ಅಕ್ಷಯ್ ಕುಮಾರ್‌ ನಟನೆಯ ಹೊಸ ಸಿನಿಮಾ ನೋಡಲಿದ್ದಾರೆ ಅಮಿತ್ ಶಾ

ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ 'ಪೃಥ್ವಿರಾಜ್' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಐತಿಹಾಸಿಕ ಕತೆಯುಳ್ಳ ಈ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಕ್ಷಯ್ ಕುಮಾರ್.

'ಪೃಥ್ವಿರಾಜ್' ಸಿನಿಮಾದ ಪ್ರಚಾರ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ. ಈ ನಡುವೆ 'ಪೃಥ್ವಿರಾಜ್' ಸಿನಿಮಾವನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವೀಕ್ಷಿಸಲಿದ್ದಾರೆ. ಅವರಿಗಾಗಿ ವಿಶೇಷ ಶೋ ಅನ್ನು ಸಹ ಅರೇಂಜ್ ಮಾಡಲಾಗಿದೆ.

ಜೂನ್ 3 ರಂದು 'ಪೃಥ್ವಿರಾಜ್' ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಆಗುವುದಕ್ಕೆ ಮೂರು ದಿನದ ಮುಂಚೆ ವಿಶೇಷ ಪ್ರೀಮಿಯರ್ ಶೋ ಅರೇಂಜ್ ಮಾಡಲಾಗಿದ್ದು, ಆ ಶೋಗೆ ಅಮಿತ್ ಶಾ ಸಹ ಆಗಮಿಸಲಿದ್ದಾರೆ.

''ಭಾರತ ಮಾತೆಯ ಹೆಮ್ಮೆಯ ಪುತ್ರ, ಸಾಮ್ರಾಟ್ ಪೃಥ್ವಿರಾಜ್‌ ಕುರಿತು ನಾವು ಮಾಡಿದ ಸಿನಿಮಾವನ್ನು ದೇಶದ ಗೃಹ ಸಚಿವ ಅಮಿತ್ ಶಾ ವೀಕ್ಷಿಸಲಿರುವುದು ನಮಗೆ ಹೆಮ್ಮೆಯ ವಿಚಾರ'' ಎಂದು ಪೃಥ್ವಿರಾಜ್ ಸಿನಿಮಾ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಹೇಳಿದ್ದಾರೆ. ಆದರೆ ಅಮಿತ್ ಶಾ ಎಲ್ಲಿ ಮತ್ತು ಯಾವಾಗ 'ಪೃಥ್ವಿರಾಜ್' ಸಿನಿಮಾ ನೋಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.

2017ರ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮೊದಲ ಬಾರಿಗೆ ನಾಯಕಿಯಾಗಿ 'ಪೃಥ್ವಿರಾಜ್' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Home Minister Amit Shah Will Watch Akshay Kumar Pruthviraj Movie

'ಪೃಥ್ವಿರಾಜ್' ಸಿನಿಮಾದ ಬಗ್ಗೆ ಮಾತನಾಡಿರುವ ಅಕ್ಷಯ್ ಕುಮಾರ್, ''ಸಿನಿಮಾದ ಟ್ರೇಲರ್‌ಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಮಗೆ ಖುಷಿಯಾಗಿದೆ. ಸಾಮ್ರಾಟ್ ಪೃಥ್ವಿರಾಜ್‌ಗೆ ನಾವು ಒಳ್ಳೆಯ ಗೌರವ ನೀಡಲು ನಿರ್ಧರಿಸಿ ಈ ಸಿನಿಮಾ ಮಾಡಿದ್ದೇವೆ. ಟ್ರೇಲರ್ ನೋಡಿದ ಜನರಿಗೆ 'ಪೃಥ್ವಿರಾಜ್' ಕುರಿತು ತಿಳಿದುಕೊಳ್ಳಲು ಆಸಕ್ತಿ ಮೂಡಿದೆ. ನಮ್ಮ ಸಿನಿಮಾದಲ್ಲಿ ಸಾಮ್ರಾಟ್ ಪೃಥ್ವಿರಾಜ್‌ ಬಗ್ಗೆ ಮಹತ್ವದ ಅಂಶಗಳನ್ನು ತೆರೆದಿಡುತ್ತಿದ್ದೇವೆ'' ಎಂದಿದ್ದಾರೆ ಅಕ್ಷಯ್ ಕುಮಾರ್.

'ಪೃಥ್ವಿರಾಜ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ಜೊತೆಗೆ, ಸಂಜಯ್ ದತ್, ಸೋನು ಸೂದ್ ಇನ್ನೂ ಹಲವು ನಟರು ಇದ್ದಾರೆ.

More from Filmibeat

English summary
Home minister Amit Shah will watch Akshay Kumar Pruthviraj movie in a special screening. Movie will release on June 03.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X