For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಹೊಡೆತದಿಂದ ಆಮಿರ್ ಖಾನ್ ತಪ್ಪಿಸಿಕೊಂಡಿದ್ದು ಹೇಗೆ?

  |

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾವನ್ನು ಗೆಲ್ಲಿಸಿಯೇ ತೀರಬೇಕೆಂದು ಆಮಿರ್ ಖಾನ್ ಬಹುವಾಗಿ ಪ್ರಯತ್ನಿಸುತ್ತಿದ್ದಾರೆ.

  ಹಲವು ಅಡೆ-ತಡೆಗಳನ್ನು ಎದುರಿಸಿ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗುತ್ತಿದೆ. ಅಸಲಿಗೆ ಈ ಸಿನಿಮಾ ಏಪ್ರಿಲ್ ತಿಂಗಳಲ್ಲಿಯೇ ಬಿಡುಗಡೆ ಆಗಬೇಕಿತ್ತು. ಅದೂ ಸಹ 'ಕೆಜಿಎಫ್ 2' ಎದುರು ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಬಿಡುಗಡೆ ಮುಂದೂಡಲಾಯ್ತು.

  ಜೀ ಕನ್ನಡದಲ್ಲಿ 2 ಹೊಚ್ಚ ಹೊಸ ಸೀಯಲ್: ಕಥೆ ಹೇಗಿರಲಿದೆ?ಜೀ ಕನ್ನಡದಲ್ಲಿ 2 ಹೊಚ್ಚ ಹೊಸ ಸೀಯಲ್: ಕಥೆ ಹೇಗಿರಲಿದೆ?

  ಇದೀಗ ಆಗಸ್ಟ್ 12 ಕ್ಕೆ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಿಡುಗಡೆ ಆಗುತ್ತಿದ್ದು, ತಮ್ಮ ಸಿನಿಮಾದ ಬಿಡುಗಡೆ ತಡವಾಗಿದ್ದಕ್ಕೆ ಸ್ವತಃ ಆಮಿರ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ ಅದಕ್ಕೆ ಕಾರಣ 'ಕೆಜಿಎಫ್ 2'. ತಮ್ಮ ಸಿನಿಮಾ ಹೇಗೆ 'ಕೆಜಿಎಫ್ 2' ಸಿನಿಮಾದ ಹೊಡೆತದಿಂದ ತಪ್ಪಿಸಿಕೊಂಡಿತು ಎಂದು ಸ್ವತಃ ಆಮಿರ್ ಖಾನ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

  'ಕೆಜಿಎಫ್ 2' ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು: ಆಮಿರ್ ಖಾನ್

  'ಕೆಜಿಎಫ್ 2' ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು: ಆಮಿರ್ ಖಾನ್

  'ನಮ್ಮ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗದೇ ಇದ್ದಿದ್ದು ನಮಗೆ ವರವಾಗಿಯೇ ಪರಿಣಮಿಸಿತು'' ಎಂದಿರುವ ಆಮಿರ್ ಖಾನ್, ''ಕೆಜಿಎಫ್ 2' ಸಿನಿಮಾ ಬಿಡುಗಡೆ ಸಮಯದಲ್ಲಿ ದೇಶದೆಲ್ಲೆಡೆ ಒಂದು ರೀತಿಯ ನಿರೀಕ್ಷೆ ಇತ್ತು. ನನ್ನ ಬಾಲಿವುಡ್‌ನ ಗೆಳೆಯರು ಸಹ 'ಕೆಜಿಎಫ್ 2' ಬಗ್ಗೆ ಉತ್ಸುಕರಾಗಿದ್ದರು. ನಮ್ಮ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಬೇಕಿತ್ತು, ಆದರೆ ಅದೃಷ್ಟವಶಾತ್ ನಮ್ಮ ನಮ್ಮ ಸಿನಿಮಾ ಬಿಡುಗಡೆ ತಡವಾಯ್ತು'' ಎಂದಿದ್ದಾರೆ ಆಮಿರ್.

  ವಿಎಫ್‌ಎಕ್ಸ್ ಕೆಲಸ ತಡವಾಯ್ತು: ಆಮಿರ್

  ವಿಎಫ್‌ಎಕ್ಸ್ ಕೆಲಸ ತಡವಾಯ್ತು: ಆಮಿರ್

  ''ನಮ್ಮ ಸಿನಿಮಾದ ವಿಎಫ್‌ಎಕ್ಸ್ ಕೆಲಸ ತಡವಾಯ್ತು. ನಮ್ಮ ಸಿನಿಮಾದ ವಿಎಫ್‌ಎಕ್ಸ್ ಕೆಲಸವನ್ನು ರೆಡ್ ಚಿಲ್ಲೀಸ್‌ ನವರು ಮಾಡುತ್ತಿದ್ದರು (ಶಾರುಖ್ ಒಡೆತನದ ಸಂಸ್ಥೆ) ಆದರೆ ಅನಿವಾರ್ಯ ಕಾರಣದಿಂದ ವಿಎಫ್‌ಎಕ್ಸ್ ಬೇಗ ಮುಗಿಯಲಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ತಡವಾಗಿ ನಾವು ಬಚಾವಾದೆವು, ಇಲ್ಲವಾದರೆ 'ಕೆಜಿಎಫ್ 2' ಸಿನಿಮಾದ ಜೊತೆಗೇ ನಮ್ಮ ಸಿನಿಮಾ ಬಿಡುಗಡೆ ಮಾಡಬೇಕಿತ್ತು'' ಎಂದಿದ್ದಾರೆ ಆಮಿರ್ ಖಾನ್.

