For Quick Alerts
  ALLOW NOTIFICATIONS  
  For Daily Alerts

  ಮಹಮ್ಮದ್ ಯೂಸುಫ್ ಖಾನ್ ಆಗಿದ್ದವರು ದಿಲೀಪ್ ಕುಮಾರ್ ಆಗಿ ಬದಲಾಗಿದ್ದೇಕೆ?

  |

  ಬಾಲಿವುಡ್‌ನ ಖ್ಯಾತ ನಟ, ಟ್ರ್ಯಾಜಿಡಿ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿದ್ದ ನಟ ದಿಲೀಪ್ ಇನ್ನು ನೆನಪು ಮಾತ್ರ. ಇಂದು (ಜುಲೈ 7) ಬೆಳಗ್ಗೆ ಮುಂಬೈ ಹಿಂದೂಜಾ ಆಸ್ಪತ್ರೆಯಲ್ಲಿ ದಿಲೀಪ್ ಕುಮಾರ್ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ದಿಲೀಪ್ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದು. ಚಿಕಿತ್ಸೆ ಫಲಕಾರಿಯಾಗದೆ ದಿಲೀಪ್ ಕುಮಾರ್ ಕೊನೆಯುಸಿರೆಳೆದರು.

  ನಟ ದಿಲೀಪ್ ಕುಮಾರ್ ಒಬ್ಬ ಅದ್ಭುತ ನಟ ಮಾತ್ರವಲ್ಲ ಚಿತ್ರ ಕಥೆಗಾರ ಕೂಡ ಹೌದು. ದಿಲೀಪ್ ಕುಮಾರ್ ನಿಜವಾದ ಹೆಸರು ಮಹಮ್ಮದ್ ಯೂಸುಫ್ ಖಾನ್. ಈ ಹೆಸರು ಬಹುತೇಕರಿಗೆ ತಿಳಿದಿರಲು ಸಾಧ್ಯವಿಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗಲೇ ಮಹಮ್ಮದ್ ಯೂಸುಫ್ ಖಾನ್, ದಿಲೀಪ್ ಕುಮಾರ್ ಆಗಿ ಬದಲಾಗಿದ್ದರು.

  ಅಂದಹಾಗೆ ದಿಲೀಪ್ ಕುಮಾರ್ ಹೆಸರು ಬದಲಾಯಿಸಿಕೊಂಡಿದ್ದೇಕೆ? ಮುಸ್ಲಿಂ ಆಗಿದ್ದವರು ಹಿಂದೂ ಹೆಸರಿನ ಮೂಲಕ ಗುರುತಿಸಿಕೊಂಡಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ. ಮುಂದೆ ಓದಿ..

  ಪಾಕಿಸ್ತಾನದ ಪೇಶಾವರದಲ್ಲಿ ಜನನ

  ಪಾಕಿಸ್ತಾನದ ಪೇಶಾವರದಲ್ಲಿ ಜನನ

  ನಟ ದಿಲೀಪ್ ಕುಮಾರ್ ಜನಿಸಿದ್ದು 1922 ಡಿಸೆಂಬರ್ 11ರಂದು. ಪಾಕಿಸ್ತಾನದ ಪೇಶಾವರದ ಕಿಸ್ಸಾ ಖವಾನಿ ಬಜಾರ್ ಪ್ರದೇಶದಲ್ಲಿ. ತಂದೆ ಲಾಲಾ ಗುಲಾಮ್ ಸರ್ವಾರ್ ಅಲಿ ಖಾನ್. ದೊಡ್ಡ ಭೂಮಾಲಿಕರಾಗಿದ್ದರು. ನಾಸಿಕ್‌ನ ಬಾರ್ನೆಸ್ ಶಾಲೆಯಲ್ಲಿ ದಿಲೀಪ್ ಕುಮಾರ್ ಶಿಕ್ಷಣ ಮಾಡಿದರು. ವಿಶೇಷ ಎಂದರೆ ನಟ ರಾಜ್ ಕಪೂರ್ ಬಾಲ್ಯದ ಗೆಳೆಯರಾಗಿದ್ದರು.

  ಮನೆಬಿಟ್ಟು ಓಡಿ ಹೋಗಿದ್ದ ನಟ ದಿಲೀಪ್

  ಮನೆಬಿಟ್ಟು ಓಡಿ ಹೋಗಿದ್ದ ನಟ ದಿಲೀಪ್

  ದಿಲೀಪ್ ಕುಮಾರ್ 1940ರಲ್ಲಿ ತಮ್ಮ ತಂದೆಯೊಂದಿಗೆ ವಾಗ್ವಾದ ನಡೆಸಿ ಮನೆಬಿಟ್ಟು ಪುಣೆಗೆ ಓಡಿಹೋದರು. ಆಗಿನ್ನು ದಿಲೀಪ್ ಕುಮಾರ್‌ಗೆ ಕೇವಲ 20 ವರ್ಷ. ಪುಣೆಗೆ ಬಂದ ದಿಲೀಪ್ ಕುಮಾರ್ ಕ್ಯಾಂಟೀನ್ ಗುತ್ತಿಗೆದಾರನ್ನು ಭೇಟಿಯಾಗಿ, ಕ್ಯಾಂಟೀನ್‌ನಲ್ಲಿ ಸ್ಯಾಂಡ್ ವಿಚ್ ಸ್ಟಾಲ್ ಸ್ಥಾಪಿಸಿದರು. ಇಂಗ್ಲಿಷ್ ಜ್ಞಾನದ ಆಧಾರದ ಮೇಲೆ ದಿಲೀಪ್ ಕುಮಾರ್ ಕೆಲಸ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗದರು.

  ಬಾಂಬೆ ಟಾಕೀಸ್‌ನಲ್ಲಿ ಕೆಲಸ ಪ್ರಾರಂಭ

  ಬಾಂಬೆ ಟಾಕೀಸ್‌ನಲ್ಲಿ ಕೆಲಸ ಪ್ರಾರಂಭ

  1942ರಲ್ಲಿ ಡಾ. ಮಸಾನಿಯನ್ನು ಭೇಟಿಯಾದರು. ಬಳಿಕ ಅವರು ದಿಲೀಪ್ ಕುಮಾರ್ ಅವರನ್ನು ಮಲಾಡ್‌ನ ಬಾಂಬೆ ಟಾಕೀಸ್‌ಗೆ ಕರೆದೊಯ್ದರು. ಬಾಂಬೆ ಟಾಕೀಸ್ ಮಾಲಿಕರಾಗಿದ್ದ ನಟಿ ದೇವಿಕಾ ರಾಣಿಯನ್ನು ಭೇಟಿಯಾದರು. ಉರ್ದು ಭಾಷೆಯಲ್ಲಿನ ಪ್ರಾವೀಣ್ಯತೆಯಿಂದ ದಿಲೀಪ್ ಕಥೆ ಮತ್ತು ಬರವಣಿಗೆ ವಿಭಾಗದಲ್ಲಿ ಬಾಂಬೆ ಟಾಕೀಸ್‌ನಲ್ಲಿ ಕೆಲಸಕ್ಕೆ ಸೇರಿದರು. ತಿಂಗಳಿಗೆ 1,250 ರೂ. ಸಂಬಳ ಪಡೆಯುತ್ತಿದ್ದರು.

