'ಕಾಮಣ್ಣ' ನಿನ್ನ ನೋಡಿದ್ದರೆ ; 'ಹೋಳಿ' ಹಬ್ಬದಲ್ಲಿ 'ಶೆರ್ಲಿನ್' ನಂಗಾ ನಾಚ್..!

ಅಂಗಾಂಗ ಪ್ರದರ್ಶನ ಮಾಡುವುದನ್ನೇ ಸಾಧನೆ ಎಂದುಕೊಂಡವರು ಶೆರ್ಲಿನ್ ಚೋಪ್ರಾ. ಬರೋಬ್ಬರಿ ಒಂದು ದಶಕದ ಹಿಂದೆಯೇ ಕಾಮಪ್ರಚೋದಕ ಚಲನಚಿತ್ರ ಕಾಮಸೂತ್ರ 3 ಮೂಲಕ ಪಡ್ಡೆ ಹೈಕಳಿಗೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಸದ್ಯಕ್ಕೆ ಹೋಳಿ ಹಬ್ಬದ ನೆಪದಲ್ಲಿ ಮತ್ತೊಮ್ಮೆ ಸಾರ್ವಜನಿಕವಾಗಿ ತಮ್ಮ ದೇಹವನ್ನ ಪ್ರದರ್ಶನಕ್ಕಿಟ್ಟು ಸುದ್ದಿಯಲ್ಲಿದ್ದಾರೆ.

ಡೀಪ್ ನೆಕ್ ಕ್ರಾಪ್ ಟಾಪ್ ಧರಿಸಿ, ಬಣ್ಣದೋಕುಳಿಯಲ್ಲಿ ಮಿಂದೆದ್ದ ಈ ಮದನಾರಿ ಕ್ರಾಪ್ ಟಾಪ್ ಗೆ ಜೀನ್ಸ್ ಅಥವಾ ಶಾರ್ಟ್ಸ್ ಹಾಕಿಕೊಳ್ಳುವುದನ್ನೇ ಇಲ್ಲಿ ಮರೆತಿದ್ದಾರೆ. ಕಾಟಾಚಾರಕ್ಕೆ ಕವರ್ ಅಪ್ ಸ್ಕರ್ಟ್ ಹಾಕಿಕೊಂಡು ಕುಣಿಯೋಣು ಬಾರಾ ಎಂದು ಅಲ್ಲಿದ್ದವರ ಕೈ ಹಿಡಿದೆಳೆದು ಕುಣಿ ಕುಣಿದಾಡಿದ್ದಾರೆ.

Hot Actress Sherlyn Chopra Snapped At Private Holi Bash

ಎಂದಿನಂತೆ ಶೆರ್ಲಿನ್ ಚೋಪ್ರಾ ಅವರ ಈ ಮಾದಕ ಅಮಲನ್ನ ಸಾಮಾಜಿಕ ಜಾಲತಾಣದ ಮೂಲಕ ಅನೇಕರು ನೆತ್ತಿಗೇರಿಸಿಕೊಂಡಿದ್ದಾರೆ. ಬಿಟ್ಟು ಬಿಡದಂಗೆ ವಿಡಿಯೋವನ್ನ ನೋಡ್ತಿದ್ದಾರೆ. ಇನ್ನೂ ಕೆಲವರು ಶೆರ್ಲಿನ್ ಚೋಪ್ರಾ ಅವರ ವಿರುದ್ದ ಸಿಡಿದೇಳುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ

ಹೋಳಿ ಹಬ್ಬಕ್ಕೆ ಅದರದ್ದೇ ಆದ ಘನತೆ ಇದೆ. ಈ ರೀತಿಯ ಅಶ್ಲೀಲ ಬಟ್ಟೆ ಧರಿಸಿ ಹಬ್ಬ ಆಚರಿಸಲು ನಾಚಿಕೆ ಆಗಲ್ವಾ ಎಂದು ಒಬ್ಬ ವ್ಯಕ್ತಿ, ಪ್ರಶ್ನಿಸಿದ್ದರೆ, ಹೋಳಿ ಹಬ್ಬದ ದಿನ ಕಾಮದಹನ ಮಾಡಲಾಗುತ್ತದೆ, ಇಂಥ ಅಶ್ಲೀಲತೆ ಮೆರೆವವರ ದಹನವಾದರೂ ದೇಶ ಉದ್ಧಾರವಾಗುತ್ತದೆ ಎಂಬ ಅಭಿಪ್ರಾಯವನ್ನ ಇನ್ನೊಬ್ಬರು ವ್ಯಕ್ತಪಡಿಸಿದ್ದಾರೆ. ಬಳೆ ತೊಟ್ಟಿದ್ದೀಯ ಹಾಗೇ ಬಟ್ಟೆಯನ್ನೂ ತೋಡಬೇಕು ತಂಗಿ ಎಂದು ಮತ್ತೊಬ್ಬರು ಹೇಳಿದರೆ, ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ದೊಡ್ಡವರ ಮಾತನ್ನ ಇನ್ನೊಬ್ಬರು ನೆನಪಿಸಿಕೊಂಡಿದ್ದಾರೆ.