  'ಕೆಜಿಎಫ್ 2' ತಂಡದ ಕ್ಷಮೆ ಕೇಳಿದ್ದ ಆಮಿರ್ ಖಾನ್

  'ಕೆಜಿಎಫ್ 2' ತಂಡದ ಕ್ಷಮೆ ಕೇಳಿದ್ದ ಆಮಿರ್ ಖಾನ್

  ಏಪ್ರಿಲ್ 14 ರಂದು ಬೈಸಾಖಿ ಹಬ್ಬವಿದ್ದು, ಆಮಿರ್ ಖಾನ್ ಮೊದಲ ಬಾರಿ ಸಿಖ್ ವ್ಯಕ್ತಿಯ ಪಾತ್ರದಲ್ಲಿ ನಟಿಸಿರುವ ಕಾರಣ ತಮ್ಮ ಸಿನಿಮಾವನ್ನು ಅದೇ ದಿನ ಬಿಡುಗಡೆ ಮಾಡಲು ನಿಶ್ಚಯಿಸಿದ್ದರು. ಆ ಕಾರಣಕ್ಕೆ ಆಮಿರ್ ಖಾನ್, ಯಶ್‌ಗೆ ಕರೆ ಮಾಡಿ ಕ್ಷಮೆ ಸಹ ಕೇಳಿದ್ದರು. ''ನಾನು ನನ್ನ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮುನ್ನ 'ಕೆಜಿಎಫ್ 2' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್, ಪ್ರಶಾಂತ್ ನೀಲ್ ಹಾಗೂ ನಾಯಕ ಯಶ್‌ಗೆ ಮನಸಾರೆ ಕ್ಷಮೆ ಕೇಳಿದೆ ಎಂದಿರುವ ಅಮೀರ್ ಖಾನ್. ನಾನು ಅವರಿಗೆ ಪತ್ರ ಬರೆದು ನನ್ನ ಸಿನಿಮಾವನ್ನು ಏಕೆ ಏಪ್ರಿಲ್ 14ರಂದೇ ಬಿಡುಗಡೆ ಮಾಡಲು ಮುಂದಾಗಿದ್ದೇನೆ ಎಂಬುದನ್ನು ವಿವರಿಸಿದೆ. ಅವರು ಸಹ ಬಹಳ ಪ್ರೀತಿಯಿಂದ ನನ್ನ ನಿರ್ಣಯವನ್ನು ಒಪ್ಪಿದರು. ಹಾಗೂ ಸಿನಿಮಾ ಬಿಡುಗಡೆ ಮಾಡುವಂತೆ ಹೇಳಿದರು'' ಎಂದಿದ್ದರು ಅಮೀರ್ ಖಾನ್.

  'ಲಾಲ್ ಸಿಂಗ್ ಚಡ್ಡ' ಸಿನಿಮಾ ಆಗಸ್ಟ್ 11 ಬಿಡುಗಡೆ

  'ಲಾಲ್ ಸಿಂಗ್ ಚಡ್ಡ' ಸಿನಿಮಾ ಆಗಸ್ಟ್ 11 ಬಿಡುಗಡೆ

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಆಗಸ್ಟ್ 11 ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ಇದಾಗಿದ್ದು, ಸಿನಿಮಾದಲ್ಲಿ ಆಮಿರ್ ಖಾನ್ ಜೊತೆಗೆ ಕರೀನಾ ಕಪೂರ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಸ್ವತಃ ಆಮಿರ್ ಖಾನ್ ಬಂಡವಾಳ ಹೂಡಿದ್ದು, ನಿರ್ದೇಶನ ಮಾಡಿರುವುದು ಅದ್ವೈತ್. ಚಿತ್ರಕತೆ ಬರೆದಿರುವುದು ಕನ್ನಡದ 'ಆ ದಿನಗಳು' ಸಿನಿಮಾದಲ್ಲಿ ನಟಿಸಿರುವ ಅತುಲ್ ಕುಲಕರ್ಣಿ. 'ಲಾಲ್ ಸಿಂಗ್ ಚಡ್ಡ' ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

  Recommended Video

  Vikrant Rona | Anup Bhandari |Salman Khan| ಎಸ್.ಪಿ.ಬಾಲಸುಬ್ರಹ್ಮಣ್ಯಂರನ್ನು ನೆನೆದ ಸಲ್ಮಾನ್ ಖಾನ್ *PressMeet
  English summary
  Aamir Khan explains how his movie Laal Singh Chaddha avoid box office clash with Yash's KGF 2. He said it is blessing in disguise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X