»   » ಫೋಟೋ ಗ್ಯಾಲರಿ: ರಾಯಲ್ ಲುಕ್ ನಲ್ಲಿ ಬಿಪಾಶಾ ಹೊಸ ಝಲಕ್

ಫೋಟೋ ಗ್ಯಾಲರಿ: ರಾಯಲ್ ಲುಕ್ ನಲ್ಲಿ ಬಿಪಾಶಾ ಹೊಸ ಝಲಕ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಕೃಷ್ಣ ಸುಂದರಿ ಬಿಪಾಶಾ ಬಸು ಅವರು ತಮ್ಮ ಪ್ರೇಮಿ ಕರಣ್ ಗ್ರೋವರ್ ಸಿಂಗ್ ಅವರನ್ನು ಮದುವೆಯಾದ ನಂತರ ಹನಿಮೂನ್ ಅಂತ ವಿದೇಶದಲ್ಲಿ ಮಸ್ತ್ ಆಗಿ ಕಾಲ ಕಳೆಯುತ್ತಿದ್ದರು. ಇಲ್ಲಿಯವರೆಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಆರಾಮಾಗಿ ಮನೆಯಲ್ಲೇ ಗಂಡನ ಜೊತೆ ಕಾಲ ಕಳೆಯುತ್ತಿದ್ದರು.

ಇದೀಗ ಹೊಸದಾಗಿ ಫೋಟೋ ಶೂಟ್ ಒಂದರಲ್ಲಿ ಭಾಗವಹಿಸುವ ಮೂಲಕ ಬೀಪ್ಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಅದ್ಭುತ ಫೋಟೋ ಶೂಟ್ ನಲ್ಲಿ ಬಿಪಾಶಾ ಅವರು ಸಖತ್ ಹಾಟ್ ಮತ್ತು ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಕರಣ್ ಏನಾದ್ರೂ ನೋಡಿದ್ರೆ ಪೂರ್ತಿ ಬೋಲ್ಡ್ ಆಗಿ ಬಿಡೋದು ಗ್ಯಾರೆಂಟಿ.[ಫೋಟೋ ಕಲೆಕ್ಷನ್ ; ಬಿಪಾಶಾ-ಕರಣ್ ಮದುವೆ ಸಂಭ್ರಮದ ಅದ್ಭುತ ಕ್ಷಣಗಳು]

Hottie Actress Bipasha Basu New Photoshoot For Hi Blitz

'ಹಾಯ್ ಬ್ಲಿಟ್ಸ್' ಎಂಬ ಮ್ಯಾಗಜೀನ್ ನ ಫೋಟೋ ಶೂಟ್ ನಲ್ಲಿ ಬಿಪಾಶಾ ಬಸು ಅವರು ಪೂರ್ತಿ ಬ್ರೈಡಲ್ ಲುಕ್ ನಲ್ಲಿ ಮಿಂಚುತ್ತಿದ್ದರು. ಸ್ವಲ್ಪವೇ ಕೂದಲನ್ನು ಬಾಬ್ ಕಟ್ ಮಾಡಿಸಿರುವ ನಟಿ ಬಿಪಾಶಾ ಬಸು ಅವರು ಮೈತುಂಬಾ ಒಡವೆ ತೊಟ್ಟು ಆಕರ್ಷಕವಾಗಿ ಕಾಣಿಸುತ್ತಿದ್ದರು.

ಮಾತ್ರವಲ್ಲದೇ ಈ ಮ್ಯಾಗಜೀನ್ ನಲ್ಲಿ ನಟಿ ಬಿಪಾಶಾ ಬಸು ಅವರು ಕರಣ್ ಅವರೊಂದಿಗಿನ ರೋಮ್ಯಾಂಟಿಕ್ ದಿನಗಳು ಹಾಗೂ ಅವರಿಬ್ಬರಿಗೆ ಪ್ರೀತಿ ಆದ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.[ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್ ಮದುವೆ ಫೋಟೋ ಆಲ್ಬಂ]

ಇನ್ನು ಮುಂದೆ ರೋಮ್ಯಾಂಟಿಕ್ ಸೀನ್ ಮತ್ತು ಬಿಕಿನಿ ಹಾಕಿ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಎಂದು ಬಿಪಾಶಾ ತಿಳಿಸಿದ್ದಾರೆ.[ನವವಧು ಬಿಪಾಶಾ ಮೆಹೆಂದಿ ಸಂಭ್ರಮದಲ್ಲಿ ಬಾಲಿವುಡ್ ಗಣ್ಯರ ದಂಡು]

ಕೃಷ್ಣಸುಂದರಿ ಬಿಪಾಶಾ ಅವರ ಹೊಚ್ಚ ಹೊಸ ಫೋಟೋ ಶೂಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

-
-
-
-
-
-
-
-
-
-
English summary
The newly wed of Bollywood, Actress Bipasha Basu graces the cover of Hi Blitz's latest edition. In her latest photoshoot, Bipasha Basu can be seen donning a bridal avatar and she is looking so exquisite.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada