83ನೇ ವಯಸ್ಸಿನಲ್ಲಿ ಜೀತೇಂದ್ರಗೆ ಕುಬೇರ ವರ, ರಾತ್ರೋರಾತ್ರಿ 855 ಕೋಟಿ ರೂಪಾಯಿ ಗಳಿಸಿದ ಹಿರಿಯ ನಟ...!

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಈ ಉದ್ಯಮದಲ್ಲಿ ಹಲವಾರು ಜನ ಬೇರೆ ಬೇರೆ ವ್ಯಾಪಾರಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಸಲ್ಮಾನ್ ಖಾನ್, ವಿಜಯ್ ದೇವರಕೊಂಡ ಸೇರಿ ಕೆಲವರು ತಮ್ಮದೇ ಬ್ರ್ಯಾಂಡ್‌ನ ಬಟ್ಟೆ ಅಂಗಡಿಯನ್ನು ಹೊಂದಿದ್ದಾರೆ. ಕತ್ರಿನಾ ಕೈಫ್, ಕೃತಿ ಸನೋನ್ ಸೇರಿ ಕೆಲ ನಾಯಕಿಯರು ಸೌಂದರ್ಯ ವೃದ್ದಿಸಲು ಹಲವಾರು ವಸ್ತುಗಳನ್ನು ಮಾರುತ್ತಿದ್ದಾರೆ.

ಅನುಷ್ಕಾ ಶರ್ಮಾ, ಆಲಿಯಾ ಭಟ್ ಹೀಗೆ ಕೆಲವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಗೌರಿ ಖಾನ್, ಶಿಲ್ಪಾ ಶೆಟ್ಟಿ ಸೇರಿ ಕೆಲವರು ದುಬಾರಿಯಾದ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಹೀಗೆ ನಾನಾ ಕ್ಷೇತ್ರದಲ್ಲಿ ಇಲ್ಲಿ ಅನೇಕರು ಹೂಡಿಕೆ ಮಾಡಿದ್ದಾರೆ.

How Jeetendra Became Worth 855 Crore Overnight at the Age of 83

ಆ ಪೈಕಿ.. ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಇಲ್ಲಿ ಹಲವರು ತೋಡಗಿಸಿಕೊಂಡಿದ್ದಾರೆ. ಕಡಿಮೆ ಬೆಲೆಗೆ ಜಾಗಗಳನ್ನು ಮನೆಗಳನ್ನು ಖರೀದಿ ಮಾಡುವುದು ಆ ನಂತರ ಆ ಆಸ್ತಿಯನ್ನು ಹೆಚ್ಚಿನ ಮೊತ್ತಕ್ಕೆ ಮಾರಿ ಲಾಭ
ಮಾಡಿಕೊಳ್ಳುವ ಕೆಲಸವನ್ನು ಅಕ್ಷಯ್ ಕುಮಾರ್ ಸೇರಿ ಹಲವರು ಮಾಡುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಬಾಲಿವುಡ್‌ನ ಹಿರಿಯ ನಟ ಜೀತೆಂದ್ರ.

ಹೌದು, ಜೀತೆಂದ್ರ.. ಬಾಲಿವುಡ್‌ನ ಅಂದಕಾಲತ್ತಿಲ್‌ನ ಸೂಪರ್ ಸ್ಟಾರ್. ಆ ಕಾಲದಲ್ಲಿ ಜಂಪಿಂಗ್ ಜ್ಯಾಕ್ ಎಂದೇ ಕರೆಯಲ್ಪಡುತ್ತಿದ್ದ ಜೀತೆಂದ್ರ ಆರು ದಶಕ ಕಲಾ ಸೇವೆ ಮಾಡಿದ್ದಾರೆ. 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂಥಾ ಜೀತೇಂದ್ರ ತಮ್ಮ 83ನೇ ವಯಸ್ಸಿನಲ್ಲಿ ಕೇವಲ ಒಂದೇ ದಿನದಲ್ಲಿ ಒಂದಲ್ಲ.. ಎರಡಲ್ಲ.. ಬದಲಿಗೆ 855 ಕೋಟಿಯನ್ನು ಗಳಿಸಿದ್ದಾರೆ.

ಹೌದು, ಅಸಲಿಗೆ ಮುಂಬೈನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಅಂಧೇರಿಯಲ್ಲಿ ಜೀತೇಂದ್ರ ಒಡೆತನದ ಜಾಗ ಇದೆ. ಸುಮಾರು 2.39 ಎಕರೆ (9,664.68 ಚದರ ಮೀಟರ್ ) ಇರುವ ಈ ಭೂಮಿಯಲ್ಲಿ ಜೀತೇಂದ್ರ ಅವರದ್ದೇ ಆದ ಬಾಲಾಜಿ ಸಂಸ್ಥೆಯ ಐಟಿ ಪಾರ್ಕ್ ಇದೆ. 45,572.14 ಚದರ ಮೀಟರ್ (4,90,534 ಚದರ ಅಡಿ) ವಿಸ್ತೀರ್ಣದ ಮೂರು ಕಟ್ಟಡಗಳು ಇವೆ.

