ಇಂತಹ ನಿರ್ಮಾಪಕ, ನಿರ್ದೇಶಕರಿಗೆ ನಾಚಿಕೆ ಆಗಬೇಕು.!

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಷ್ಟು ದಿನ ಸುಮ್ಮನಿದ್ದ ತನುಶ್ರೀ ದತ್ತಾ ಈಗ ಯಾಕೆ ತುಟಿ ಬಿಚ್ಚಿದ್ದಾರೆ ಎಂಬ ಅನುಮಾನ ಎಲ್ಲರಿಗೂ ಕಾಡಬಹುದು. ಆದ್ರೆ, ದಶಕದ ಹಿಂದೆ ಘಟನೆ ನಡೆದಾಗಲೇ ತನುಶ್ರೀ ದತ್ತಾ ಕೆಂಡಕಾರಿದ್ದು ಹಲವರಿಗೆ ಗೊತ್ತಿಲ್ಲ.

ಅಂದಿನ ಪತ್ರಿಕೆ ಹಾಗೂ ಮಾಧ್ಯಮಗಳು ಈ ಘಟನೆಯನ್ನ ವರದಿ ಮಾಡಿವೆ. ಆದರೆ, ಇಂದು ಸಿಗುತ್ತಿರುವ ಇಂಪ್ಯಾಕ್ಟ್ ತನುಶ್ರೀ ದತ್ತಾಗೆ ಅಂದು ಸಿಕ್ಕಿರಲಿಲ್ಲ.

'ಹಾರ್ನ್ ಓಕೆ ಪ್ಲೀಸ್' ಸೆಟ್ ನಲ್ಲಿ ನಡೆದ ಘಟನೆ ಬಗ್ಗೆ ಹೆಚ್ಚಿನ ವಿವರ ಪಡೆಯಲು ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಇತ್ತೀಚೆಗಷ್ಟೇ ರಹಸ್ಯ ಕಾರ್ಯಾಚರಣೆ ನಡೆಸಿತು. ಈ ವೇಳೆ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ತನುಶ್ರೀ ದತ್ತಾ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ.

ಹೆಣ್ಮಕ್ಕಳು ಹಾಗೂ ನಟಿಯರ ಬಗ್ಗೆ ನಿರ್ಮಾಪಕ ಸಮಿ ಸಿದ್ದಿಖಿ ಹಾಗೂ ನಿರ್ದೇಶಕ ರಾಕೇಶ್ ಸಾರಂಗ್ ಕೇವಲವಾಗಿ ಕಾಮೆಂಟ್ ಮಾಡಿದ್ದಾರೆ. ಮುಂದೆ ಓದಿರಿ...

ಋತುಸ್ರಾವ ಆಗಿರಬೇಕು

ಋತುಸ್ರಾವ ಆಗಿರಬೇಕು

''ಘಟನೆ ಬಗ್ಗೆ ನಾನು ನಿಜ ಹೇಳ್ಲಾ.? ನನಗೆ ಅನ್ಸುತ್ತೆ, ಅವತ್ತು ಆಕೆಗೆ ಋತುಸ್ರಾವ ಆಗಿರಬೇಕು. ಅದಕ್ಕೆ ಸ್ವಲ್ಪ ಮುಟ್ಟಿದ್ದಕ್ಕೂ ಕಿರಿಕಿರಿ ಮಾಡಿಕೊಂಡಿದ್ದಾಳೆ'' ಎಂದಿದ್ದಾರೆ ನಿರ್ಮಾಪಕ ಸಿಮಿ ಸಿದ್ದಿಖಿ.

ನಿರ್ದೇಶಕ ಏನಂತಾರೆ.?

ನಿರ್ದೇಶಕ ಏನಂತಾರೆ.?

''ಚೆನ್ನಾಗಿ ಪಬ್ಲಿಸಿಟಿ ಪಡೆದುಕೊಂಡು 'ಬಿಗ್ ಬಾಸ್' ಮನೆಗೆ ಹೋಗಲು ತನುಶ್ರೀ ದತ್ತಾ ಇದನ್ನೆಲ್ಲ ಮಾಡ್ತಿದ್ದಾರೆ'' ಎಂದಿದ್ದಾರೆ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ನಿರ್ದೇಶಕ ರಾಕೇಶ್ ಸಾರಂಗ್.

ಎಲ್ಲವೂ ಕಾಮನ್

ಎಲ್ಲವೂ ಕಾಮನ್

''ಇತ್ತೀಚೆಗೆ ಹುಡುಗಿಯರು ತಮ್ಮ ಬೆಡ್ ರೂಮ್ ವಿಡಿಯೋಗಳನ್ನೆಲ್ಲಾ ಇಂಟರ್ ನೆಟ್ ಗೆ ಹಾಕುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಇದೆಲ್ಲ ಕಾಮನ್. ಪಬ್ಲಿಸಿಟಿಗಾಗಿ ಕೆಲವರು ಬಟ್ಟೆ ಬಿಚ್ಚುತ್ತಾರೆ'' - ರಾಕೇಶ್ ಸಾರಂಗ್, 'ಹಾರ್ನ್ ಓಕೆ ಪ್ಲೀಸ್' ನಿರ್ದೇಶಕ.

ಕಂಪ್ಲೇಂಟ್ ಕೊಡಬಹುದಿತ್ತು.?

ಕಂಪ್ಲೇಂಟ್ ಕೊಡಬಹುದಿತ್ತು.?

''ಕೆಟ್ಟ ಹೆಸರು ಬಂದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪಬ್ಲಿಸಿಟಿ ಸಿಕ್ಕರೆ ಸಾಕು'' ಅಂತ ಹೇಳುವ ನಿರ್ದೇಶಕರು ''ಇಷ್ಟೆಲ್ಲ ಮಾತನಾಡುವ ಬದಲು ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡಬಹುದು ಅಲ್ವಾ.?'' ಅಂತ ಪ್ರಶ್ನೆ ಹಾಕುತ್ತಾರೆ.

ನಾಚಿಕೆ ಆಗಬೇಕು

ನಾಚಿಕೆ ಆಗಬೇಕು

ತನುಶ್ರೀ ದತ್ತಾ ಹಾಗೂ ನಟಿಯರ ಬಗ್ಗೆ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಕೇವಲವಾಗಿ ಮಾತನಾಡಿರುವುದನ್ನ ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ. ಇಂತಹ ನಿರ್ಮಾಪಕ, ನಿರ್ದೇಶಕರಿಗೆ ನಾಚಿಕೆ ಆಗಬೇಕು ಅಂತಿದ್ದಾರೆ. ನೀವೇನಂತೀರಿ.?

More from Filmibeat

English summary
Horn Ok Pleasss producer says Tanushree Dutta was on her periods during Nana Patekar Debacle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X