ಮದುವೆ ಮಾಡಿಕೊಂಡು ಯಾರು ತಾನೇ ಖುಷಿಯಾಗಿದ್ದಾರೆ ಎಂದ ನಟಿ...!
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆಯಲ್ಲಿನ ನಂಬಿಕೆಯನ್ನು ಅನೇಕರು ಕಳೆದುಕೊಳ್ಳುತ್ತಿದ್ದಾರೆ. ಮದುವೆಯ ಬದಲು ಲಿನ್ ಇನ್ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಪೂನಂ ಪಾಂಡೆ ಮದುವೆಯ ಬಾಂಧವ್ಯ ಸಂಭ್ರಮದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಹೌದು, ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ.
ಇಂಥ ಪೂನಂ ಪಾಂಡೆ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹೌದು, ಕಾರ್ಯಕ್ರಮವೊಂದರಲ್ಲಿ ಪೂನಂ ಭಾಗಿಯಾದಾಗ ಮದುವೆಯ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರವನ್ನು ನೀಡಿರುವ ಪೂನಂ ಪಾಂಡೆ ಮದುವೆ ಮಾಡಿಕೊಂಡು ಯಾರು ಸುಖವಾಗಿದ್ದಾರೆ ನೀವೆ ಹೇಳಿ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ದಿನ ನಿತ್ಯ ವಿಚ್ಛೇದನದ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ ಎಂದ ಪೂನಂ ಮದುವೆಯ ವಿಚಾರ ಖಂಡಿತವಾಗಿಯೂ ಸಂತೋಷದ ವಿಚಾರ ಅಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ ಪೂನಂ ಪಾಂಡೆ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಪರ ವಿರೋಧದ ಚರ್ಚೆಗೆ ಕಾರಣವೂ ಆಗಿದೆ. ಪ್ರಚಾರಕ್ಕೆ ಪೂನಂ ಬಾಯಿಗೆ ಬಂದ ಹಾಗೆಲ್ಲ ಮಾತನಾಡುವುದು ಇದು ಮೊದಲೇನಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅಂದ್ಹಾಗೇ ಪೂನಂ ಪಾಂಡೆ ಸೆಪ್ಟೆಂಬರ್ 11, 2020ರಲ್ಲಿ ತಮ್ಮ ಬಹುಕಾಲದ ಸ್ನೇಹಿತ ಮುಂಬೈ ಮೂಲಕ ಸ್ಯಾಮ್ ಅವರ ಜೊತೆ ಮದುವೆಯಾಗಿದ್ದರು. ಸ್ಯಾಮ್ ಜೊತೆ 07 ಜನ್ಮ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಆ ನಂತರ ಕೇವಲ ಎರಡೇ ವಾರದಲ್ಲಿ ತಮ್ಮ ಗಂಡನ ವಿರುದ್ಧ ತಿರುಗಿ ಬಿದ್ದಿದ್ದರು. ಹನಿಮೂನ್‌ನಲ್ಲಿ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ಆರೋಪಿಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಇಂತಹ ಪೂನಂ ಪಾಂಡೆ ಈಗ ಮದುವೆ ಕುರಿತು ಮಾತುಗಳನ್ನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮಾತುಗಳ ಕುರಿತು ಚರ್ಚೆಯನ್ನು ಅನೇಕರು ಮಾಡಲು ಇದು ಕೂಡ ಒಂದು ಕಾರಣ.
ಇನ್ನುಳಿದಂತೆ ಸದಾ ಹಾಟ್ ಫೋಟೋ, ವಿಡಿಯೋ, ಬೋಲ್ಡ್ ಮಾತುಗಳಿಂದ ಸುದ್ದಿಯಾಗುವ ಪೂನಂ ಪಾಂಡೆ ಹಳೆಯ ಚಾಳಿ. ಸದಾ ಕಾಲ ಒಂದಿಲ್ಲೊಂದು ವಿವಾದಾತ್ಮಕವಾದ ಹೇಳಿಕೆಯನ್ನು ನೀಡುತ್ತಾ ಪೂನಂ ಪಾಂಡೆ ಸದಾ ಲೈಮ್ ಲೈಟ್‌ನಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತಿರುತ್ತಾರೆ. ಇನ್ನೂ ಸ್ಯಾಮ್ ಬಾಂಬೆಯಿಂದ ದೂರವಾದರು ಕೂಡ ಇನ್ನೂ ಪೂನಂ ಪಾಂಡೆ ತಮ್ಮ ಮಾಜಿ ಪತಿಯ ಜೊತೆ ಸಂಪರ್ಕದಲ್ಲಿದ್ದಾರೆ. ಇನ್ನು, ಪೂನಂ ಪಾಂಡೆ ಎರಡನೇ ಮದ್ವೆಯಾಗ್ತಾರಾ ಗೊತ್ತಿಲ್ಲ. ಆದರೆ ಪೂನಂ ಪಾಂಡೆ ಅವರ ಎರಡನೇ ಮದುವೆ ಕಣ್ತುಂಬಿಕೊಳ್ಳುವ ಬಯಕೆ ಅನೇಕರಲ್ಲಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಎರಡನೇ ಮದುವೆಯ ಕುರಿತು ಪೂನಂ ಪಾಂಡೆಗೆ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಮದ್ವೆಯಿಂದ ಯಾರು ತಾನೇ ಖುಷಿಯಿಂದ ಇದ್ದಾರೆ ಎನ್ನುವ ಉತ್ತರ ಸದ್ಯಕ್ಕೆ ಸಿಕ್ಕಿದೆ.


Click it and Unblock the Notifications