ಈ ಬೃಹತಾದ ಜಾಗವನ್ನು ಜೀತೇಂದ್ರ ತಮ್ಮ ಸ್ವಾಮ್ಯದ ಸಂಸ್ಥೆಗಳಾದ ಪ್ಯಾಂಥಿಯಾನ್ ಬಿಲ್ಡ್ ಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ತುಷಾರ್ ಇನ್ಪ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ ವತಿಯಿಂದ ಜಪಾನಿನ ಮಾಹಿತಿ ತಂತ್ರಜ್ಞಾನ ಸಮೂಹವಾದ ಎನ್‌ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್ ಮತ್ತು ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಬರೋಬ್ಬರಿ 855 ಕೋಟಿಗೆ ಮಾರಿದ್ದಾರೆ. ಭಾರತದ ಅತಿ ದೊಡ್ಡ ಡೇಟಾ ಸೆಂಟರ್ ಪೂರೈಕೆದಾರ ಮತ್ತ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಈ ಎನ್‌ಟಿಟಿ ಸಂಸ್ಥೆಯನ್ನು ಹಿಂದೆ ನೆಟ್‌ ಮ್ಯಾಜಿಕ್ ಐಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.

ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್(ಐಜಿಆರ್) ವೆಬ್‌ಸೈಟ್‌ನಲ್ಲಿ ಸ್ಕ್ವೇರ್ ಯಾರ್ಡ್ಸ್ ಪರಿಶೀಲಿಸಿದ ಆಸ್ತಿ ನೋಂದಣಿಯ ದಾಖಲೆಗಳ ಪ್ರಕಾರ ಮೇ 2025 ರಲ್ಲಿ ಈ ನಿವೇಶನ ನೋಂದಣಿಯಾಗಿದೆ ಎಂದು ವರದಿಯಾಗಿದೆ.

ಅಂದ್ಹಾಗೇ ಅಂಧೇರಿಯಲ್ಲಿ ಇತ್ತೀಚೆಗೆ ಹಲವಾರು ಬಾಲಿವುಡ್‌ ಸ್ಟಾರ್‌ಗಳು ಮನೆಯನ್ನು ಖರೀದಿ ಮಾಡಿದ್ದಾರೆ. ವೆಬ್ ಸರಣಿಗಳ ಮೂಲಕ ಮುನ್ನೆಲೆಗೆ ಬಂದ ಬಾಲಿವುಡ್ ನಟ ಜೈದೀಪ್ ಅಹ್ಲಾವತ್ ಮತ್ತು ಅವರ ಪತ್ನಿ ಜ್ಯೋತಿ ಹೂಡಾ ಅಂಧೇರಿ ಪಶ್ಚಿಮದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು. 1950 ಚದರ ಅಡಿ ಕಾರ್ಪೆಟ್ ಏರಿಯಾ ಮತ್ತು 2341 ಚದರ ಅಡಿ ಬಿಲ್ಟ್-ಅಪ್ ಏರಿಯಾ ಹೊಂದಿರುವ ಈ ಅರ್ಪಾಟ್‌ಮೆಂಟ್‌ಗೆ 10 ಕೋಟಿಯನ್ನು ದಂಪತಿ ನೀಡಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಇವರಲ್ಲದೇ

ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಅವರ ಮಗಳು ಸಯೇಶಾ ಕಪೂರ್ ಇದೇ ಅಂಧೇರಿಯಲ್ಲಿರುವ ಒಬೆರಾಯ್ ಸ್ಕೈ ಹೈಟ್ಸ್‌ನಲ್ಲಿ ಮನೆ ಖರೀದಿಸಿದ್ದಾರೆ. ಬಾಲಿವುಡ್ ಶೆಹನ್ ಷಾ ಅಮಿತಾಬ್ ಬಚ್ಚನ್ ಕೂಡ ಇತ್ತೀಚೆಗಷ್ಟೇ ಅಂಧೇರಿಯಲ್ಲಿ 8429 ಚದರ ಅಡಿಯ ಮೂರು ವಾಣಿಜ್ಯ ಕಟ್ಟಡವನ್ನು ಖರೀದಿ ಮಾಡಿದ್ದಾರೆ. ಹೀಗಿರುವಾಗ ಜೀತೇಂದ್ರ ತಮ್ಮ ಅಂಧೇರಿಯ ಆಸ್ತಿ ಮಾರಿ 855 ಕೋಟಿ ಗಳಿಸಿದ್ದಾರೆ.

More from Filmibeat

English summary
Jeetendra, 83, suddenly became worth ₹855 crore. Find out how the legendary actor gained such a huge fortune overnight.
Read more about: money property
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X