ಬಾಲಿವುಡ್ ಮೆಗಾ 'ಹೀರೋ' ಕೆಜಿಎಫ್ -1 ಚಿತ್ರ ಮುಂದೆ 'ಜೀರೋ' ಆಗಿದ್ದು ಹೇಗೆ?

ಇನ್ನೊಂದೆಡೆ ತಮಿಳು ಸ್ಟಾರ್ ನಟ ವಿಜಯ್ ಕೂಡ ಬೀಸ್ಟ್ ಚಿತ್ರವನ್ನು ಅದೇ ದಿನ ತೆರೆಗೆ ತರಲು ಸಜ್ಜಾಗಿದ್ದಾರೆ. ಬಾಕ್ಸಾಫೀಸ್ ಕ್ಲಾಶ್ ಕೆಜಿಎಫ್-2 ವರ್ಸಸ್ ಬೀಸ್ಟ್ ಕಾಣಲು ಸಿಗಬಹುದು. ಆದರೆ ಈ ಕ್ಲಾಶ್ ಕೇವಲ ದಕ್ಷಿಣದಲ್ಲಿ ಮಾತ್ರ ನೋಡಲು ಸಿಗಬಹುದು, ನಾರ್ಥ್ ಆಡಿಯನ್ಸ್‌ನಲ್ಲಿ ಕೆಜಿಎಫ್ ಚಿತ್ರಕ್ಕೆ ಬೀಸ್ಟ್ ಯಾವುದೇ ತರದಲ್ಲಿ ಪ್ರತಿಸ್ಪರ್ಧಿ ಆಗಲಾರದು. ಏಕೆಂದರೆ ನಾರ್ಥ್ ಆಡಿಯನ್ಸ್‌ನಲ್ಲಿ ಕೆಜಿಎಫ್ ಕಟೌಟ್ ದೊಡ್ಡದಾಗಿದೆ. ಖಂಡಿತವಾಗಿಯೂ ತಮಿಳುನಾಡಿನಲ್ಲಿ ಎರಡು ಚಿತ್ರಗಳ ಮಧ್ಯೆ ದೊಡ್ಡಮಟ್ಟದ ಪ್ರತಿಸ್ಪರ್ಧೆಯನ್ನು ಕಾಣಬಹುದಾಗಿದೆ. 2 ತೆಲುಗು ರಾಜ್ಯಗಳು ಮತ್ತು ಕರ್ನಾಟಕದಲ್ಲಿ ಮಾತ್ರ ಕೆಜಿಎಫ್-2 ಚಿತ್ರದ ಮೇಲುಗೈ ಸಾಧಿಸಲಿದೆ. ಏಕೆಂದರೆ ಪಕ್ಕದ 2 ತೆಲುಗು ರಾಜ್ಯಗಳಲ್ಲಿ ವಿಜಯ್ ಅವರಿಗಿಂತ ಯಶ್ ಅತ್ಯಂತ ಜನಪ್ರಿಯ ನಾಯಕ ನಟ, ಅಲ್ಲಿನ ಪ್ರೇಕ್ಷಕರೂ ಕೂಡ ಕನ್ನಡದ ಕೆಜಿಎಫ್-2 ಚಿತ್ರಕ್ಕಾಗಿಯೇ ಎದುರು ನೋಡುತ್ತಿದ್ದಾರೆ.

2018 ಕೆಜಿಎಫ್ -1 ವರ್ಸಸ್ ಜೀರೋ ಘರ್ಷಣೆ

2018 ಕೆಜಿಎಫ್ -1 ವರ್ಸಸ್ ಜೀರೋ ಘರ್ಷಣೆ

ಕೆಜಿಎಫ್ ಫ್ರಾಂಚೈಸಿ ಈ ದಿನ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಬಹುಮುಖ್ಯ ಕಾರಣ ಕೆಜಿಎಫ್ -1 ಚಿತ್ರದ ಯಶಸ್ಸು. ನೆನಪಿಡಬೇಕಾದ ಅಂಶ ಬಾಲಿವುಡ್ ನಲ್ಲಿ ಯಾವುದೇ ಮೂರು ಖಾನ್ ಗಳ ಚಿತ್ರವನ್ನು ಬಿಡುಗಡೆಯಾಗುವಾಗ ಅದರ ಮೊದಲ ವಾರ ಮತ್ತು ನಂತರ ಹದಿನೈದು ದಿನ ಯಾವುದೇ ಇತರ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಬಾಲಿವುಡ್ ನಲ್ಲಿ ಖಾನ್ ಗಳ ಹವಾ ರೀತಿ ಇತ್ತು. ಅದರಲ್ಲೂ ಕಿಂಗ್ ಖಾನ್ ಅಂತಲೇ ಪ್ರಸಿದ್ಧರಾಗಿದ್ದ ಶಾರುಖ್ ಖಾನ್ ಚಿತ್ರದ ಎದುರು ಬಾಲಿವುಡ್ನ ಯಾವುದೇ ಚಿತ್ರಗಳು ನಿಲ್ಲುತ್ತಿರಲಿಲ್ಲ. ಆದರೆ ಇಂತಹ ಶಾರುಖ್ ಖಾನ್ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಕನ್ನಡದ ಒಂದು ಚಿತ್ರ ಬಿಡುಗಡೆಯಾಗಿ ಅದರ ಎದುರು ಪೈಪೋಟಿಗೆ ನಿಲ್ಲುತ್ತದೆ, ಅದೇ ಕೆಜಿಎಫ್!
21ನೇ ಡಿಸೆಂಬರ್ 2018 ರ ದಿನಾಂಕದ ಬಗ್ಗೆ ಎಲ್ಲರಿಗೂ ಚೆನ್ನಾಗಿ ನೆನಪಿರಬಹುದು ಅದೇ ದಿನ ಜೀರೋ ಎಂಬ ಶಾರುಖ್ ಖಾನ್ ಚಿತ್ರವೊಂದರ ಎದುರು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಬಾಕ್ಸಾಫೀಸ್ ಸಂಘರ್ಷಕ್ಕೆ ಅಣಿಯಾಗುತ್ತದೆ.

