರೆ.

ಶಾರುಖ್ ಖಾನ್ ಜೊತೆ ಸಿನಿಮಾ: ಹೊಂಬಾಳೆ ಹೇಳಿದ್ದೇನು?

ಶಾರುಖ್ ಖಾನ್ ಜೊತೆ ಸಿನಿಮಾ: ಹೊಂಬಾಳೆ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯ್ ಕಿರಗಂದೂರು, ''ಹೊಂಬಾಳೆ ಸಿನಿಮಾ ಸಂಸ್ಥೆಯು ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದಲೂ ಹರಿದಾಡುತ್ತಿದೆ. ಆದರೆ ಅದು ಸತ್ಯವಲ್ಲ. ನಾವು ಶಾರುಖ್ ಖಾನ್ ಅವರೊಟ್ಟಿಗಾಗಲಿ, ಅವರ ತಂಡದವರೊಟ್ಟಿಗಾಗಲಿ ಈ ಬಗ್ಗೆ ಮಾತುಕತೆ ಮಾಡಿಲ್ಲ. ಸರಿಯಾದ ಚಿತ್ರಕತೆ ಸಿಗದ ಹೊರತು ನಾವು ಹಿಂದಿ ಸಿನಿಮಾ ಮಾಡುವುದಿಲ್ಲ. ಆ ಬಗ್ಗೆ ಈ ಸಂದರ್ಭದಲ್ಲಿ ಯಾವುದೇ ಯೋಜನೆಗಳಿಲ್ಲ'' ಎಂದಿದ್ದಾರೆ.

ಹಲವು ಸಿನಿಮಾಗಳ ಮೇಲೆ ಬಂಡವಾಳ

ಹಲವು ಸಿನಿಮಾಗಳ ಮೇಲೆ ಬಂಡವಾಳ

ಹೊಂಬಾಳೆ ಸಿನಿಮಾವು ಪ್ರಸ್ತುತ ಹಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ತೆಲುಗಿನಲ್ಲಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಹೊಂಬಾಳೆ ಹೂಡಿದೆ. ಮಲಯಾಳಂ ನಲ್ಲಿ ಸುಕುಮಾರ್ ನಿರ್ದೇಶಿಸಿ ನಟಿಸಲಿರುವ ಸಿನಿಮಾ ಒಂದರ ಮೇಲೆ ಹೂಡಿಕೆ ಮಾಡಿದ್ದಾರೆ. ಇನ್ನು ಕನ್ನಡದಲ್ಲಿ ಜಗ್ಗೇಶ್ ನಟಿಸಿರುವ 'ರಾಘವೇಂದ್ರ ಸ್ಟೋರ್ಸ್' ಬಿಡುಗಡೆಗೆ ರೆಡಿಯಾಗಿದೆ. ಅದರ ವಿನಯ್‌ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾದ ಮೇಲೆ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿ ನಟಿಸಿರುವ 'ಬಘೀರ' ಸಿನಿಮಾಕ್ಕೂ ಹೊಂಬಾಳೆಯದ್ದೇ ಬಂಡವಾಳ. ಇದರ ಜತೊಗೆ 'ಕಾಂತಾರ 2' ಸಿನಿಮಾಕ್ಕೂ ಬಂಡವಾಳ ತೊಡಗಿಸಿದ್ದಾರೆ. ಫಹಾದ್ ಫಾಸಿಲ್ ನಟಿಸಿರುವ 'ಧೂಮಂ'ಗೂ ಬಂಡವಾಳ ಹಾಕಿದ್ದಾರೆ. ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನದ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ. ಇನ್ನೂ ಕೆಲವು ಸಿನಿಮಾಗಳ ಮಾತುಕತೆ ಚಾಲ್ತಿಯಲ್ಲಿದೆ.

More from Filmibeat

English summary
Hombale Fims producer Vijay Kiragandur clarifies news about they making Bollywood movie with Shah Rukh Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X