  ಯೂಸುಫ್ ಖಾನ್ ಹೆಸರು ಬದಲಾಯಿಸಿದ ದೇವಿಕಾ ರಾಣಿ

  ಯೂಸುಫ್ ಖಾನ್ ಹೆಸರು ಬದಲಾಯಿಸಿದ ದೇವಿಕಾ ರಾಣಿ

  ಎರಡು ವರ್ಷಗಳ ಬಳಿಕ, ನಟಿ ದೇವಿಕಾ ರಾಣಿ, ದಿಲೀಪ್ ಕುಮಾರ್ ಎಂದು ಹೆಸರು ಬದಲಾಯಿಸುವಂತೆ ವಿನಂತಿ ಮಾಡಿದರು. ದಿಲೀಪ್ ಕುಮಾರ್ ಆಗಿ 1944ರಲ್ಲಿ ಜ್ವಾರ್ ಭಾಟ ಚಿತ್ರದಲ್ಲಿ ನಟಿಸಿದರು. ಹೆಸರು ಬದಲಾವಣೆಯ ಬಗ್ಗೆ ನಟ ದಿಲೀಪ್ ಕುಮಾರ್ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. "ಅವಳು (ದೇವಿಕಾ ರಾಣಿ) ಹೇಳಿದ್ದು: ಯೂಸುಫ್, ನಾನು ನಿಮ್ಮನ್ನು ನಟನಾಗಿ ಲಾಂಚ್ ಮಾಡಬೇಕೆಂದು ಯೋಚಿಸುತ್ತಿದ್ದೆ. ಸ್ಕ್ರೀನ್ ಹೆಸರನ್ನು ಪಡೆದುಕೊಳ್ಳುವುದು ಕೆಟ್ಟ ಆಲೋಚನೆಯಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದರು.

  ರೊಮ್ಯಾಂಟಿಕ್ ಸಿನಿಮಾಗಳಿಗೆ ಈ ಹೆಸರು ಸೂಕ್ತ

  ರೊಮ್ಯಾಂಟಿಕ್ ಸಿನಿಮಾಗಳಿಗೆ ಈ ಹೆಸರು ಸೂಕ್ತ

  "ಪ್ರೇಕ್ಷಕರಿಗೆ ಸಂಬಂಧ ಹೊಂದಲು ಇದು ತುಂಬಾ ಸೂಕ್ತವಾದ ಹೆಸರು. ರೊಮ್ಯಾಂಟಿಕ್ ಸಿನಿಮಾಗೆ ಹೊಂದಾಣಿಕೆಯಾಗುತ್ತೆ. ದಿಲೀಪ್ ಕುಮಾರ್ ಒಳ್ಳೆಯ ಹೆಸರು ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಸೂಕ್ತವಾದ ಹೆಸರಿನ ಬಗ್ಗೆ ಯೋಚಿಸುತ್ತಿದ್ದಾಗ ಈ ಹೆಸರು ನನ್ನ ಮನಸ್ಸಿಗೆ ಮೂಡಿತು. ನಿಮಗೆ ಹೇಗೆ ಎನಿಸುತ್ತೆ" ಎಂದು ದೇವಿಕಾ ರಾಣಿ ಹೇಳಿದ್ದನ್ನು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

  KGF 2 ರಿಲೀಸ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ Prashanth Neel | Filmibeat Kannada
  ದಿಲೀಪ್ ಕುಮಾರ್ ಆಗಿ ಪ್ರಖ್ಯಾತಿ

  ದಿಲೀಪ್ ಕುಮಾರ್ ಆಗಿ ಪ್ರಖ್ಯಾತಿ

  ಆದರೆ ಈ ಹೆಸರು ತಂದೆಗೆ ಇಷ್ಟವಿರಲಿಲ್ಲವಂತೆ. ಬಳಿಕ ಅವರ ತಂದೆ ದಿಲೀಪ್ ಕುಮಾರ್ ಹೆಸರನ್ನು ಒಪ್ಪಿಕೊಳ್ಳುವ ಜೊತೆಗೆ ಅವರ ಮಾರ್ಗವನ್ನು ಒಪ್ಪಿಕೊಂಡರು. ನಂತರ ಮಹಮ್ಮದ್ ಯೂಸುಫ್ ಖಾನ್, ದಿಲೀಪ್ ಕುಮಾರ್ ಆಗಿ ಬಾಲಿವುಡ್‌ನಲ್ಲಿ ಪ್ರಖ್ಯಾತಿ ಪಡೆದರು.

  English summary
  Bollywood Actor Dilip Kumar's real name is Muhammad Yusuf Khan. Why he changed his name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X