ಯಾರಿಗೂ ಕೆಜಿಎಫ್ ಬಗ್ಗೆ ಮಾಹಿತಿ ಇರಲಿಲ್ಲ

ಯಾರಿಗೂ ಕೆಜಿಎಫ್ ಬಗ್ಗೆ ಮಾಹಿತಿ ಇರಲಿಲ್ಲ

ಮೊದಲಿನಿಂದಲೂ ಬಾಲಿವುಡ್ ಮಂದಿಗೆ ದಕ್ಷಿಣದ ಚಿತ್ರಗಳ ಬಗ್ಗೆ ಒಂದು ತರದ ಅಸಡ್ಡೆ, ಅದರಲ್ಲೂ ಕನ್ನಡ ಚಿತ್ರಗಳ ಬಗ್ಗೆ ವಿಶೇಷವಾದ ತಿರಸ್ಕಾರದ ಮನೋಭಾವನೆ ಜಾಸ್ತಿ. ಬಾಹುಬಲಿ ಫ್ರಾಂಚೈಸಿ ಆಗಾಗಲೇ ಬಾಲಿವುಡ್ಗೆ ದೊಡ್ಡ ಹೊಡೆತವನ್ನು ಕೊಟ್ಟಿತ್ತು. ಆದರೂ ಬಾಲಿವುಡ್ ಮಂದಿ ಕೆಜಿಎಫ್ ಎಂಬ ಚಿತ್ರದ ಬಗ್ಗೆ ಕೊಂಕು ಮಾತುಗಳನ್ನಾಡಿದರು. ಎಲ್ಲಿಯ ಶಾರುಖ್ ಖಾನ್? ಎಲ್ಲಿಯ ಯಶ್? ಅದರಲ್ಲೂ ಕಿಂಗ್ ಖಾನ್ ಜೀರೋ ಚಿತ್ರದ ಮುಂದೆ ಇದ್ಯಾವ ಚಿತ್ರ ಅಂತ ಕುಹಕವಾಡಿದರು.

ಬಿಡುಗಡೆಯ ಹೊತ್ತಿಗೆ ಸೀನ್ ರಿವರ್ಸ್

ಬಿಡುಗಡೆಯ ಹೊತ್ತಿಗೆ ಸೀನ್ ರಿವರ್ಸ್

ಅದು ಅಲ್ಲದೆ ಶಾರುಖ್ ಖಾನ್ ಅವರ ಜೀರೋ ಮೊದಲು ಏಕಪಕ್ಷೀಯ ಸ್ವೀಪ್ ಎಂದು ಹೇಳಲಾಯಿತು, ಚಿತ್ರ ಬಿಡುಗಡೆಯಾದ ನಂತರ ಪರಿಸ್ಥಿತಿ ಬದಲಾಯಿತು ಸಂಜೆಯ ಹೊತ್ತಿಗೆ ತೀವ್ರ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೆಜಿಎಫ್ ಬಗ್ಗೆ ಬಾಲಿವುಡ್ ಮಂದಿಗೆ ಮತ್ತು ಹಿಂದಿ ಆಡಿಯನ್ಸ್ ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಇದು ಫರ್ಹಾನ್ ಅಖ್ತರ್, ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ನ ಹಿಂದಿ ವಿತರಕರಾಗಿ ಪ್ರವೇಶಿಸಿದ್ದು ಬಾಲಿವುಡ್ ಮಂದಿಯಲ್ಲಿರೋಮಾಂಚನವನ್ನು ಉಂಟುಮಾಡಿತು. ಇಂತಹ ಖ್ಯಾತ ನಿರ್ಮಾಪಕರು ಮುಂದೆ ಬಂದಿದ್ದಾರೆ ಎಂದರೆ ಈ ಚಿತ್ರದಲ್ಲಿ ಏನು ಇದೆ ಅಂತ ಆಗ ಬಾಲಿವುಡ್ ಮಂದಿ ಕಣ್ಣು ತೆರೆದರು.

