ಸೋನು ಸೂದ್ ಸೇರಿದಂತೆ ನಟ-ನಟಿಯರಿಗೆ ಅವಮಾನ: ಕಂಗನಾ ವಿಡಿಯೋ ವೈರಲ್

ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಕಂಗನಾ ರಣೌತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ಬಾಲಿವುಡ್‌ನ ಗುಂಪುಗಾರಿಕೆ, ಸ್ವಜನಪಕ್ಷಪಾತದ ವಿರುದ್ಧ ಬೆಂಕಿಯುಂಡೆಗಳನ್ನು ಉಗುಳುತ್ತಿದ್ದಾರೆ.

Recommended Video

ಕನ್ನಡಕ್ಕೆ ಪ್ರತ್ಯೇಕ Netflix , Hotstar ಮಾದರಿಯ OK | Oneindia Kannada

ಬಾಲಿವುಡ್‌ನ ದೊಡ್ಡ ನಟ, ನಿರ್ಮಾಪಕರು ಇನ್ನೂ ಹಲವರ ಹೆಸರು ಹೇಳಿ ಆರೋಪ ಮಾಡುತ್ತಿರುವ ಕಂಗನಾ ಅವರಿಗೆ ಸಾಕಷ್ಟು ಬೆಂಬಲವೂ ಈ ಬಾರಿ ವ್ಯಕ್ತವಾಗಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಜನರು ಯಾವಾಗಲೂ ಒಬ್ಬರ ಪರವಾಗಿ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಂಗನಾ ರಣೌತ್, ನಟಿ ತಾಪ್ಸಿ ಪನ್ನು ವಿರುದ್ಧ ಕೀಳು ಭಾಷೆ ಬಳಸಿದ ಬೆನ್ನಲ್ಲೆ ಕಂಗನಾರ ಕೆಲವು ವಿಡಿಯೋಗಳನ್ನು ವೈರಲ್ ಮಾಡಲಾಗಿದ್ದು, ವಿಡಿಯೋದಲ್ಲಿ ಆಕೆ, ಸಹನಟಿಯರ ಬಗ್ಗೆ ಕೀಳಾಗಿ ಮಾತನಾಡಿರುವುದು ಸ್ಪಷ್ಟವಾಗಿದೆ.

ಸೋನು ಸೂದ್‌ ಜೊತೆ ಹೇಗೆ ನಡೆದುಕೊಂಡಿದ್ದರು ಕಂಗನಾ?

ಸೋನು ಸೂದ್‌ ಜೊತೆ ಹೇಗೆ ನಡೆದುಕೊಂಡಿದ್ದರು ಕಂಗನಾ?

ಅಷ್ಟೆ ಅಲ್ಲದೆ, ಕೊರೊನಾ ಸಮಯದಲ್ಲಿ ಸರ್ಕಾರದ ಸಮಮಟ್ಟಿಗೆ ಕೆಲಸ ಮಾಡಿ ದೇಶದಾದ್ಯಂತ ನಿಜಜೀವನದ ಹೀರೋ ಆಗಿ ಮೇಲೆ ಬಂದಿರುವ ಸೋನು ಸೂದ್ ಜೊತೆ ಹಿಂದೆ ಕಂಗನಾ ಹೇಗೆ ನಡೆದುಕೊಂಡಿದ್ದರು ಎಂಬುದು ಸಹ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದೆ.

ಸಿನಿಮಾದಿಂದ ತೆಗೆದುಹಾಕಲಾಗಿತ್ತು

ಸಿನಿಮಾದಿಂದ ತೆಗೆದುಹಾಕಲಾಗಿತ್ತು

ತಮ್ಮ ಮಣಿಕರ್ಣಿಕ ಸಿನಿಮಾದಿಂದ ನಟಿ ಕಂಗನಾ ರಣೌತ್ ನಟ ಸೋನು ಸೂದ್ ಅನ್ನು ತೆಗೆದು ಹಾಕಿದ್ದರು. ಅದೂ ಕೆಲವು ದೃಶ್ಯಗಳಲ್ಲಿ ನಟಿಸಿದ ನಂತರ ವಿನಾಕಾರಣ ಸೋನು ಸೂದ್ ಅನ್ನು ಕಂಗನಾ ಸಿನಿಮಾದಿಂದ ತೆಗೆದು ಹಾಕಿದ್ದರಂತೆ. ಈ ವಿಷಯ ಈಗ ಚರ್ಚೆಯಾಗುತ್ತಿದೆ.

