For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಶ್ರೇಯಾ ಘೋಷಾಲ್ ಮತ್ತು ಟ್ವಿಟ್ಟರ್ CEO ಪರಾಗ್‌ಗೆ ಇರುವ ನಂಟೇನು?

  |

  ಟ್ವಿಟ್ಟರ್ ಸಂಸ್ಥೆಯ ನೂತನ ಸಿಇಒ ಆಗಿ ಹೊರ ಹೊಮ್ಮಿದ್ದಾರೆ. ಭಾರತಿಯ ಪ್ರತಿಭೆ ಪರಾಗ್ ಅಗ್ರವಾಲ್. ಇದು ಭಾರತೀಯರ ಹೆಮ್ಮೆ ಮತ್ತು ಸಂತಸಕ್ಕೆ ಕಾರಣ ಆಗಿದೆ. ಪರಾಗ್ ಅವರು ಸಿಟಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

  ಎಲ್ಲೆಲ್ಲೂ ಪರಾಗ್ ಸಾಧನೆಯ ಬಗ್ಗೆ ಮಾತನಾಡಲಾಗುತ್ತಿದೆ. ಈಗ ಪರಾಗ್ ಜೊತೆಗೆ ಭಾರತೀಯ ಹೆಸರಾಂತ ಗಾಯಕಿ ಶ್ರೇಯಾ ಘೋಷಾಲ್ ಹೆಸರು ತಳುಕು ಹಾಕಿಕೊಂಡಿದೆ. ಪರಾಗ್ ಅಗ್ರವಾಲ್ ಮತ್ತು ಶ್ರೇಯಾ ಘೋಷಾಲ್ ನಡುವೆ ಇರುವ ನಂಟಿನ ಬಗ್ಗೆ ಚರ್ಚೆ ಆಗುತ್ತಿದೆ. ಪರಾಗ್ ಅಗರ್‌ವಾಲ್ ಅವರು ಶ್ರೇಯಾ ಘೋಷಾಲ್ ಅವರ ಬಹುಕಾಲದ ಗೆಳೆಯ.

  ಇದೀಗ ಪರಾಗ್ ಅವರ ಹೆಸರಿನ ಜೊತೆಗೆ ಪ್ರಸಿದ್ಧ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ಹೆಸರು ಕೆಳಿ ಬರುತ್ತಲಿರುವುದಕ್ಕೆ ಕಾರಣ. ಇವರಿಬ್ಬರು ಬಹುಕಾಲದ ಗೆಳೆಯರು ಎನ್ನುವುದು. ಪರಾಗ್ ಮತ್ತು ಶ್ರೇಯಾ ಬಾಲ್ಯದಿಂದಲೂ ಸ್ನೇಹಿತರು. ಹಾಗಾಗಿ ಅವರ ಹಳೆಯ ಟ್ವಿಟ್ಟರ್‌ ಸಂಭಾಷಣೆಗಳು ಈಗ ವೈರಲ್ ಆಗಿವೆ.

  ಶ್ರೇಯಾ ಟ್ವಿಟ್ಟರ್‌ನಲ್ಲಿ ಪರಾಗ್ ಅವರನ್ನು ಅಭಿನಂದಿಸಿದ್ದಾರೆ. ಪರಾಗ್ ಟ್ವಿಟ್ಟರ್ ಸಿಇಒ ಆದ ಬಳಿಕ ಟ್ವೀಟ್ ಮಾಡಿ ಅವರಿಗೆ ಶುಭಾಷಯ ತಿಳಿಸಿದ್ದಾರೆ. "ಅಭಿನಂದನೆಗಳು ಪರಾಗ್, ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ! ನಮಗೆ ಇದು ದೊಡ್ಡ ದಿನ, ಈ ಸುದ್ದಿಯನ್ನು ನಾವು ಸಂಭ್ರಮಿಸುತ್ತೇವೆ" ಎಂದು ಶ್ರೇಯಾಘೋಷಾಲ್ ಬರೆದುಕೊಂಡಿದ್ದಾರೆ.

  ಶ್ರೇಯಾ ಘೋಷಾಲ್ ಈ ಟ್ವೀಟ್‌ ಮಾಡುತ್ತಲೆ ಶ್ರೇಯಾ ಅವರಿಗೂ, ಪರಾಗ್ ಅವರಿಗು ಇರುವ ನಂಟು ಕೂಡ ರಿವೀಲ್ ಆಗಿದೆ. ಈ ಹಿಂದೆ ಇವರು ನಡೆಸಿರುವ ಟ್ವಿಟ್ಟರ್ ಸಂಭಾಷಣೆಗಳು ಈಗ ಗಮನ ಸೆಳೆದಿವೆ. ಅವರ ಹಳೆಯ ಫೊಟೋಗಳು ಕೂಡ ವೈರಲ್ ಆಗುತ್ತಿವೆ.

  How Is Shreya Ghoshal Related To Twitter CEO Parag Agrawal, know more

  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಇಂಜಿನಿಯರ್ ಪರಾಗ್ ಅವರು ಸ್ಟಾನ್ ಫಾರ್ಡ್ ವಿವಿಯಿಂದ ಪಿಎಚ್ ಡಿ ಪಡೆದುಕೊಂಡಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿ ಟ್ವಿಟ್ಟರ್ ಸಂಸ್ಥೆ ಸೇರಿ ಹಂತ ಹಂತವಾಗಿ ಬೆಳೆದ ಪರಾಗ್ ಅವರು ಹತ್ತು ವರ್ಷಗಳ ಸಂಸ್ಥೆಯ ಸಿಇಒ ಆಗಿ ಹೊರ ಹೊಮ್ಮಿದ್ದಾರೆ.

  Read more about: shreya ghoshal bollywood
  English summary
  How Is Singer Shreya Ghoshal Related To Twitter CEO Parag Agrawal, know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X