ಕೆಜಿಎಫ್ ಚಾಪ್ಟರ್ 1 ಬರೆದದ್ದು ಇತಿಹಾಸ

ಕೆಜಿಎಫ್ ಚಾಪ್ಟರ್ 1 ಬರೆದದ್ದು ಇತಿಹಾಸ

ಪ್ರಾಥಮಿಕ ವಾರದ ಪೂರ್ಣಗೊಳ್ಳುವವರೆಗೆ, ಶಾರುಖ್ ಖಾನ್ ಅವರ ಚಲನಚಿತ್ರವು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಒಂದಕ್ಕಿಂತ ಹೆಚ್ಚಿನ ಹಣವನ್ನು ಗಳಿಕೆ ಮಾಡಿತ್ತು. ಇದಕ್ಕೆ ಮುಖ್ಯ ಕಾರಣ ಜೀರೋ ಚಿತ್ರಕ್ಕೆ ಕೆಜಿಎಫ್ ಚಿತ್ರಕ್ಕಿಂತ ಹೆಚ್ಚಿನ ಥಿಯೇಟರ್ ಗಳು ದೊರೆತಿದ್ದು. ಎರಡನೇ ವಾರದಿಂದ ಟೇಬಲ್‌ಗಳು ತಿರುಗುತ್ತದೆ ಜೀರೋ ಚಿತ್ರವನ್ನು ತೆಗೆದು ಅದರ ಸ್ಥಾನದಲ್ಲಿ ಕೆಜಿಎಫ್ ಚಿತ್ರವನ್ನು ಥಿಯೇಟರ್ ಗಳಲ್ಲಿ ಪ್ರದರ್ಶನ ಮಾಡಲು ವಿತರಕರು ಮುಂದಾಗುತ್ತಾರೆ.ಯಶ್ ಅವರ ಖಡಕ್ ಲುಕ್ ಮತ್ತು ಡೈಲಾಗ್ಗಳು ಮತ್ತು ಕೆಜಿಎಫ್ ಚಿತ್ರದ ಟೋಟಲ್ ಪ್ರೆಸೆಂಟೇಶನ್ ನೋಡಿದ ಹಿಂದಿ ಆಡಿಯನ್ಸ್ ಕೂಡ ಥ್ರಿಲ್ ಆಗುತ್ತಾರೆ. ನಿಜಕ್ಕೂ SRK ಅಭಿನಯದ 'ಜೀರೋ' ಕೆಜಿಎಫ್ ಖದರ್ ಎದುರು ಜೀರೋ ಆಗಿಬಿಡುತ್ತದೆ.

ಬಾಲಿವುಡ್ ಗೆದ್ದ ಕೆಜಿಎಫ್

ಬಾಲಿವುಡ್ ಗೆದ್ದ ಕೆಜಿಎಫ್

SRK ಅವರ ಜೀರೋ ಚಲನಚಿತ್ರವು ಫ್ಲಾಪ್ ಎಂದು ಘೋಷಿಸಲಾಯಿತು. ಕೆಜಿಎಫ್ ಚಾಪ್ಟರ್ 1 ಸೂಪರ್ ಹಿಟ್ ಅಂತ ಘೋಷಣೆ ಮಾಡಲಾಗುತ್ತದೆ. ಬಾಲಿವುಡ್ ಅಂಗಳದಲ್ಲಿ ಒಬ್ಬ ಕನ್ನಡಿಗನು ಹೋಗಿ ಕಿಂಗ್ ಖಾನ್ ಚಿತ್ರಕ್ಕೆ ಸೆಡ್ಡುಹೊಡೆದು ಮಕಾಡೆ ಮಲಗಿಸಿದ ಕಾರಣಕ್ಕೆ ಕೆಜಿಎಫ್ ಪ್ರತಿಷ್ಠೆ ದೊಡ್ಡದಾಗಿದ್ದು. ಇಂತಹ ಸಾಹಸ ಹಿಂದೆ ಯಾರ ಕೈಯಿಂದಲೂ ಮಾಡಲು ಆಗಿರಲಿಲ್ಲ. ಇದರಿಂದಲೇ ಈ ಬಾರಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯ ಹಂತದಲ್ಲಿ ಬಾಲಿವುಡ್ ಮಂದಿ ಇಷ್ಟೊಂದು ಭಯಕ್ಕೆ ಬಿದ್ದಿರುವುದು. ಅಮೀರ್ ಖಾನ್ ತನ್ನ ಮಹತ್ವಾಕಾಂಕ್ಷೆಯ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಮುಂದೂಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಕೆಜಿಎಫ್ ಚಾಪ್ಟರ್ 2 ಬಹುನಿರೀಕ್ಷಿತ ಚಲನಚಿತ್ರವಾಗಿದೆ. ಇದು ಏಪ್ರಿಲ್ 14 ನೇ ತಾರೀಕು 2022 ರಂದು ಬಿಡುಗಡೆಯಾಗುತ್ತಿದೆ.

More from Filmibeat

English summary
How Bollywood mega hero became a zero in front of kgf-1. Both films were released on same date and clashed at box office. Zero, the most anticipated film was declared as flop movie, where as kgf-1 became a super hit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X