ಸೆಟ್‌ಗೆ ಬರಬೇಡ ಎಂದು ಸಂದೇಶ ಕಳಿಸಿದ್ದರು

ಸೆಟ್‌ಗೆ ಬರಬೇಡ ಎಂದು ಸಂದೇಶ ಕಳಿಸಿದ್ದರು

ಸೋನು ಸೂದ್ ಮಣಿಕರ್ಣಿಕಾ ಸಿನಿಮಾದಲ್ಲಿ ನಟಿಸಿದ್ದರು. 45 ದಿನ ಚಿತ್ರೀಕರಣಕ್ಕೆ ಸಹ ಹಾಜರಾಗಿದ್ದರಂತೆ, ಆದರೆ ಆ ನಂತರ ಕಂಗನಾ ಅವರು ಸೋನು ಸೂದ್ ಅನ್ನು ಸಿನಿಮಾದಿಂದ ತೆಗೆದುಹಾಕಿದರು. ಇನ್ನು ಮುಂದೆ ಸೆಟ್‌ ಗೆ ಬರಬೇಡ ಎಂದು ಸಂದೇಶವನ್ನು ಸೋನು ಸೂದ್‌ಗೆ ಕಳುಹಿಸಲಾಗಿತ್ತಂತೆ.

ಸಹ ನಟಿಯರ ಬಗ್ಗೆ ತುಚ್ಛವಾದ ಮಾತು

ಸಹ ನಟಿಯರ ಬಗ್ಗೆ ತುಚ್ಛವಾದ ಮಾತು

ಬಾಲಿವುಡ್‌ನ ಗುಂಪುಗಾರಿಕೆ ಬಗ್ಗೆ ಮಾತನಾಡುತ್ತಿರುವ ಕಂಗನಾ, ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಇಬ್ಬರು ನಟಿಯರನ್ನು ಕೆಳಮಟ್ಟದ ನಟಿಯರು ಎಂದು ಕರೆದಿದ್ದಾರೆ. ಸುಶಾಂತ್‌ ಸಿಂಗ್ ನ ಮೊದಲ ಪ್ರೇಯಸಿ ಅಂಕಿತ ಲೋಕಂಡೆ ಹಾಗೂ ಮಿಶ್ಟಿ ಚಕ್ರವರ್ತಿ ಬಗ್ಗೆಯೂ ಹೀಗೆಯೇ ಮಾತನಾಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.

'ಕಂಗನಾ ರಣೌತ್ ಒಬ್ಬ ಕಪಟಿ'

'ಕಂಗನಾ ರಣೌತ್ ಒಬ್ಬ ಕಪಟಿ'

ಸ್ವಜನಪಕ್ಷಪಾತದ ಬಗ್ಗೆ ಮಾತನಾಡುವ ಕಂಗನಾ ಒಬ್ಬ ಕಪಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಬಾಲಿವುಡ್‌ನ ಗುಂಪುಗಾರಿಕೆ, ನಟ-ನಟಿಯರಿಗೆ ಅವಮಾನ ಮಾಡುತ್ತಾರೆ ಎಂದೆಲ್ಲಾ ಮಾತನಾಡುತ್ತಿರುವ ನೀವು ಮಾಡಿರುವುದು ಏನು ಎಂದು ನೆಟ್ಟಿಜನರು ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Kangana Ranaut removed Sonu Sood from her movie Manikarnika. And she talked loosely about co actresses in the media. Video gets viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X