ಇನ್ನೂ ಶೆರ್ಲಿನ್ ಮಾತ್ರವಲ್ಲ, ಶೆರ್ಲಿನ್ ಜೊತೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿಯನ್ನೂ ಟ್ರೋಲ್ ಮಾಡ್ತಿರುವ ಅನೇಕರು ಆತನನ್ನು ತಳ್ಳಿದರೂ ಆಕೆಯ ಹಿಂದೆಯೇ ಹೋಗುವ ಇಂಥ ಜನರಿಗೆ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಶಿವ ಮತ್ತು ಪಾರ್ವತಿಯನ್ನು ಒಂದು ಮಾಡಲು ಕಾಮಣ್ಣ ಬಾಣ ಬಿಟ್ಟ. ಆತ ನಿನ್ನನ್ನೇನಾದ್ರೂ ನೋಡಿದ್ರೆ ಅಲ್ಲಿಯೇ ಸ್ಯೂಸೈಡ್​ ಮಾಡಿಕೊಳ್ಳುತ್ತಿದ್ದ ಎಂಬ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ ಅನೇಕರು

Hot Actress Sherlyn Chopra Snapped At Private Holi Bash

ಅಂದ್ಹಾಗೇ 2018ರಿಂದ ಶೆರ್ಲಿನ್ ಚೋಪ್ರಾ ಹಿಂದಿ ಚಿತ್ರರಂಗದಲ್ಲಿ ಕೆಲಸ ಇಲ್ಲ. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳದ ಶೆರ್ಲಿನ್ ಚೋಪ್ರಾ ಸದ್ಯಕ್ಕೆ ವೆಬ್ ಸರಣಿಯೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಆ ವೆಬ್ ಸರಣಿ ಯಾವ ಕಾಲಕ್ಕೆ ಪ್ರಸಾರವಾಗುತ್ತೋ ಗೊತ್ತಿಲ್ಲ. ವಯಸ್ಕರ ನಿಯತಕಾಲಿಕೆಯಾದ ಪ್ಲೇಬಾಯ್ ಗೂ ನಗ್ನವಾಗಿ ಫೋಸ್ ನೀಡುವ ಮೂಲಕ ಈ ಹಿಂದೆ ಸಂಚಲನ ಸೃಷ್ಟಿಸಿದ್ದ ಹೆಗ್ಗಳಿಕೆ ಕೂಡ ಇವರದ್ದೇ.

ಇಂಥ ಶೆರ್ಲಿನ್ ಚೋಪ್ರಾ "ನಾನು ಬೇಡ ಎಂದರೂ ಬಲವಂತವಾಗಿ ಮುತ್ತಿಡಲು ಮುಂದಾದರು. ನನಗೆ ಭಯವಾಗಿ ಹೀಗೆಲ್ಲ ವರ್ತಿಸದಂತೆ ಕೇಳಿಕೊಂಡೆ. ಆನಂತರ ಅವರನ್ನು ತಳ್ಳಿ ಅಲ್ಲಿಂದ ಬಚಾವ್ ಆದೆ. ಕೊನೆಗೆ ಅವರಿಂದ ತಪ್ಪಿಸಿಕೊಳ್ಳಲು ಶೌಚಾಲಯದಲ್ಲಿ ಅಡಗಿ ಕುಳಿತೆ" ಎಂದು ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಮೇಲೆ ಹಿಂದೊಮ್ಮೆ ಆರೋಪವನ್ನೂ ಮಾಡಿದ್ದರು.

Hot Actress Sherlyn Chopra Snapped At Private Holi Bash

ಒಟ್ನಲ್ಲಿ ಸದ್ಯಕ್ಕೆ ಶೆರ್ಲಿನ್ ಚೋಪ್ರಾ ಅವರ ಈ ಬಣ್ಣದೋಕುಳಿ, ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗ್ತಿದೆ. ಲಕ್ಷಾಂತರ ಜನರ ಕಣ್ಣರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

More from Filmibeat

English summary
Bollywood Hot Actress Sherlyn Chopra Snapped At Private Holi Bash. Video Of Actress Goes Viral On Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X